ಸದನ ಎಂದರೆ ಒಂದು ಕುಟುಂಬದ ರೀತಿ ಇರುವಂತದ್ದು. ಕುಟುಂಬ ಚೆನ್ನಾಗಿ ನಡೆಸಿಕೊಂಡು ಹೋಗುವುದು ಸಭಾಧ್ಯಕ್ಷನ ಜವಾಬ್ದಾರಿ. ಅದರ ಒಳಗಡೆ ಆಗಿರುವುದನ್ನು ಹೊರಗಡೆ ಮಾತನಾಡಲು ಇಷ್ಟಪಡುವುದಿಲ್ಲ. ದಕ್ಷಿಣ ಕನ್ನಡ, ಕರಾವಳಿಗೆ ಹಿಂದೆ ವಿಶೇಷ ಗೌರವ ಇತ್ತು, ಎಲ್ಲ ಶಾಸಕರು ಆ ಗೌರವವನ್ನು ಉಳಿಸಬೇಕು. ಬೇರೆಯವರು ಬಂದು ಹಿಂದೆ ಹಾಗೆ ಇತ್ತು, ಈಗ ಹೀಗೆ ಎಂದು ಹೇಳುವಾಗ ನಮಗೂ ನೋವಾಗುತ್ತದೆ: ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ
ಮಂಗಳೂರು
ಬೆಳಗಾವಿ ಅಧಿವೇಶನದ ವೇಳೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣಗೆ ಪ್ರಶ್ನೆ ಕೇಳಲು ಸ್ಪೀಕರ್ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಮಂಗಳವಾರ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.ಸದನ ಎಂದರೆ ಒಂದು ಕುಟುಂಬದ ರೀತಿ ಇರುವಂತದ್ದು. ಕುಟುಂಬ ಚೆನ್ನಾಗಿ ನಡೆಸಿಕೊಂಡು ಹೋಗುವುದು ಸಭಾಧ್ಯಕ್ಷನ ಜವಾಬ್ದಾರಿ. ಅದರ ಒಳಗಡೆ ಆಗಿರುವುದನ್ನು ಹೊರಗಡೆ ಮಾತನಾಡಲು ಇಷ್ಟಪಡುವುದಿಲ್ಲ. ದಕ್ಷಿಣ ಕನ್ನಡ, ಕರಾವಳಿಗೆ ಹಿಂದೆ ವಿಶೇಷ ಗೌರವ ಇತ್ತು, ಎಲ್ಲ ಶಾಸಕರು ಆ ಗೌರವವನ್ನು ಉಳಿಸಬೇಕು. ಬೇರೆಯವರು ಬಂದು ಹಿಂದೆ ಹಾಗೆ ಇತ್ತು, ಈಗ ಹೀಗೆ ಎಂದು ಹೇಳುವಾಗ ನಮಗೂ ನೋವಾಗುತ್ತದೆ ಎಂದರು. ''''''''''''''''ಕರಾವಳಿಗರು ಬೆಂಕಿ ಹಚ್ಚೋರು'''''''''''''''' ಎಂದು ಅಧಿವೇಶನದಲ್ಲಿ ಸಚಿವ ಭೈರತಿ ಸುರೇಶ್ ಹೇಳಿಕೆ ಬಗ್ಗೆ ಸ್ಪೀಕರ್ ಮೌನ ವಹಿಸಿದ್ದಾರೆ ಎಂಬ ಕರಾವಳಿ ಬಿಜೆಪಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಅಧಿವೇಶನ ಸಂದರ್ಭದಲ್ಲಿ ವಿಧೇಯಕ ಬರುವಾಗ ಚರ್ಚೆ ಆಗುವುದು ಸ್ವಾಭಾವಿಕ. ಆಗ ಏನಾದರೂ ಹೇಳಿದರೆ ಕೂತು ಚರ್ಚೆ ಮಾಡಬಹುದು. ಯಾರು ಹೇಳಿದ್ದು ಸರಿ, ತಪ್ಪು ಎಂದು ತಿಳಿಯಬಹುದು. ಅದನ್ನು ರೆಕಾರ್ಡ್ ನೋಡಿಕೊಂಡು ಬಗೆಹರಿಸಿಕೊಳ್ಳಬಹುದು. ಅದು ಬಿಟ್ಟು ಏಕಾಏಕಿ ಬೊಬ್ಬೆ ಹಾಕಿ ಗದ್ದಲ ಮಾಡಿದರೆ ಹೇಗೆ? ಸ್ಪೀಕರ್ ಆಗಿ ನನ್ನ ಕೆಲಸ ಮಾಡಿದ್ದೇನೆ, ಬಾವಿಗೆ ಬರಬೇಕಾದರೆ ಪ್ರತಿ ಪಕ್ಷದ ನಾಯಕರು ಸೂಚನೆ ಕೊಡಬೇಕು. ಪ್ರತಿಪಕ್ಷದ ನಾಯಕರಿಗೆ ಗೊತ್ತಿಲ್ಲದೆ ನೇರವಾಗಿ ಬಾವಿಗೆ ಬಂದಾಗ ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ಪ್ರತಿಯೊಬ್ಬರು ಅವರವರ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ಇನ್ನೊಬ್ಬರನ್ನು ದೂಷಣೆ ಮಾಡುವುದು ಸುಲಭ. ನಾಳೆ ಎಲ್ಲರೂ ಇದೇ ಅಭ್ಯಾಸವನ್ನು ಮುಂದುವರಿಸಬಹುದು. ಇನ್ನು ಸದನದ ಬಾವಿಗೆ ಬರುವ ಮುಂಚೆ ಯೋಚನೆ ಮಾಡುತ್ತಾರೆ ಎಂದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸ್ ನಿರ್ಬಂಧ ವಿಚಾರದ ಕುರಿತು ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಸ್ಪೀಕರ್ ಆಗಿ ಎಲ್ಲವನ್ನೂ ಮಾತನಾಡಲು ಆಗುವುದಿಲ್ಲ. ನಮ್ಮ ವೈಯಕ್ತಿಕ ಅಭಿಪ್ರಾಯ ಯಾವುದೇ ಇರಬಹುದು, ಸಂವಿಧಾನಬದ್ಧ ಸ್ಥಾನದಲ್ಲಿದ್ದುಕೊಂಡು ಆ ಬಗ್ಗೆ ಹೆಚ್ಚು ಮಾತನಾಡಲು ಆಗುವುದಿಲ್ಲ. ಸರ್ಕಾರ ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ವ್ಯವಸ್ಥೆ ಮಾಡಬೇಕು. ನನಗೆ ಸಾರ್ವಜನಿಕವಾಗಿ ಈ ಬಗ್ಗೆ ಜಾಸ್ತಿ ಚರ್ಚೆ ಮಾಡಲು ಆಗುವುದಿಲ್ಲ. ಯಾವೆಲ್ಲ ಸಚಿವರಿಗೆ ಹೇಳಬೇಕು ಅವರಿಗೆ ಹೇಳುತ್ತೇವೆ. ಊರವರು ಸಂತೋಷದಿಂದ ಇರುವ ವಾತಾವರಣ ನಿರ್ಮಾಣ ಮಾಡಬೇಕು. ಇದು ಸರ್ಕಾರ ಹಾಗೂ ಅಧಿಕಾರಿಗಳ ಜವಾಬ್ದಾರಿ ಎಂದರು.
ಮಂಗಳೂರಿನ ಹೊರ ವಲಯದ ಮುಡಿಪು ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜೈಲಿನ ಕಾಮಗಾರಿ ಮುಕ್ತಾಯಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಸರ್ಕಾರವನ್ನು ಕೋರಲಾಗುವುದು. ಈಗಾಗಲೇ ಪ್ರಥಮ ಹಂತದ ಕಾಮಗಾರಿ ಮುಕ್ತಾಯಗೊಂಡಿದೆ ಎಂದು ಯು.ಟಿ. ಖಾದರ್ ಹೇಳಿದರು.