ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಪ್ರತಿಮ ವ್ಯಕ್ತಿ. ನನ್ನ ಜೀವನವೇ ನನ್ನ ಸಂದೇಶ ಎಂಬುದನ್ನು ಅವರು ಬೋಧಿಸಿದ್ದಕ್ಕಿಂತ ಹೆಚ್ಚಾಗಿ ಬದುಕಿ ತೋರಿಸಿದರು. ಸತ್ಯ, ಅಹಿಂಸೆ, ಸರಳತೆ ಮತ್ತು ಸ್ವಾವಲಂಬನೆಯನ್ನು ತಮ್ಮ ದಿನನಿತ್ಯದ ಬದುಕಿನ ಭಾಗವಾಗಿಸಿಕೊಂಡರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಗಾಂಧೀಜಿಯವರ ಚಿತಾಭಸ್ಮ ಬಿಟ್ಟ ಸ್ಥಳದ ಸ್ಮಾರಕಕ್ಕೆ ಸಂಘ-ಸಂಸ್ಥೆಗಳ ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲಕ ಐಕ್ಯ ಅಲಯನ್ಸ್ ಸಂಸ್ಥೆ ಹಾಗೂ ಪ್ರಜ್ಞಾವಂತರ ವೇದಿಕೆಯಿಂದ ಮಹಾತ್ಮಗಾಂಧಿಜೀಯವರ ಹುತಾತ್ಮ ದಿನ ಆಚರಿಸಲಾಯಿತು.

ಐಕ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಎನ್.ಸರಸ್ವತಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಪ್ರತಿಮ ವ್ಯಕ್ತಿ. ನನ್ನ ಜೀವನವೇ ನನ್ನ ಸಂದೇಶ ಎಂಬುದನ್ನು ಅವರು ಬೋಧಿಸಿದ್ದಕ್ಕಿಂತ ಹೆಚ್ಚಾಗಿ ಬದುಕಿ ತೋರಿಸಿದರು. ಸತ್ಯ, ಅಹಿಂಸೆ, ಸರಳತೆ ಮತ್ತು ಸ್ವಾವಲಂಬನೆಯನ್ನು ತಮ್ಮ ದಿನನಿತ್ಯದ ಬದುಕಿನ ಭಾಗವಾಗಿಸಿಕೊಂಡರು. ಈ ತತ್ವಗಳು ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಬಹುಮುಖ್ಯವಾಗಿ ಮಹಾತ್ಮ ಗಾಂಧೀಜಿಯವರ ದೈವೈಕ್ಯವಾದ ದಿನಗಳನ್ನು ಸ್ವಾತಂತ್ರ್ಯ ಹೋರಾಟದ ವೀರರ ತ್ಯಾಗವನ್ನು ಸಂಧರ್ಭದಲ್ಲಿ ಸ್ಮರಿಸಲು ಮತ್ತು ಅವರ ಆದರ್ಶಗಳನ್ನು ಪಾಲಿಸಲು ಮೀಸಲಿಡಲಾಗಿದೆ ಎಂದರು.

ಪುರಸಭೆ ಮಾಜಿ ಸದಸ್ಯೆ ನಳಿನ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಪಶ್ಚಿಮ ವಾಹಿನಿಯ ಕಾವೇರಿ ನದಿಯಲ್ಲಿ ಬಿಟ್ಟು ಸ್ಮರಣಾರ್ಥವಾಗಿ ಸ್ಮಾರಕವನ್ನು ನಿಲ್ಲಿಸಲಾಗಿದ್ದರೂ ಅದರ ಪಕ್ಕದಲ್ಲಿ ನಿಲ್ಲಲು ಸರಿಯಾದ ಸ್ಥಳವಿಲ್ಲದೆ ನೆನೆಗುಂದಿಗೆ ಬಿದ್ದಿದೆ. ಇಂತಹ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಗುರುತಿಸಿ ಭೇಟಿಗರಿಗೆ ಮೂಲ ಸೌಕರ್ಯ ಕಲ್ಪಿಸಿ ಉತ್ತಮ ತಾಣವನ್ನಾಗಿ ಪಟ್ಟಣದ ಪುರಸಭೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್ ಜಯಶಂಕರ್, ಐಕ್ಯ ಅಲಯನ್ಸ್ ಸಂಸ್ಥೆ ಖಜಾಂಚಿ ಗಾಯತ್ರಿ, ಸದಸ್ಯರಾದ ಲಕ್ಷ್ಮೀದೇವಿ, ಪ್ರಿನ್ಸ್ ಅಧ್ಯಕ್ಷ ಪುಟ್ಟಸ್ವಾಮಿ, ಶಿಕ್ಷಕಿ ಎಚ್.ಜೆ ಶೀಲಾ, ಶಿವಕುಮಾರ್, ಬಾಲು, ಸಿ.ನಾರಾಯಣ, ಚಿಕ್ಕತಮೇಗೌಡ ಸೇರಿದಂತೆ ಇತರರು ಇದ್ದರು.ಬ್ಯಾನರ್, ಫ್ಲೆಕ್ಸ್, ಬಂಟಿಂಕ್ಸ್, ಜಾಹಿರಾತು ಫಲಕ ಹಾಕಲು ಅನುಮತಿ ಕಡ್ಡಾಯ

ಮಳವಳ್ಳಿ: ಪಟ್ಟಣದ ಫುಟ್ ಪಾತ್, ರಸ್ತೆ ವಿಭಜಕ ಸೇರಿದಂತೆ ವಿದ್ಯುತ್ ಕಂಬಗಳಿಗೆ ಹಾಗೂ ಎಲ್ಲೆಂದರಲ್ಲಿ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್ ಹಾಗೂ ಜಾಹಿರಾತು ಫಲಕ ಹಾಕಲು ಪುರಸಭೆಯಿಂದ ಅನುಮತಿ ಕಡ್ಡಾಯಗೊಳಿಸಲಾಗಿದೆ. ಎಲ್ಲೆಂದರಲ್ಲಿ ಬ್ಯಾನರ್, ಫ್ಲೆಕ್ಸ್ ಕಟ್ಟುವುದರಿಂದ ವಾಹನ ಸವಾರರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಹೀಗಾಗಿ ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆಯಿಂದ ನಿಗದಿತ ಶುಲ್ಕ ಪಾವತಿಸಿ ಲಿಖಿತವಾಗಿ ಷರತ್ತು ಬದ್ಧ ಅನುಮತಿ ಪತ್ರ ಪಡೆಯಬೇಕು. ಅನುಮತಿ ಪಡೆಯದೆ ಬ್ಯಾನರ್, ಫ್ಲೆಕ್ಸ್, ಸೇರಿದಂತೆ ಜಾಹಿರಾತು ಫಲಕಗಳನ್ನು ಅಳವಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ತಿಳಿಸಿದ್ದಾರೆ.