ಶ್ರೀ ಚೆನ್ನಕೇಶವಸ್ವಾಮಿಗೆ ಮಳೆಗಾಗಿ ವಿಶೇಷ ಪೂಜೆ

| Published : May 15 2024, 01:37 AM IST

ಶ್ರೀ ಚೆನ್ನಕೇಶವಸ್ವಾಮಿಗೆ ಮಳೆಗಾಗಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು ಎಂದು ಪುರಸಭಾ ಮಾಜಿ ಅಧ್ಯಕ್ಷ, ದೇಗುಲದ ಅಧ್ಯಕ್ಷ ಟಿ.ಕೆ.ರಮೇಶ್ ತಿಳಿಸಿದ್ದಾರೆ.

ಪಟ್ಟಣದ 5ನೇ ವಾಡ್೯ನ ರೈಲ್ವೈ ನಿಲ್ದಾಣ ಹತ್ತಿರ ಇಂದಿರಾ ನಗರದ ದೇವಾಲಯ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು ಎಂದು ಪುರಸಭಾ ಮಾಜಿ ಅಧ್ಯಕ್ಷ, ದೇಗುಲದ ಅಧ್ಯಕ್ಷ ಟಿ.ಕೆ.ರಮೇಶ್ ತಿಳಿಸಿದ್ದಾರೆ.

ಪಟ್ಟಣದ 5ನೇ ವಾಡ್೯ನ ರೈಲ್ವೈ ನಿಲ್ದಾಣ ಹತ್ತಿರ ಇಂದಿರಾ ನಗರದಲ್ಲಿ ಇರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯ ದಲ್ಲಿ ನಾಡಿನಲ್ಲಿ ಆಗಿರುವ ಮಳೆ-ಬೆಳೆ, ಅನಾವೃಷ್ಟಿಯಿಂದ ಬಳಲುತ್ತಿರುವ ರೈತರು, ಭಕ್ತರಿಗಾಗಿ ಹಾಗೂ ವರುಣನ ಕೃಪೆಗಾಗಿ ಶ್ರೀ ಸ್ವಾಮಿಗೆ ವಿವಿಧ ಪೂಜಾ ಕೈಂಕರ್ಯಯೊಂದಿಗೆ ಪುಷ್ಪಾಲಂಕಾರ, ಮಹಾಮಂಗಳಾರತಿ ಯೊಂದಿಗೆ ಒಳ್ಳೆಯ ಮಳೆ-ಬೆಳೆ, ಆರೋಗ್ಯ, ಸಮೃದ್ಧಿ ಸಿಗಲೆಂದು ವಿಶೇಷ ಪೂಜೆ ಏರ್ಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ. ಪಟ್ಟಣದ 5ನೇ ವಾಡ್೯ಮಾಜಿ ಪುರಸಭಾ ಸದಸ್ಯ (ಬ್ಯಾಟರಿ)ಕೃಷ್ಣ ಅವರು ಮಾತನಾಡಿ ಮಳೆ ಬಾರೆದೆ ತರೀಕೆರೆ ಮತ್ತು ಸುತ್ತಮುತ್ತಲಿನ ಭೂ ಪ್ರದೇಶದ ಅಂತರ್ಜಲ ಕುಸಿದಿದೆ, ತೋಟಗಳು ಒಣಗುತ್ತಿವೆ, ಭೂಮಿಯನ್ನು ಎಷ್ಟು ಕೊರೆದರೂ ನೀರಿನ ಸುಳಿವೇ ಕಾಣುತ್ತಿಲ್ಲ, ದೇವರ ಕೃಪೆಯಿಂದ ಒಳ್ಳೆಯ ಮಳೆಗಾಗಿ ಪ್ರಾಥ೯ನೆ ಮತ್ತು ವಿಶೇಷ ಪೂಜೆ. ನೆರೆವೇರಿ ಸಲಾಯಿತು ಎಂದು ತಿಳಿಸಿದರು, ದೇಗುಲದ ಆರ್ಚಕರಾದ ಕೇಶವ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಕಾಯ೯ಕ್ರಮದಲ್ಲಿ ಗುರುಮೂತಿ೯, ವಕೀಲರಾದ ಜ್ಯೋತಿ, ಶಾಂತಕುಮಾರ್, ಟಿ.ಪಿ.ಆರ್.ಕೇಶವ, ಶ್ರೀನಿವಾಸ ಮತ್ತಿತರರು ಭಾಗವಹಿಸಿದ್ದರು.14ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಶ್ರೀ ಚೆನ್ನಕೇಶವಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಕೈಂಕರ್ಯ ಏರ್ಪಡಿಸಲಾಗಿತ್ತು.