ಶ್ರೀರಾಮ ಜಯಂತಿ ಅಂಗವಾಗಿ ಮಂದಿರಗಳಲ್ಲಿ ವಿಶೇಷ ಪೂಜಾ ಕೈಂಕರ್ಯ

| Published : Apr 18 2024, 02:23 AM IST

ಸಾರಾಂಶ

ಶ್ರೀರಾಮನವಮಿಯನ್ನು ಎಲ್ಲೆಡೆ ಸಡಗರ, ಸಂಭ್ರಮದಿಂದ ಕೂಡಿತ್ತು. ಪಟ್ಟಣದ ಗಂಗಾಮತ ಬೀದಿ ಅಡ್ಡೇನಿಂಗಯ್ಯನಕೇರಿಗೆ ಬಂದು ಸ್ಥಾಪಿಸಿದ ಸಿದ್ದಪ್ಪಾಜಿ ಮತ್ತು ಸೀತಾ ರಾಮಮಂದಿರದಲ್ಲಿ ಶ್ರೀರಾಮ ನವಮಿ ಹಿನ್ನಲೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ದವು. ಬೆಳಗ್ಗೆಯಿಂದಲೇ ಶ್ರೀರಾಮ, ಸಿದ್ದಪ್ಪಾಜಿ, ಗದ್ದಿಗೆ, ಅರಸಮ್ಮ ದೇವತೆಗಳಿಗೆ ಅಭಿಷೇಕ ನಂತರ ವಿವಿಧ ಬಗೆಯ ಹೂವಿನಿಂದ ಅಲಂಕಾರ ಪೂಜಾ ಕೈಂಕರ್ಯಗಳನ್ನು ನರೆವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶ್ರೀರಾಮನವಮಿ ಹಿನ್ನೆಲೆಯಲ್ಲಿ ಪಟ್ಟಣದ ಪೇಟೆ ಬೀದಿ ಒಕ್ಕಲಿಗೇರಿ ರಾಮಮಂದಿರ, ಗಂಗಾಮತ ಬೀದಿಯ ಅಡ್ಡೇನಿಂಗಯ್ಯನಕೇರಿಗೆ ಸೀತಾರಾಮಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ದವು.

ಶ್ರೀರಾಮನವಮಿಯನ್ನು ಎಲ್ಲೆಡೆ ಸಡಗರ, ಸಂಭ್ರಮದಿಂದ ಕೂಡಿತ್ತು. ಪಟ್ಟಣದ ಗಂಗಾಮತ ಬೀದಿ ಅಡ್ಡೇನಿಂಗಯ್ಯನಕೇರಿಗೆ ಬಂದು ಸ್ಥಾಪಿಸಿದ ಸಿದ್ದಪ್ಪಾಜಿ ಮತ್ತು ಸೀತಾ ರಾಮಮಂದಿರದಲ್ಲಿ ಶ್ರೀರಾಮ ನವಮಿ ಹಿನ್ನಲೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ದವು.

ಬೆಳಗ್ಗೆಯಿಂದಲೇ ಶ್ರೀರಾಮ, ಸಿದ್ದಪ್ಪಾಜಿ, ಗದ್ದಿಗೆ, ಅರಸಮ್ಮ ದೇವತೆಗಳಿಗೆ ಅಭಿಷೇಕ ನಂತರ ವಿವಿಧ ಬಗೆಯ ಹೂವಿನಿಂದ ಅಲಂಕಾರ ಪೂಜಾ ಕೈಂಕರ್ಯಗಳನ್ನು ನರೆವೇರಿಸಲಾಯಿತು.

ಪಟ್ಟಣದ ಪೇಟೆಬೀದಿ ಒಕ್ಕಲಿಗೇರಿ ರಾಮಮಂದಿರದಲ್ಲೂ ವಿಶೇಷ ಸಲ್ಲಿಸಲಾಯಿತು. ಮುಖಂಡ ಯಜಮಾನ್ ವೆಂಕಟಪ್ಪ ಮಾತನಾಡಿ, ಹಿಂದೂಗಳ ಹೃದಯ ಸಾಮ್ರಾಟ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ರಾಮನವಮಿ ಸಕಲ ಹಿಂದೂ ಧರ್ಮದ ಎಲ್ಲರಿಗೂ ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ ಎಂದರು.

ಶ್ರೀರಾಮನವಮಿ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಮಜ್ಜಿಗೆ ಮತ್ತು ಪಾನಕ ವಿತರಿಸಲಾಯಿತು. ಈ ವೇಳೆಮುಖಂಡರಾದ ಚಿಕ್ಕರಾಜು, ನಂಜುಂಡಪ್ಪ, ನಾಗಣ್ಣ, ತಮ್ಮಣ್ಣ, ಸ್ವಾಮಿ, ಬಸವರಾಜು, ಮಹದೇವ, ಶಿವಲಿಂಗೇಗೌಡ, ಸಿದ್ದರಾಜು, ನಾಗಣ್ಣ, ಬಸವರಾಜು ಇದ್ದರು.

ಪಟ್ಟಣದ ರಾಘವ ನಂದಿನಿ ಸಭಾದ ವತಿಯಿಂದ ನಡೆಯುತ್ತಿರುವ ರಾಮೋತ್ಸವದಲ್ಲಿ ಬುಧವಾರ ರಾಮನವಮಿ ಅಂಗವಾಗಿ ವಿಶೇಷ ಕೈಂಕರ್ಯಗಳು ನಡೆದ್ದವು. ನಂತರ ಭಕ್ತರಿಗೆ ಮಜ್ಜಿಗೆ, ಪಾನಕ, ಪ್ರಸಾದ ವಿತರಿಸಲಾಯಿತು.

ವಿವಿಧೆಡೆ: ತಾಲೂಕಿನ ಹಲವು ಗ್ರಾಮಗಳಲ್ಲಿ ರಾಮ ಮಂದಿರ, ಆಂಜನೇಯ ದೇವಸ್ಥಾನ ಹಾಗೂ ವಿವಿಧ ಮಾರುತಿ ದೇವಸ್ಥಾನಗಳಲ್ಲಿ ಶ್ರೀರಾಮ ನವಮಿ ನಡೆಯಿತು. ನಂತರ ಭಕ್ತಾದಿಗಳಿಗೆ ಕೋಸಂಬರಿ ಹಾಗೂ ಪಾನಕವನ್ನು ವಿತರಿಸಲಾಯಿತು.ಹಲಗೂರಿನಲ್ಲಿ ರಾಮನವಮಿ ಆಚರಣೆ, ವಿಶೇಷ ಪೂಜೆಹಲಗೂರು:ಶ್ರೀರಾಮ ಮಂದಿರ ದೇವಸ್ಥಾನದಲ್ಲಿ ಬುಧವಾರ ರಾಮನವಮಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ದೇವರಮೂರ್ತಿ ಶುಚಿಗೊಳಿಸಿ, ಅಭಿಷೇಕ ನಡೆಸಿದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಿ ಮಹಾಮಂಗಳಾರತಿ ನಂತರ ಬಂದ ಭಕ್ತಾದಿಗಳಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಯಿತು.ಭಕ್ತರು ಜಯರಾಮ್, ಶ್ರೀರಾಮ್, ಗೋವಿಂದ, ಗೋವಿಂದ, ಎಂಬ ಘೋಷಗಳನ್ನು ಕೂಗುತ್ತಾ, ದೇವರಿಗೆ ತಮ್ಮ ಭಕ್ತಿ ಭಾವವನ್ನು ಸಮರ್ಪಿಸಿದರು.

ಎಚ್.ಆರ್. ಪದ್ಮನಾಭ ಮಾತನಾಡಿ ,ಪ್ರತಿ ವರ್ಷವೂ ನಮ್ಮ ಈ ದೇವಸ್ಥಾನದಲ್ಲಿ ರಾಮನವಮಿ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. 9 ದಿನಗಳ ಕಾಲ ದಿನನಿತ್ಯ ಪೂಜೆ ಜೊತೆಗೆ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಗುವುದು ಎಂದರು.ಪ್ರಸಿದ್ಧ ಮುತ್ತತ್ತಿಯಲ್ಲಿ ನೆಲೆಸಿರುವ ಮುತ್ತತ್ತಿರಾಯಣ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ, ಭಕ್ತರಿಗೆ ಪಾನಕ ಮಜ್ಜಿಗೆ ವಿತರಿಸಲಾಯಿತು. ಈ ವೇಳೆ ಎಚ್.ಎಸ್.ಕೃಷ್ಣಪ್ಪ, ಎಚ್.ಎಸ್.ಗೋವಿಂದರಾಜ್, ಎಚ್.ವಿ.ರಾಜು, ಪದ್ಮನಾಭ, ಎಚ್.ಆರ್. ರವಿ, ಎಚ್.ಆರ್.ದೇವರಾಜು, ರಘು, ಪ್ರಕಾಶ, ಮುತ್ತುರಾಜು, ರಾಘವ್ ಸೇರಿದಂತೆ ಇತರರು ಇದ್ದರು.