7 ಗಂಟೆಯಲ್ಲಿ 20 ಎಕರೆ ಬಿತ್ತನೆ ಹೊಸ ದಾಖಲೆ

| Published : Jul 10 2024, 12:33 AM IST

7 ಗಂಟೆಯಲ್ಲಿ 20 ಎಕರೆ ಬಿತ್ತನೆ ಹೊಸ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತನ ಬೆನ್ನೆಲುಬಾಗಿ ನಿಂತಿರುವ ಎತ್ತುಗಳು ರೈತಾಪಿ ವರ್ಗಕ್ಕೆ ಬಸವಣ್ಣ ಎಂತಲೆ ಖ್ಯಾತಿ ಗಳಿಸಿವೆ. ಅಂಥಾ ಜೋಡೆತ್ತುಗಳು ಕೇವಲ ಏಳು ಗಂಟೆಗಳಲ್ಲಿ ಇಪ್ಪತ್ತು ಎಕರೆ ಹತ್ತಿ ಬಿತ್ತಿದ ಜಮೀನಿನಲ್ಲಿ ಗಳೆ ಹೊಡೆಯುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿವೆ.

ಕನ್ನಡಪ್ರಭ ವಾರ್ತೆ ಸುರಪುರ

ರೈತನ ಬೆನ್ನೆಲುಬಾಗಿ ನಿಂತಿರುವ ಎತ್ತುಗಳು ರೈತಾಪಿ ವರ್ಗಕ್ಕೆ ಬಸವಣ್ಣ ಎಂತಲೆ ಖ್ಯಾತಿ ಗಳಿಸಿವೆ. ಅಂಥಾ ಜೋಡೆತ್ತುಗಳು ಕೇವಲ ಏಳು ಗಂಟೆಗಳಲ್ಲಿ ಇಪ್ಪತ್ತು ಎಕರೆ ಹತ್ತಿ ಬಿತ್ತಿದ ಜಮೀನಿನಲ್ಲಿ ಗಳೆ ಹೊಡೆಯುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿವೆ.

ತಾಲೂಕಿನ ಕೆಂಭಾವಿ ಪಟ್ಟಣ ಸಮೀಪದ ಮಲ್ಲಾ ಗ್ರಾಮದ ಚಂದಪ್ಪ ಪೂಜಾರಿ ಎಂಬ ರೈತನ ಎತ್ತುಗಳು ಮಂಗಳವಾರ ಸತತ ಏಳು ಗಂಟೆಗಳ ಕಾಲ ಜೋಡು ದಿಂಡಿನ ಮೂಲಕ ಬಿತ್ತಿತ ಹೊಲದಲ್ಲಿ ಕಳೆ ತೆಗೆಯಲು ಗಳೆ ಹೊಡೆಯುವ ಮೂಲಕ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿವೆ.

ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ನಿರಂತರ ಯಾವುದೇ ಆಯಾಸವಿಲ್ಲದೆ ರೈತರಿಗೆ ಈ ಎತ್ತುಗಳು ಸಾರ್ಥ ನೀಡಿದ್ದು, ರೈತರ ಜಮೀನನ್ನು ಕಳೆ ತೆಗೆಯುವ ಮೂಲಕ ಸ್ವಚ್ಚಗೊಳಿಸಿವೆ.

ಗ್ರಾಮದ ಅನೇಕ ರೈತರು ಈ ಜೋಡೆತ್ತಗಳ ಸಾಹಸ ವೀಕ್ಷಿಸಿ ಬಸವಣ್ಣನ ಬೆನ್ನು ಚಪ್ಪರಿಸಿ ಖುಷಿ ಪಟ್ಟರು. ಸಿದ್ಧರಾಜ, ರೇವಣಸಿದ್ದ, ಸತೀಶ ಪೂಜಾರಿ, ದೇವೇಂದ್ರ ಮ್ಯಾಗೇರಿ ಸಾಥ್ ನೀಡಿದರು.

ಕೆಂಭಾವಿ ಹಿರಿಯ ರೈತ ಮುಖಂಡ ಮಹಿಪಾಲರೆಡ್ಡಿ ಡಿಗ್ಗಾವಿ ಮಾತನಾಡಿ, ರೈತನ ಜೊತೆಯಾಗಿ ಆಯಾಸವಿಲ್ಲದೆ ಕೆಲಸ ಮಾಡುತ್ತಿರುವ ಎತ್ತುಗಳ ಕಾರ್ಯ ಶ್ಲಾಘನೀಯ. ಮಲ್ಲಾ ಗ್ರಾಮದ ಈ ಎತ್ತುಗಳ ಸಾಹಸಕ್ಕೆ ಎಲ್ಲ ರೈತರು ತಲೆ ಬಾಗಲೆಬೇಕು. ಪಶು ಇಲಾಖೆ ಇಂಥಾ ಸಾಹಸಮಯ ಜಾನುವಾರುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.