ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಶ್ರೀ ಸುಬ್ರಮಣ್ಯಸ್ವಾಮಿ ಅವತಾರೋತ್ಸವ ಪ್ರಯುಕ್ತ ತಮಿಳು ಜನಾಂಗದ ಮಹಿಳೆಯರು ಗುರುವಾರ ಮುಂಜಾನೆ ನಗರದ ಬೋಳ ರಾಮೇಶ್ವರ ದೇವಾಲಯದಿಂದ ಕಳಸ ಹೊತ್ತು ಕುಮರಿಗಿರಿ ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ತೆರಳಿದರು.ಬೆಳಿಗ್ಗೆ 7 ಗಂಟೆಗೆ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ನೆರೆದಿದ್ದ ಮಹಿಳೆಯರು ಹಾಗೂ ಸಮಾಜ ಮುಖಂಡರು ಅವತಾರೋತ್ಸವ ವಿಶೇಷ ಪೂಜೆ ನೆರವೇರಿಸಿ ಶ್ರೀವಳ್ಳಿ, ಶ್ರೀದೇವಾ ಸೇನಾ ಹಾಗೂ ಶ್ರೀ ಸುಬ್ರಮಣ್ಯಸ್ವಾಮಿ ಉತ್ಸವ ಮೂರ್ತಿಗಳೊಂದಿಗೆ ಕ್ಷೀರ ತುಂಬಿದ ಕಳಸ ಹೊತ್ತು ಮೆರವಣಿಗೆ ಮೂಲಕ ಸಾಗಿದರು.ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ವೈಯಕ್ತಿಕ ಬದುಕಿನಲ್ಲಿ ಹಲವಾರು ದೇಶ ಗಳನ್ನು ಪ್ರವಾಸ ಕೈಗೊಂಡಿದ್ದೇನೆ. ಆದರೆ, ಭಾರತೀಯ ಸಂಸ್ಕೃತಿಯ ಪೂಜಾವಿಧಿ ವಿಧಾನಗಳು ಹಾಗೂ ಧಾರ್ಮಿಕ ಪರಂಪರೆ ಯಾವ ದೇಶದಲ್ಲಿ ಕಂಡಿಲ್ಲ ಎಂದು ಹೇಳಿದರು.ಬಳಿಕ ಮಹಿಳೆಯರು ಕಳಸವನ್ನು ಹೊತ್ತು ಐ.ಜಿ.ರಸ್ತೆ ಮುಖಾಂತರ ಬಸವನಹಳ್ಳಿ ಶಾಲೆ ಸಮೀಪ ತಲುಪಿ ಅಲ್ಲಿಂದ ಬಸ್ ಮೂಲಕ ಶ್ರೀ ಕುಮರಿಗಿರಿ ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ತಲುಪಿಸಿದರು. ತದನಂತರ ವಿಶೇಷ ಹಾಗೂ ಹಾಲಿನ ಅಭಿಷೇಕ ಶ್ರೀಯವರಿಗೆ ನೆರವೇರಿತು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಬಳಿಕ ಅನ್ನ ಸಂಪರ್ತಣೆ ನಡೆಸಲಾಯಿತು.ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ತಮಿಳು ಸಂಘದ ಅಧ್ಯಕ್ಷ ಜಿ.ರಘು, ಕಾರ್ಯದರ್ಶಿ ಅಣ್ಣಾವೇಲು, ಶ್ರೀ ಸುಬ್ರಮಣ್ಯ ದೇವಾಲಯ ಸಮಿತಿ ಅಧ್ಯಕ್ಷ ಗುಣಶೇಖರ್, ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ತಿರುವಳ್ಳರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಶಂಕರ್, ಖಜಾಂಚಿ ಕೃಷ್ಣರಾಜು, ಮುಖಂಡರಾದ ವೆಂಕಟೇಶ್, ಕಾರ್ತೀಕ್, ಸಿ.ಕೆ.ಮೂರ್ತಿ, ಮಂಜು ಹಾಜರಿದ್ದರು.
ಪೋಟೋ ಫೈಲ್ ನೇಮ್ 23 ಕೆಸಿಕೆಎಂ 8ಶ್ರೀ ಸುಬ್ರಮಣ್ಯಸ್ವಾಮಿ ಅವತಾರೋತ್ಸವ ಪ್ರಯುಕ್ತ ತಮಿಳು ಜನಾಂಗದ ಮಹಿಳೆಯರು ಗುರುವಾರ ಮುಂಜಾನೆ ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಾಲಯದಿಂದ ಕಳಸವನ್ನು ಹೊತ್ತು ಕುಮರಿಗಿರಿ ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ತೆರಳಿದರು.