ಸಾರಾಂಶ
ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣದ ಹೊಸಪೇಟಗಲ್ಲಿಯ ಮಹಾದೇವ (ತ್ರಿಲಿಂಗ) ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಗಿನಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಪುನೀತರಾದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣದ ಹೊಸಪೇಟಗಲ್ಲಿಯ ಮಹಾದೇವ (ತ್ರಿಲಿಂಗ) ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಗಿನಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಪುನೀತರಾದರು.ಮಹಾದೇವ (ತ್ರಿಲಿಂಗ) ಮಂದಿರವು ಮೂರು ಲಿಂಗಗಳ ಸಂಗಮ (ಕ್ಷೇತ್ರ) ಇರುವಂಥ ಭವ್ಯವಾದ ಸುಂದರ ದೇವಸ್ಥಾನ ಇರುವುದು. ಈ ದೇವಸ್ಥಾನವು ಪುರಾತನ ಕಾಲದಿಂದಲೂ ಸುಪ್ರಸಿದ್ಧವಾಗಿರತಕ್ಕಂಥ ಮಂದಿರವಾಗಿದ್ದು, ಭಕ್ತಾದಿಗಳು ಅಂದಿನಿಂದ ಇಂದಿನವರೆಗೆ ಭಯ ಭಕ್ತಿಯಿಂದ ಪೂಜಾ, ಅಭಿಷೇಕ, ಅರ್ಚನೆ ಮಾಡಿಕೊಂಡು ಬಂದಿರುವುದು ವಿಶೇಷ. ಮಹಾಶಿವರಾತ್ರಿಯು ಬುಧವಾರ ಬೆಳಗ್ಗೆ 3 ಗಂಟೆಯಿಂದ 7 ಗಂಟೆಯವರೆಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಅಲಂಕಾರ ಪೂಜೆಗಳು ನಡೆದವು. ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಚಿಕ್ಕೋಡಿ ತಾಲೂಕಿನ ಸಕಲ ಭಜನಾಮಂಡಳಿಯಿಂದ ಶಿವನಾಮಸ್ಮರಣೆ ಭಜನೆ ನಡೆಯಿತು. ಬೆಳಗ್ಗೆ 8 ಗಂಟೆಗೆ ಮಹಾದೇವರ ಉತ್ಸವ ಮೂರ್ತಿಯ ಮೆರವಣಿಗೆ ವಾದ್ಯ ಮೇಳದೊಂದಿಗೆ ಊರ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಂದಿರಕ್ಕೆ ತರಲಾಯಿತು. ಬಿ.ಎಸ್.ಸಂಕಪಾಳ ಮತ್ತು ಸಂಗಡಿಗರಿಂದ ಭಕ್ತಿಗೀತೆಗಳು ಜನ ಮನ ಸೆಳೆದವು. ಫೆ.27 ರಂದು ಮಧ್ಯಾಹ್ನ 12.30 ಗಂಟೆಗೆ ಮಹಾಪ್ರಸಾದದ ವ್ಯವಸ್ಥೆ ಇದೆ. ಸದ್ಭಕ್ತರು ಮಹಾದೇವರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನಿತರಾಗಬೇಕೆಂದು ದೇವಸ್ಥಾನ ಕಮಿಟಿ ಸದಸ್ಯರು ತಿಳಿಸಿದ್ದಾರೆ. ಕಮಿಟಿ ಸದಸ್ಯರಾದ ಸುರೇಶ ಮಲ್ಲಪ್ಪ ಫರಾಳೆ, ರವೀಂದ್ರ ಗುರಪ್ಪ ಅಕ್ಕತಂಗರಾಳ,ಮಹಾದೇವ ಶಿವಪ್ಪ ವರುಟೆ, ರವೀಂದ್ರ ಬಸವಣ್ಣಿ ಹಂಪಣ್ಣವರ, ಸಿದ್ದೇಶ್ವರ ರಾಮಗೌಡ ಪಾಟೀಲ, ಶಿವರಾಜ ಬಸವರಾಜ ಮಿರ್ಜಿ, ಬಸವರಾಜ ರಾಮಚಂದ್ರ ಮುಸಂಡಿ, ಶಂಕರ ಬಸವಾಣಿ ಖಿಲಾರೆ, ಸಂಜು ಕುಮಾರ ಜಾಧವ, ಅಜಿತ ರುದ್ರಪ್ಪ ಕಾಗಲೆ, ಆನಂದ ಮಧುಕರ ಬೋಳಾಜ, ರಾಜೇಂದ್ರ ಗುಲಗಂಜಿ, ದೀಪಕ ಕೋಳೆಕರ ಉಪಸ್ಥಿತರಿದ್ದರು.
ಶಿವರಾತ್ರಿ ಪ್ರಯುಕ್ತ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.