ಶ್ರೀಆತ್ಮಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ, ದನಗಳ ಜಾತ್ರೆ

| Published : Mar 09 2024, 01:36 AM IST

ಶ್ರೀಆತ್ಮಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ, ದನಗಳ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವರಾತ್ರಿ ಪ್ರಯುಕ್ತ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಬಳಿ ಜಾತ್ರೆ ಸಹ ಕಟ್ಟಲಾಗಿದೆ. ಬರದ ನಡುವೆಯೂ 32 ನೇ ವರ್ಷದ ಭಾರಿ ದನಗಳ ಜಾತ್ರೆ ಆರಂಭಗೊಂಡಿದೆ. ವಿಸಿ ನಾಲೆಯಲ್ಲಿ ನೀರು ಬಿಡದಿರುವುದರಿಂದ ಈ ಬಾರಿ 100ಕ್ಕಿಂತ ಕಡಿಮೆ ರಾಸುಗಳು ಜಾತ್ರೆಯಲ್ಲಿ ಪಾಲ್ಗೊಂಡಿವೆ. ಈ ಎಲ್ಲಾ ರಾಸುಗಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ದೇವಸ್ಥಾನದಲ್ಲಿ ಮಹಾಗಣಪತಿ ಪೂಜೆ, ರುದ್ರಹೋಮ, ನವಗ್ರಹ ಪೂಜೆ, ಮೃತ್ಯುಂಜಯಹೋಮ ನಡೆಸಿ ಕಳಸ ಸ್ಥಾಪನೆ ಮಾಡಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಮಧುಮಾದೇಗೌಡ, ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಇಒ ಆಶಯ್‌ ಜಿ.ಮಧು, ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಪ್ರಾಂಶುಪಾಲ ಪುಟ್ಟಸ್ವಾಮಿ, ಉಪನ್ಯಾಸಕ ಶಿವಲಿಂಗೇಗೌಡ ಸೇರಿದಂತೆ ಇತರರು ಪೂಜೆಯಲ್ಲಿ ಭಾಗವಹಿಸಿದ್ದರು.

ಮಧ್ಯಾಹ್ನದ ವೇಳೆಗೆ ಆತ್ಮಲಿಂಗೇಶ್ವರಸ್ವಾಮಿ ಶಿವಲಿಂಗವನ್ನು ನಾಗಾಭರಣಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರತೀ ಎರಡೂವರೆ ಗಂಟೆಗೊಮ್ಮೆ ಮಹಾ ಮಂಗಳಾರತಿ ನೆರವೇರಿತು.

ದೇವಸ್ಥಾನದಲ್ಲಿ ರಾತ್ರಿಯೆಲ್ಲಾ ಜಾಗರಣೆ ಮಾಡಲು ಭಜನೆ, ಪೌರಣಿಕ ನಾಟಕ, ಕೋಲಾಟ, ಭಕ್ತಿಗೀತೆ, ಜಾನಪದ ಗೀತೆ, ಹರಿಕಥೆ, ಬ್ರಹ್ಮಕುಮಾರಿ ಆಶ್ರಮದಿಂದ ಪ್ರವಚನ, ದೊಣ್ಣೆಒರಸೆ, ಅಖಂಡಭಜನೆ, ಭಕ್ತಿಪ್ರಧಾನ ಚಿತ್ರಗಳ ಪ್ರದರ್ಶನ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸಾವಿರಾರು ಭಕ್ತರು ಆಗಮನ:

ಶಿವರಾತ್ರಿ ಪ್ರಯುಕ್ತ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಬಳಿ ಜಾತ್ರೆ ಸಹ ಕಟ್ಟಲಾಗಿದೆ. ಬರದ ನಡುವೆಯೂ 32 ನೇ ವರ್ಷದ ಭಾರಿ ದನಗಳ ಜಾತ್ರೆ ಆರಂಭಗೊಂಡಿದೆ. ವಿಸಿ ನಾಲೆಯಲ್ಲಿ ನೀರು ಬಿಡದಿರುವುದರಿಂದ ಈ ಬಾರಿ 100ಕ್ಕಿಂತ ಕಡಿಮೆ ರಾಸುಗಳು ಜಾತ್ರೆಯಲ್ಲಿ ಪಾಲ್ಗೊಂಡಿವೆ. ಈ ಎಲ್ಲಾ ರಾಸುಗಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇದರ ಜೊತೆಗೆ ಶಿವರಾತ್ರಿ ಹಬ್ಬದ ಅಂಗವಾಗಿ ಉತ್ಸವ ಮೂರ್ತಿಗಳ ತೆಪ್ಪೋತ್ಸವ ನಡೆಯಲಿರುವ ಪಾವನ ಗಂಗಾ ಕಲ್ಯಾಣಿಗೆ ಕಳೆದ ಮೂರು ದಿನಗಳಿಂದ ಬೋರ್ ವೆಲ್‌ಗಳ ಮೂಲಕ ನೀರು ತುಂಬಿಸಲಾಗಿದೆ.

ಶಿವನನ್ನು ಆರಾಧಿಸುವುದರಿಂದ ಮನಸ್ಸಿ ಶಾಂತಿ: ಆಶಯ್‌ ಜಿ.ಮಧುಭಾರತೀನಗರ:ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಹಬ್ಬದ ಧ್ವಜಾರೋಹಣವನ್ನು ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಇಒ ಆಶಯ್‌ ಜಿ.ಮಧು ನೆರವೇರಿಸಿದರು.ಮಹಾಶಿವರಾತ್ರಿ ಅಂಗವಾಗಿ ಶಿವಲಿಂಗವನ್ನು ಪ್ರತಿಸ್ಥಾಪಿಸಿ ಭಕ್ತಿ ಪ್ರಧಾನವಾಗಿ ಪೂಜೆ ಸಲ್ಲಿಸಿ, ಶಿವನ ಸಂದೇಶವನ್ನು ಭಕ್ತಾದಿಗಳಿಗೆ ತಿಳಿಸಲಾಯಿತು.ನಂತರ ಆಶಯ್‌ ಜಿ.ಮಧು ಮಾತನಾಡಿ, ಮಾನವನ ನೆಮ್ಮದಿಗೆ ದೈವಭಕ್ತಿ ಅತ್ಯಗತ್ಯ. ಜೀವನ ಜಂಜಾಟದ ನಡುವೆ ದೇವರ ಮೊರೆಹೋಗುವುದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಎಲ್ಲ ದೇವತೆಗಳು ಪರಮಾತ್ಮ ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಪ್ರಕೃತಿಯು ಕೂಡ ಶಿವನಿಗೆ ತಲೆಬಾಗಿದೆ ಎಂದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಬಿ.ಕೆ.ಗೌರಿ ಮಾತನಾಡಿ, ಪ್ರಸ್ತುತ ಯುವಕರಲ್ಲಿ ದೈವ ಭಕ್ತಿಕಡಿಮೆಯಾಗುತ್ತಿದೆ. ಧಾರ್ಮಿಕ ಚಿಂತನೆಗಳಿಂದ ಮನಸ್ಸು ಸುಸ್ಥಿರವಾಗಿರುತ್ತದೆ. ಶಿವನನ್ನು ಆರಾಧಿಸುವುದರಿಂದ ಮನಸ್ಸಾಂತಿ ಲಭಿಸುತ್ತದೆ ಎಂದು ಸಂದೇಶ ನೀಡಿದರು.ಬಂದಂತಹ ಭಕ್ತಾದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪ್ರಸಾದ ವಿನಿಯೋಗ ನಡೆಯಿತು. ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸದಸ್ಯ ಆರ್.ಸಿದ್ದಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಎನ್.ಸುಧಾ, ಸದಸ್ಯ ಶ್ರೀನಿವಾಸ್, ಮಾಸ್ಟರ್ ಬೋರಯ್ಯ, ಕೆ.ಎಸ್.ಗೌಡ, ದಾಸೇಗೌಡ, ರೋಟರಿ ಅಧ್ಯಕ್ಷ ನಂದೀಶ್, ಶಿಕ್ಷಕ ಕೆ.ಎಸ್. ಶಿವರಾಮು, ಚಿಕ್ಕಸಿದ್ದೇಗೌಡ, ಬ್ರಹ್ಮಕುಮಾರಿ ಆಶ್ರಮದ ಸಹೋದರ, ಸಹೋದರಿಯರು ಸೇರಿದಂತೆ ಹಲವರು ಇದ್ದರು.