ಪಟ್ಟಣದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಂಬರ್‌ ಪ್ಲೆಟ್ ಇಲ್ಲದ ಹಾಗೂ ದೋಷಪೂರಿತ ನಂಬರ್‌ ಪ್ಲೇಟನೊಂದಿಗೆ ಬೈಕ್ ಚಲಾಯಿಸುತ್ತಿದ್ದ 50 ಬೈಕ್ ಸವಾರರಿಗೆ ಪೊಲೀಸರು ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ.

ಲಕ್ಷ್ಮೇಶ್ವರ: ಪಟ್ಟಣದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಂಬರ್‌ ಪ್ಲೆಟ್ ಇಲ್ಲದ ಹಾಗೂ ದೋಷಪೂರಿತ ನಂಬರ್‌ ಪ್ಲೇಟನೊಂದಿಗೆ ಬೈಕ್ ಚಲಾಯಿಸುತ್ತಿದ್ದ 50 ಬೈಕ್ ಸವಾರರಿಗೆ ಪೊಲೀಸರು ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ ಅವರ ನಿರ್ದೇಶನದಲ್ಲಿ ಶಿರಹಟ್ಟಿ ವೃತ್ತದ ಸಿಪಿಐ ನಾಗರಾಜ ಮಾಡಳ್ಳಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ನಾಗರಾಜ ಗಡದ, ಕ್ರೈಂ ಪಿಎಸ್‌ಐ ಟಿ.ಕೆ. ರಾಠೋಡ ಅವರ ನೇತೃತ್ವದಲ್ಲಿ ತಂಡ ರಚಿಸಿ ಪೊಲೀಸ್ ಹಾಗೂ ಹೋಮ್ ಗಾರ್ಡ್‌ಗಳು ಕಾರ್ಯಾಚರಣೆ ನಡೆಸಿದರು.

ಹುಬ್ಬಳ್ಳಿ ರೋಡ್‌, ದೊಡ್ಡೂರ ಕ್ರಾಸ್, ಸೋಮೇಶ್ವರ ಪಾದಗಟ್ಟಿ, ಎಪಿಎಂಸಿ, ಸವಣೂರ ರೋಡ್‌ ಹೀಗೆ ಹಲವು ಸ್ಥಳದಲ್ಲಿ ಪೊಲೀಸರು ದೋಷಪೂರಿತ ನಂಬರ್‌ ಪ್ಲೇಟ್, ನಂ ಪ್ಲೇಟ್‌ಗೆ ಸ್ಟಿಕರ್ ಅಂಟಿಸಿ ಚಾಲನೆ ಮಾಡುತ್ತಿದ್ದ ಹಾಗೂ ಹೆಲ್ಮೆಟ್ ಇಲ್ಲದೆ, ಡ್ರೈವಿಂಗ್ ಲೈಸೆನ್ಸ್ ಹೀಗೆ 50ಕ್ಕೂ ಹೆಚ್ಚು ಬೈಕ್‌ಗಳನ್ನು ಸೀಜ್ ಮಾಡಿ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಎಸ್ಐ ತಿಳಿಸಿದ್ದಾರೆ.

ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನೋಂದಣಿ ಸಂಖ್ಯೆ ಇಲ್ಲದ, ತಪ್ಪು ನಂಬರ್‌ ಪ್ಲೇಟ್‌ ಹಾಗೂ ನಂಬರ್‌ ಪ್ಲೇಟ್‌ ಮೇಲೆ ಸ್ಟಿಕ್ಕರ್ ಅಂಟಿಸುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು, ಅಭಿಯಾನದಿಂದ ಜನರಲ್ಲಿ ಸಂಚಾರ ಸುಗಮ ವ್ಯವಸ್ಥೆ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು ಎಂದು ಶಿರಹಟ್ಟಿ ವೃತ್ತದ ಸಿಪಿಐ ನಾಗರಾಜ ಮಾಡಳ್ಳಿ ಹೇಳಿದರು.