ವಿಶೇಷಚೇತನ ಕುಶಲಕರ್ಮಿ ಪುಂಡಲೀಕಗೆ ಪ್ರಶಸ್ತಿ

| Published : Sep 05 2024, 02:19 AM IST

ಸಾರಾಂಶ

ಖಾನಾಪುರ: ತಾಲೂಕಿನ ಡುಕ್ಕರವಾಡಿ ಗ್ರಾಮದ ವಿಕಲಚೇತನ ಕುಶಲಕರ್ಮಿ ಪುಂಡಲೀಕ ಕುಂಬಾರ ಅವರು ದಿ ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯಾ ನೀಡುವ 2024ನೇ ಸಾಲಿನ ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವಕರ್ಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಖಾನಾಪುರ: ತಾಲೂಕಿನ ಡುಕ್ಕರವಾಡಿ ಗ್ರಾಮದ ವಿಕಲಚೇತನ ಕುಶಲಕರ್ಮಿ ಪುಂಡಲೀಕ ಕುಂಬಾರ ಅವರು ದಿ ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯಾ ನೀಡುವ 2024ನೇ ಸಾಲಿನ ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವಕರ್ಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎರಡು ಕಾಲುಗಳನ್ನು ಕಳೆದುಕೊಂಡಿರುವ ಪುಂಡಲೀಕ ಅವರು ಕಳೆದ ಹಲವು ವರ್ಷಗಳಿಂದ ಕುಂಬಾರಿಕೆ ಮತ್ತು ಟೆರಾಕೊಟಾ ಕಲೆಯ ಮೂಲಕ ಚಿತ್ತಾಷರ್ಕಕ ಹಾಗೂ ಅಲಂಕಾರಿಕ ಮಣ್ಣಿನ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಜೊತೆಗೆ ರಾಷ್ಟ್ರಮಟ್ಟದಲ್ಲಿ ತಮ್ಮ ಉದ್ಯಮಕ್ಕೆ ವಿಶೇಷ ಬ್ರ್ಯಾಂಡ್ ಕಲ್ಪಿಸುವ ಮೂಲಕ ಸ್ಥಳೀಯವಾಗಿ ಹಲವು ಜನರಿಗೆ ಉದ್ಯೋಗ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪುಂಡಲೀಕ ಅವರಿಗೆ ಕೌನ್ಸಿಲ್ ವತಿಯಿಂದ ವಿಶೇಷ ಪ್ರಶಸ್ತಿ ಪತ್ರ, ನಗದು ಪುರಸ್ಕಾರ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಂ.ಎಸ್ ಸತ್ಯು ಮತ್ತು ಕರ್ನಾಟಕ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಪುಂಡಲೀಕ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ದಿ ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯಾದ ಪದಾಧಿಕಾರಿಗಳು, ಆಹ್ವಾನಿತರು ಇದ್ದರು.