ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಪಠ್ಯ, ಕವನದ ಬಗ್ಗೆ ವಿಶೇಷ ಉಪನ್ಯಾಸ

| Published : Mar 28 2024, 12:48 AM IST

ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಪಠ್ಯ, ಕವನದ ಬಗ್ಗೆ ವಿಶೇಷ ಉಪನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಕನ್ನಡ ವಿಭಾಗ ಹಾಗೂ ವಿದ್ಯಾರ್ಥಿ ವೇದಿಕೆಯ ಜಂಟಿ ಆಶ್ರಯದಲ್ಲಿ ‘ಏಳಿ ಎದ್ದೇಳಿ ಶಾಂತಿಗಾಗಿ’ ಕವನದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಜಗತ್ತಿನಲ್ಲಿ ಶಾಂತಿ ನೆಲೆಸುವುದಕ್ಕಾಗಿ ನಾವೆಲ್ಲ ಎದ್ದು ನಿಲ್ಲಬೇಕಿದೆ. ಇನ್ನೊಬ್ಬರ ಮೇಲೆ ಕ್ರೋಧ ಸಾಧಿಸುವ ಬದಲು ಪ್ರೀತಿಯನ್ನು ಹಂಚಬೇಕಾಗಿದೆ ಎಂದು ಪಡುಬಿದ್ರಿಯ ಗಣಪತಿ ಹೈಸ್ಕೂಲಿನ ಶಿಕ್ಷಕರೂ, ಗಮಕ ವ್ಯಾಖ್ಯಾನಕಾರರೂ ಆಗಿರುವ ಡಾ. ರಾಘವೇಂದ್ರ ರಾವ್ ಹೇಳಿದರು.

ಅವರು ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಕನ್ನಡ ವಿಭಾಗ ಹಾಗೂ ವಿದ್ಯಾರ್ಥಿ ವೇದಿಕೆಯ ಜಂಟಿ ಆಶ್ರಯದಲ್ಲಿ ಮಂಗಳವಾರ ನಡೆದ ‘ಏಳಿ ಎದ್ದೇಳಿ ಶಾಂತಿಗಾಗಿ’ ಕವನದ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಸಂಧಾನದ ಪ್ರಯತ್ನವೆಲ್ಲ ಸೋತಾಗಲೇ ಯುದ್ಧಗಳು ನಡೆಯುವಂತಹದ್ದು. ರಾಮಾಯಣ, ಮಹಾಭಾರತಗಳಲ್ಲೂ ಇದಕ್ಕೆ ಸಾಕಷ್ಟು ದೃಷ್ಟಾಂತಗಳು ಕಾಣಿಸುತ್ತವೆ. ಯುದ್ಧ ಜೀವ ಸಂಕುಲಕ್ಕೆ ಎಂದಿಗೂ ಒಳಿತನ್ನು ಉಂಟು ಮಾಡುವುದಿಲ್ಲ. ವೇದ ಮಂತ್ರಗಳೂ ಶಾಂತಿಯನ್ನೇ ಬೋಧಿಸಿವೆ. ವಿಷ್ಣು ಮತ್ಸ್ಯ, ವರಾಹ ಮೊದಲಾದ ಅವತಾರಗಳ ಮೂಲಕ ಶಾಂತಿ ಸ್ಥಾಪನೆ ಮಾಡಿದ ಕಥೆ ನಮಗೆ ಆದರ್ಶವಾಗಬೇಕಿದೆ. ಆದರೆ ಪ್ರಸ್ತುತ ಎಲ್ಲೆಡೆಯೂ ನಾವು ಯುದ್ಧದ ಭೀಕರತೆಯನ್ನು ಕಾಣುವಂತಾಗಿರುವುದು ದುಃಖದ ಸಂಗತಿ ಎಂದರು.

ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿಬಿಎ ವಿದ್ಯಾರ್ಥಿಗಳಿಗೆ ಪಠ್ಯವಾಗಿರುವ ಈ ಕವನವನ್ನು ಡಾ. ರಾಘವೇಂದ್ರ ರಾವ್ ಅವರೇ ರಚಿಸಿದ್ದು, ಕವನದ ಕುರಿತು ಸ್ವತಃ ಕವಿಯಿಂದಲೇ ಉಪನ್ಯಾಸ ನೆರವೇರಿತು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ಮಂಜುನಾಥ ಕರಬ, ಐಕ್ಯುಎಸಿ ಸಂಯೋಜಕರಾಗಿರುವ ಡಾ. ವಿನಯ್ ಕುಮಾರ್, ಕಾರ್‍ಯಕ್ರಮ ಹಾಗೂ ವಿದ್ಯಾರ್ಥಿ ವೇದಿಕೆಯ ಸಂಯೋಜಕರಾಗಿರುವ ಕನ್ನಡ ಉಪನ್ಯಾಸಕ ಡಾ. ಶಿವಕುಮಾರ ಅಳಗೋಡು, ಡಾ. ನಾಗರಾಜ ಜಿ.ಪಿ ಉಪಸ್ಥಿತರಿದ್ದರು.