155 ವರ್ಷಗಳ ಸುದೀರ್ಘ ಪರಂಪರೆ ಹೊಂದಿರುವ ಭಾರತದ ಪ್ರತಿಷ್ಠಿತ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ಸ್ಥಳೀಯ ಹೋಟೆಲ್ ರಂಜಿತಾ ಪ್ಯಾಲೇಸ್ ನಲ್ಲಿ ನಾಲ್ಕು ದಿನಗಳ ವಿಶೇಷ ಆಭರಣ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಆ. 14 ರಿಂದ 17 ರವರೆಗೆ ನಡೆಯಲಿರುವ ಈ ಪ್ರದರ್ಶನವನ್ನು ಬಿಜೆಪಿ ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷೆ ಜಿ. ವಿಜಯರಾಜೇಶ್ವರಿ ಅವರು ಶುಕ್ರವಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತ ರಾಯಚೂರು

ನಂತರ ಮಾತನಾಡಿದ ಅವರು ಇಷ್ಟು ಶ್ರೀಮಂತ ಇತಿಹಾಸವಿರುವ ಬ್ರ್ಯಾಂಡ್ ರಾಯಚೂರಿಗೆ ತನ್ನ ಕಲಾತ್ಮಕತೆಯನ್ನು ತಂದಿರುವುದು ಸಂತೋಷದ ವಿಷಯ. ಇಲ್ಲಿನ ಪ್ರತಿಯೊಂದು ವಿನ್ಯಾಸವು ಕಥೆ, ಸಂಪ್ರದಾಯ ಮತ್ತು ಭಾವನೆಗಳಿಗೆ ಜೀವ ತುಂಬಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಪ್ರದರ್ಶನದಲ್ಲಿ ಶುದ್ಧ ಚಿನ್ನ, ಅಪರೂಪದ ರತ್ನಗಳು, ಮುತ್ತುಗಳು, ಪಚ್ಚೆ, ಮಾಣಿಕ್ಯ ಹಾಗೂ ಅದ್ಭುತ ವಜ್ರಾಭರಣಗಳ ಬೃಹತ್ ಸಂಗ್ರಹವಿದೆ. ಜೊತೆಗೆ ನೈತಿಕ ಹಾಗೂ ಸುಸ್ಥಿರ ಐಷಾರಾಮಿತನದ ಸಂಕೇತವಾಗಿ ''''''''ಲ್ಯಾಬ್-ಗ್ರೋನ್'''''''' (ಪ್ರಯೋಗಾಲಯದಲ್ಲಿ ಸೃಷ್ಟಿಸಿದ) ವಜ್ರಗಳ ಕ್ರಾಂತಿಕಾರಿ ಸಂಗ್ರಹವಾದ ''''''''crash.club'''''''' ಅನ್ನು ವಿಶೇಷವಾಗಿ ಪರಿಚಯಿಸಲಾಗಿದೆ.

ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಮಳಿಗೆ ಮುಖ್ಯಸ್ಥ ಸಂತೋಷ್ ಆರ್. ಮಾತನಾಡಿ, ರಾಯಚೂರಿನ ಜನರ ಪ್ರೀತಿ ಮತ್ತು ಅಗಾಧ ಪ್ರತಿಕ್ರಿಯೆ ನಮಗೆ ಮತ್ತೆ ಮರಳಿ ಬರಲು ಸ್ಫೂರ್ತಿ ನೀಡಿದೆ. ನಮ್ಮ ಪರಂಪರೆಯನ್ನು ಇಲ್ಲಿನ ಗ್ರಾಹಕರೊಂದಿಗೆ ಹಂಚಿಕೊಳ್ಳಲು ಸಂತಸವೆನಿಸುತ್ತದೆ ಎಂದರು. ಪಿಆರ್ ಮುಖ್ಯಸ್ಥ ತೇಜಸ್ ಕಲ್ರಾ ಸಂಸ್ಥೆಯ ಬದ್ಧತೆಯನ್ನು ಸ್ಮರಿಸಿದರು.

ರಾಯಚೂರಿನ ಗ್ರಾಹಕರಿಗಾಗಿ ಬೆಳ್ಳಿ ಆಭರಣಗಳ ಮೇಲೆ 2%, ಚಿನ್ನಾಭರಣಗಳ ಮೇಲೆ 4% ಹಾಗೂ ವಜ್ರಾಭರಣಗಳ ಮೇಲೆ 6% ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ವೈಯಕ್ತಿಕ ಸಮಾಲೋಚನೆ ಹಾಗೂ ಆಭರಣಗಳ ಮಾಹಿತಿಗೆ ಸಂತೋಷ್. ಆರ್ ( 96861 01869) ಅವರನ್ನು ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ಅರ್ಚನಾ ಸುಂಕಾರಿ, ಅಧಿಕಾರಿ, ಸಿಬ್ಬಂದಿ ಸೇರಿ ಅನೇಕರು ಉಪಸ್ಥಿತರಿದ್ದರು.

---------

14ಕೆಪಿಆರ್‌ಸಿಆರ್ 01:

ರಾಯಚೂರಿನ ಹೋಟೆಲ್ ರಂಜಿತಾ ಪ್ಯಾಲೇಸ್‌ನಲ್ಲಿ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ವತಿಯಿಂದ ಹಮ್ಮಿಕೊಂಡಿರುವ ನಾಲ್ಕು ದಿನಗಳ ವಿಶೇಷ ಆಭರಣ ಪ್ರದರ್ಶನಕ್ಕೆ ಬಿಜೆಪಿ ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷೆ ಜಿ. ವಿಜಯರಾಜೇಶ್ವರಿ ಚಾಲನೆ ನೀಡಿದರು.