ಆಪರೇಷನ್‌ ಸಿಂದೂರ ಸಕ್ಸಸ್‌ ಹಿನ್ನೆಲೆ ಬೇಲೂರು ದೇಗುಲದಲ್ಲಿ ವಿಶೇಷ ಪೂಜೆ

| Published : May 09 2025, 12:39 AM IST

ಆಪರೇಷನ್‌ ಸಿಂದೂರ ಸಕ್ಸಸ್‌ ಹಿನ್ನೆಲೆ ಬೇಲೂರು ದೇಗುಲದಲ್ಲಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಐತಿಹಾಸಿಕ ಶ್ರೀ ಚನ್ನಕೇಶವ ದೇಗುಲದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ನಮ್ಮ ಭಾರತ ದೇಶದ ಸೈನಿಕರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ ಹಾಗೂ ನರಸಿಂಹ ಪ್ರಿಯ ಭಟ್ ಮಾತನಾಡಿ, ಸೈನಿಕರ ಹಾಗೂ ಆಪರೇಷನ್ ಸಿಂದೂರದಲ್ಲಿ ಭಾಗವಹಿಸಿದ್ದ ಸೈನಿಕರಿಗೆ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪ, ಅಷ್ಟೋತ್ತರ ಸ್ತುತಿ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದ್ದು ನಂತರ ಮಹಾಮಂಗಳಾರತಿ ವಿಶೇಷ ಪ್ರಸಾದ ವಿನಿಯೋಗ ಮಾಡಿದ್ದು ಬಂದಂತ ಭಕ್ತರಿಗೆ ವಿತರಿಸಲಾಯಿತು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಯಿತು.

ಐತಿಹಾಸಿಕ ಶ್ರೀ ಚನ್ನಕೇಶವ ದೇಗುಲದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ನಮ್ಮ ಭಾರತ ದೇಶದ ಸೈನಿಕರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ ಹಾಗೂ ನರಸಿಂಹ ಪ್ರಿಯ ಭಟ್ ಮಾತನಾಡಿ, ಸೈನಿಕರ ಹಾಗೂ ಆಪರೇಷನ್ ಸಿಂದೂರದಲ್ಲಿ ಭಾಗವಹಿಸಿದ್ದ ಸೈನಿಕರಿಗೆ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪ, ಅಷ್ಟೋತ್ತರ ಸ್ತುತಿ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದ್ದು ನಂತರ ಮಹಾಮಂಗಳಾರತಿ ವಿಶೇಷ ಪ್ರಸಾದ ವಿನಿಯೋಗ ಮಾಡಿದ್ದು ಬಂದಂತ ಭಕ್ತರಿಗೆ ವಿತರಿಸಲಾಯಿತು ಎಂದರು.

ಈ ವೇಳೆ ಸೈನಿಕರ ಹಾಗು ಪ್ರಧಾನಿ ಹೆಸರಿನಲ್ಲಿ ಸಂಕಲ್ಪ ನೆರವೇರಿಸಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಶಾಸಕ ಎಚ್ ಕೆ ಸುರೇಶ್, ಒಂದು ವಾರದ ಹಿಂದಷ್ಟೇ ಪಾಕಿಸ್ತಾನದ ನರಹೇಡಿಗಳು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದು ಅಂದು ತಮ್ಮ ಸೌಭಾಗ್ಯವನ್ನು ಕಳೆದುಕೊಂಡಿದ್ದ ಸಹೋದರಿಯರಿಗೆ ಮಾತು ಕೊಟ್ಟಂತೆ ಪ್ರಧಾನಿ ಇಂದು ಆಪರೇಷನ್ ಸಿಂದೂರ ಎಂಬ ಹೆಸರಿನಲ್ಲಿ ದಾಳಿ ನಡೆಸಿ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮುನ್ನುಡಿ ಬರೆದಿದ್ದಾರೆ. ಅದರಂತೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿರುವ ಭಾರತ ಸೇನೆಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ದೇಶದ ಎಲ್ಲಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ದೇಶದ ಎಲ್ಲಾ ನಾಗರಿಕರು ನಮ್ಮನ್ನು ರಕ್ಷಣೆ ಮಾಡುತ್ತಿರುವ ಅವರಿಗೆ ಧೈರ್ಯ ತುಂಬಲು ಪ್ರತಿಯೊಬ್ಬರು ಪ್ರಾರ್ಥನೆ ಸಲ್ಲಿಸಬೇಕೆಂದು ಮನವಿ ಮಾಡಿದರು.