26ರಂದು ಇಲ್ಲಿನ ಕೋಡಿಬೆಂಗ್ರೆಯಲ್ಲಿ ನಡೆದ ಬೋಟ್‌ ದುರಂತದಲ್ಲಿ 3 ಮಂದಿ ಹೊರಜಿಲ್ಲೆಯ ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು, ಇನ್ನು ಮುಂದೆ ಪ್ರವಾಸಿ ಬೋಟ್‌ನಲ್ಲಿ ಪ್ರವಾಸಿಗರು ಲೈಫ್‌ ಜಾಕೆಟ್‌ ಧರಿಸುವುದು ಕಡ್ಡಾಯ ಎಂದು ಆದೇಶ

ಉಡುಪಿ: ಜ. 26ರಂದು ಇಲ್ಲಿನ ಕೋಡಿಬೆಂಗ್ರೆಯಲ್ಲಿ ನಡೆದ ಬೋಟ್‌ ದುರಂತದಲ್ಲಿ 3 ಮಂದಿ ಹೊರಜಿಲ್ಲೆಯ ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು, ಇನ್ನು ಮುಂದೆ ಪ್ರವಾಸಿ ಬೋಟ್‌ನಲ್ಲಿ ಪ್ರವಾಸಿಗರು ಲೈಫ್‌ ಜಾಕೆಟ್‌ ಧರಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ.ಆದರೆ, ಅದೇ ದಿನ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಬೋಟಿನಲ್ಲಿ ತೆರಳಿದ ಉಸ್ತುವಾರಿ ಸಚಿವೆ, ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ಲೈಫ್‌ ಜಾಕೆಟ್‌ ಧರಿಸದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.ಪ್ರಸ್ತುತ ಬೋಟಿನಲ್ಲಿ ತುರ್ತು ಸಂದರ್ಭಗಳಲ್ಲಿ ಲೈಫ್ ಜಾಕೆಟ್ ಧರಿಸಬೇಕು ಎಂಬ ನಿಯಮ ಇದೆ, ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿ, ಬೋಟಿನ ಪ್ರಯಣಾದುದ್ದಕ್ಕೂ ಲೈಫ್ ಜಾಕೆಟ್ ಧರಿಸಬೇಕು, ಧರಿಸದ ಪ್ರಯಾಣಿಕರಿಗೆ ದಂಡ ವಿಧಿಸಬೇಕು ಎಂಬ ನಿಯಮ ಜಾರಿಗೆ ತರಲು ಯೋಚಿಸಲಾಗಿದೆ ಎಂದಿದ್ದಾರೆಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರವಾಸಿ ಬೋಟುಗಳ ನೋಂದಣಿ ಕಡ್ಡಾಯಗೊಳಿಸಲಾಗಿದೆ, ನೋಂದಣಿ ಆಗಿಲ್ಲದಿದ್ದರೆ ಅದಕ್ಕೆ 45 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.