ಸಾರಾಂಶ
ಗ್ರಾಮೀಣ ಜನರ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಡಯಾಲಿಸಿಸ್ ಘಟಕವನ್ನು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ತಾಲೂಕಿನ ಜನರು ದೂರದ ಮೈಸೂರು, ಹಾಸನ, ಮಂಡ್ಯ, ಬೆಂಗಳೂರು ನಗರಗಳಲ್ಲಿ ಚಿಕಿತ್ಸೆಗೆ ಅವಲಂಬಿಸಿದ್ದರು. ಇಂದು ಪಟ್ಟಣದಲ್ಲಿಯೇ ಆರಂಭವಾಗಿರುವುದು ಅನುಕೂಲವಾಗಲಿದೆ.
ಕೆ.ಆರ್.ಪೇಟೆ: ಪಟ್ಟಣದ ನ್ಯೂ ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾದ ಡಯಾಲಿಸಿಸ್ ಘಟಕವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಗ್ರಾಮೀಣ ಜನರ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಡಯಾಲಿಸಿಸ್ ಘಟಕವನ್ನು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ತಾಲೂಕಿನ ಜನರು ದೂರದ ಮೈಸೂರು, ಹಾಸನ, ಮಂಡ್ಯ, ಬೆಂಗಳೂರು ನಗರಗಳಲ್ಲಿ ಚಿಕಿತ್ಸೆಗೆ ಅವಲಂಬಿಸಿದ್ದರು. ಇಂದು ಪಟ್ಟಣದಲ್ಲಿಯೇ ಆರಂಭವಾಗಿರುವುದು ಅನುಕೂಲವಾಗಲಿದೆ ಎಂದು ಹೇಳಿದರು.
ಆಸ್ಪತ್ರೆ ತಜ್ಞ ವೈದ್ಯ ಡಾ.ಕಿರಣ್ ಮಾತನಾಡಿದರು. ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಬಿ.ಸುಮಾರಾಣಿ, ಆನಂದೇಗೌಡ, ವೈದ್ಯರಾದ ಡಾ. ನಿರೂಪರಾಜ್, ಡಾ.ಪ್ರಜ್ವಲ್, ಡಾ.ಚಿರಾಗ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಪುರಸಭೆ ಸದಸ್ಯ ಕೆ.ಎಸ್. ಪ್ರಮೋದ್ ಕುಮಾರ್, ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಅಪೂರ್ವ ಅನಿಲ್, ಆಡಳಿತಾಧಿಕಾರಿ ಅವಿನಾಶ್ ಸೇರಿ ಹಲವರು ಇದ್ದರು.