ಸಾರಾಂಶ
ನಕಲಿ ಅಬ್ದುಲ್ ಕಲಾಂ ಸಂಸ್ಥೆಯ ಪದಾಧಿಕಾರಿಗಳ ಮಾತು ಕೇಳಿ ಉಪನಿರ್ದೇಶಕರ ಸರ್ಕಾರಿ ಆದೇಶ ನೋಡಿ ಉದ್ಯೋಗ ಸಿಗುತ್ತೆ ಎಂದು ನಂಬಿಕೊಂಡು ಲಕ್ಷಾಂತರ ರು.ನೀಡಿ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕೊನೆಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ನಿಂತಿದ್ದು ನೊಂದ ಮಹಿಳೆಯರಿಗೆ ಅಭಯ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಕಲಿ ಅಬ್ದುಲ್ ಕಲಾಂ ಸಂಸ್ಥೆಯ ಪದಾಧಿಕಾರಿಗಳ ಮಾತು ಕೇಳಿ ಉಪನಿರ್ದೇಶಕರ ಸರ್ಕಾರಿ ಆದೇಶ ನೋಡಿ ಉದ್ಯೋಗ ಸಿಗುತ್ತೆ ಎಂದು ನಂಬಿಕೊಂಡು ಲಕ್ಷಾಂತರ ರು.ನೀಡಿ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕೊನೆಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ನಿಂತಿದ್ದು ನೊಂದ ಮಹಿಳೆಯರಿಗೆ ಅಭಯ ನೀಡಿದ್ದಾರೆ.ರೈತ ನಾಯಕ ಅಣಗಳ್ಳಿ ಬಸವರಾಜು ನೇತೖತ್ವದಲ್ಲಿ ಡಿವೈಎಸ್ಪಿ ಕಚೇರಿ ಮುಂದೆ ನ್ಯಾಯ ಕೇಳಲು ಜಮಾಯಿಸಿದ್ದ ಸ್ಥಳಕ್ಕೆ ಆಗಮಿಸಿದ ಎಸ್ಪಿ ಡಾ. ಕವಿತಾ ಮಾತನಾಡಿ, ಕೊನೆಗೂ ಸಂತ್ರಸ್ತರ ಸಂಕಷ್ಟ ಆಲಿಸಿ ಕೆಲಕಾಲ ಚರ್ಚಿಸಿದ ಬಳಿಕ ನಿಮ್ಮ ಪರ ನಾನಿದ್ದೇನೆ. ಡಿವೈಎಸ್ಪಿ ಧಮೇಂದ್ರ ಅವರು ಈ ಪ್ರಕರಣವನ್ನು ಪ್ರಮಾಣಿಕವಾಗಿ ನಿಭಾಯಿಸಿ ನಿಮಗೆ ವಂಚಿಸಿದರನ್ನು ಕರೆಸಿ ನ್ಯಾಯ ಸಲ್ಲಿಸುವಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ನೀವು ದೂರು ನೀಡಿದರೆ ಪ್ರಕರಣ ದಾಖಲಿಸಿ 24 ಗಂಟೆಯೊಳಗೆ ಆರೋಪಿಗಳ ಬಂಧನಕ್ಕೆ ನಾವು ಸಿದ್ದರಿದ್ದೇವೆ. ವಂಚಿಸಿದರನ್ನು ಕರೆಸಿ ನಿಮ್ಮ ಸಮ್ಮುಖದಲ್ಲಿಯೇ ನ್ಯಾಯ ಕೊಡುತ್ತೇವೆ. ನನಗೆ ಸ್ವಲ್ಪ ಕಾಲಾವಕಾಶ ನೀಡಿ ಎಂದರು.
ನೊಂದ ಮಹಿಳೆಯರು ಡಿಡಿಪಿಐ ನೀಡಿದ ಆದೇಶ ನಕಲಿ ಕಲಾಂ ಸಂಸ್ಥೆಯವರು ವಿವಿಧ ಶಾಲೆಗಳಿಗೆ ನೀಡಿದ ಆದೇಶ ಹಾಗೂ ಸಂಸ್ಥೆಯ ಕೆಲವರಿಗೆ ಹಣ ಸಂದಾಯ ಮಾಡಿದ ದಾಖಲೆಗಳನ್ನು ತೋರಿಸಿ ತಮ್ಮ ಅಳಲು ತೋಡಿಕೊಂಡರು. ಡಿವೈಎಸ್ಪಿ ಧಮೇಂದ್ರ ಮಾತನಾಡಿ, ನಾನು ಎಸ್ಪಿ ಸೂಚನೆ ಮೇರೆಗೆ ಈ ಪ್ರಕರಣದಲ್ಲಿ ನಿಮಗೆ ವಂಚನೆ ಮಾಡಿದರವನ್ನು ಠಾಣೆಗೆ ಕರೆಸಿ ಖಂಡಿತ ನ್ಯಾಯ ಸಲ್ಲಿಸುವೆ ಎಂದರು.