ಸಾರಾಂಶ
ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾದ ಎಸ್ ಬಿ ಕೃಷ್ಣೇಗೌಡ, ಕೆಂಚೇಗೌಡ, ಚಿಕ್ಕಮರಿಗೌಡ, ಜೋಗಿ ಗೌಡ, ಪ್ರಕಾಶ ಎಸ್, ಲೋಕೇಶ್ ಎಸ್ ಪಿ, ಹಿಂದುಳಿದ ವರ್ಗ, ಎ ಮೀಸಲು, ಕಾಳ ಮುತ್ತಮ್ಮ, ಹಿಂದುಳಿದ ವರ್ಗ ಬಿ, ಕಾರ್ತಿಕ್ ಕುಮಾರ್ ಕೆ, ಮಹಿಳಾ ಮೀಸಲು ಕ್ಷೇತ್ರದಿಂದ, ಸೌಮ್ಯ, ಮಂಗಳ ರವರು ಆಯ್ಕೆಯಾಗಿದ್ದಾರೆ.
ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಸೋರೇಕಾಯಿದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.
ಮುಂದಿನ ಐದು ವರ್ಷದವರಿಗೆ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೆ ಆಯ್ಕೆ ಮಾಡಬೇಕಾದ ಅಭ್ಯರ್ಥಿಗಳ ಸಂಖ್ಯೆಗೆ ಮತ್ತು ಮೀಸಲಾತಿಗೆ ಅನುಗುಣವಾಗಿ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆಗಳು ಸಮನಾಗಿದ್ದರಿಂದ ಸಂಘದ ನಿರ್ದೇಶಕರನ್ನು ಅವಿರೋಧವಾಗಿ ಚುನಾವಣೆಯ ರಿಟರ್ನಿಂಗ್ ಅಧಿಕಾರಿ ಉಮೇಶ್ ಕೆ.ಟಿ. ಘೋಷಣೆ ಮಾಡಿದರು.ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾದ ಎಸ್ ಬಿ ಕೃಷ್ಣೇಗೌಡ, ಕೆಂಚೇಗೌಡ, ಚಿಕ್ಕಮರಿಗೌಡ, ಜೋಗಿ ಗೌಡ, ಪ್ರಕಾಶ ಎಸ್, ಲೋಕೇಶ್ ಎಸ್ ಪಿ, ಹಿಂದುಳಿದ ವರ್ಗ, ಎ ಮೀಸಲು, ಕಾಳ ಮುತ್ತಮ್ಮ, ಹಿಂದುಳಿದ ವರ್ಗ ಬಿ, ಕಾರ್ತಿಕ್ ಕುಮಾರ್ ಕೆ, ಮಹಿಳಾ ಮೀಸಲು ಕ್ಷೇತ್ರದಿಂದ, ಸೌಮ್ಯ, ಮಂಗಳ ರವರು ಆಯ್ಕೆಯಾಗಿದ್ದಾರೆ. ಸಹಾಯಕ ಚುನಾವಣೆ ಅಧಿಕಾರಿಯಾಗಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಮುತ್ತುರಾಜು ಎಸ್ ಸಿ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ನೂತನವಾಗಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ನಿರ್ದೇಶಕರನ್ನು ಸೋರೇಕಾಯಿ ದೊಡ್ಡಿಯ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರು, ರೈತರು ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿದರು.