ಸಾರಾಂಶ
ಡಾ.ಶಾನ್ ರಾಕ್ ಪ್ರತಿಷ್ಠಾನವು ಕರ್ನಾಟಕದ ಮಡಿಕೇರಿ ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಯೋಗಕ್ಷೇಮ/ಆರೋಗ್ಯ ಮತ್ತು ಆಂತರಿಕ ನೆಮ್ಮದಿ ಉತ್ತೇಜಿಸುವ ಉಪಕ್ರಮವಾಗಿ, ಧ್ವನಿ ಚಿಕಿತ್ಸೆ (ಸೌಂಡ್ ಹೀಲಿಂಗ್) ಕಾರ್ಯಾಗಾರವನ್ನು ಇತ್ತೀಚೆಗೆ ಕರ್ನಾಟಕದ ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ‘ಸೋನಿಕ್ ಸೊಲೇಸ್ 5.0’ ಶೀರ್ಷಿಕೆಯಡಿ ಆಯೋಜಿಸಿತ್ತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಡಾ.ಶಾನ್ ರಾಕ್ ಪ್ರತಿಷ್ಠಾನವು ಕರ್ನಾಟಕದ ಮಡಿಕೇರಿ ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಯೋಗಕ್ಷೇಮ/ಆರೋಗ್ಯ ಮತ್ತು ಆಂತರಿಕ ನೆಮ್ಮದಿ ಉತ್ತೇಜಿಸುವ ಉಪಕ್ರಮವಾಗಿ, ಧ್ವನಿ ಚಿಕಿತ್ಸೆ (ಸೌಂಡ್ ಹೀಲಿಂಗ್) ಕಾರ್ಯಾಗಾರವನ್ನು ಇತ್ತೀಚೆಗೆ ಕರ್ನಾಟಕದ ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ‘ಸೋನಿಕ್ ಸೊಲೇಸ್ 5.0’ ಶೀರ್ಷಿಕೆಯಡಿ ಆಯೋಜಿಸಿತ್ತು.‘ನಿಮ್ಮೊಳಗೆ ಹಿತವನ್ನು ಕಂಡುಕೊಳ್ಳಿ, ದೇಹ ಮತ್ತು ಆತ್ಮಗಳ ಸಶಕ್ತೀಕರಣ, ಆರೈಕೆ, ಮನಸ್ಸುಗಳ ಚಿಕಿತ್ಸೆಗಾಗಿ ಧ್ವನಿ ಚಿಕಿತ್ಸೆ’ ಶಿರೋನಾಮೆಯಡಿಯಲ್ಲಿ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಡಾ.ಶಾಮ್ ರಾಕ್ ಮತ್ತು ಕುಮಾರಿ ಶಿಲ್ಪಿ ದಾಸ್ ಕಾರ್ಯಾಗಾರದ ನೇತೃತ್ವ ವಹಿಸಿದ್ದರು.
ವಿರಾಜಪೇಟೆಶಾಸಕ ಎ.ಎಸ್.ಪೊನ್ನಣ್ಣ, ಗೋಣಿಕೊಪ್ಪ ಗ್ರಾಪಂ ಅಧ್ಯಕ್ಷ ಪ್ರಮೋದ್ ಗಣಪತಿ ಉದ್ಘಾಟಿಸಿದರು. ಕಾರಾಗೃಹದ ಉಪಾಧೀಕ್ಷಕ ಸಂಜಯ್ ದತ್ತಿ ಅಧ್ಯಕ್ಷತೆ ವಹಿಸಿದ್ದರು. 160ಕ್ಕೂ ಹೆಚ್ಚು ಕೈದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ನಿರ್ವಿಶೀಕರಣ, ಒತ್ತಡ ಕಡಿಮೆ ಮಾಡುವುದು ಮತ್ತು ಭಾವನೆಗಳ ನಿಯಂತ್ರಣಗಳನ್ನೊಳಗೊಂಡ ಧ್ವನಿ ಚಿಕಿತ್ಸೆಯ ಪ್ರಯೋಜನಗಳ ಅನುಭವ ಪಡೆದುಕೊಂಡರು.ಕೈದಿಗಳ ಮೇಲೆ ಕಾರ್ಯಾಗಾರದ ಸಕಾರಾತ್ಮಕ ಪರಿಣಾಮಗಳ ಕುರಿತು ತಿಳಿಸಿಕೊಟ್ಟು ಮಾತನಾಡಿದ ಸಂಜಯ್ ದತ್ತಿ ಪ್ರತಿಷ್ಠಾನದ ಪ್ರಯತ್ನಗಳನ್ನು ಶ್ಲಾಘಿಸಿದರು.
ಡಾ.ಶರಣ್ ರಾಕ್ ಮಾತನಾಡಿ ಅಪರಾಧಿ ನಡವಳಿಕೆ ಹೆಚ್ಚಾಗಿ ಅಂತರ್ಗತ ಲಕ್ಷಣವಾಗಿರದೇ ಸನ್ನಿವೇಶಾನುಸಾರ ಸಾಂದರ್ಭಿಕವಾಗಿ ಬೇರು ಬಿಟ್ಟಿರುತ್ತದೆ. ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ತಮ್ಮ ಭಾವನೆಗಳನ್ನು ನಿಭಾಯಿಸುವ ಮತ್ತು ಹಿಂದು ಮುಂದು ನೋಡದೇ ಆವೇಶಭರಿತ ಆಯ್ಕೆಗಳನ್ನು ತಪ್ಪಿಸುವ ಸಾಧನಗಳೊಂದಿಗೆ ಸಜ್ಜುಗೊಳಿಸಲಾಗುವುದು ಎಂದರು.ಕ್ಯಾನ್ಸರ್ ರೋಗಿಗಳು, ಸರ್ಕಾರಿ ಶಾಲೆಗಳು ಮತ್ತು ಹಿರಿಯ ನಾಗರಿಕರ ವಸತಿಗಳು ಸೇರಿದಂತೆ ವಿವಿಧ ಸಮುದಾಯಗಳಿಗೆ ಚಿಕಿತ್ಸಾ ಅಧಿವೇಶನಗಳನ್ನು ಮತ್ತು ತಾಳವಾದ್ಯ ವಾದಕರು ಮತ್ತು ನರ್ತಕರ ಸಂವಹನಾತ್ಮಕ ಸಮ್ಮೇಳನಗಳನ್ನು ಡಾ.ಶರಣ್ ರಾಕ್ ಪ್ರತಿಷ್ಠಾನವು ಆಯೋಜಿಸುತ್ತದೆ.