ಪಾತಾಳೇಶ್ವರ ದೇಗುಲದಲ್ಲಿ ಶಿವರಾತ್ರಿ ಪೂಜೆ

| Published : Mar 09 2024, 01:32 AM IST

ಪಾತಾಳೇಶ್ವರ ದೇಗುಲದಲ್ಲಿ ಶಿವರಾತ್ರಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ಸಹಕಾರದಿಂದ ಉತ್ತಮ ಸೇವೆ ಮಾಡಲು ಸಾಧ್ಯ ಎಂದು ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಪೈಂಟ್ ರವಿ ತಿಳಿಸಿದರು. ಬೇಲೂರಿನ ಪಾತಾಳೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು.

ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್‌ನಿಂದ ಆಯೋಜನೆ । ಪ್ರಸಾದ ವಿತರಣೆ, ಭಜನೆ ಆಯೋಜನೆಕನ್ನಡಪ್ರಭ ವಾರ್ತೆ ಬೇಲೂರು

ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ಸಹಕಾರದಿಂದ ಉತ್ತಮ ಸೇವೆ ಮಾಡಲು ಸಾಧ್ಯ ಎಂದು ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಪೈಂಟ್ ರವಿ ತಿಳಿಸಿದರು.

ಬೇಲೂರು ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ಶ್ರೀ ಪಾತಾಳೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ ನೆರವೇರಿಸಿ ಮಾತನಾಡಿ, ‘ಶ್ರೀ ಪಾತಾಳೇಶ್ವರ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ನಮ್ಮ ಪಾತಾಳೇಶ್ವರ ಸೇವಾ ಟ್ರಸ್ಟಿನ ಎಲ್ಲಾ ಸದಸ್ಯರ ಸಹಕಾರದಿಂದ ಅದ್ಧೂರಿಯಾಗಿ ವಿಶೇಷ ಪೂಜೆ ಮಾಡುವ ಮೂಲಕ ಪಾತಾಳೇಶ್ವರ ಸ್ವಾಮಿಯವರ ಸೇವೆ ಮಾಡುತ್ತ ಬಂದಿದ್ದೇವೆ. ಅದೇ ರೀತಿ ಈ ವರ್ಷವೂ ಸಹ ಅದ್ಧೂರಿಯಾಗಿ ಪೂಜೆ ನೆರವೇರಿಸುವ ಉದ್ದೇಶದಿಂದ ಶುಕ್ರವಾರ ಬೆಳಿಗ್ಗೆಯಿಂದಲೇ ಪಾತಾಳೇಶ್ವರನಿಗೆ ವಿಶೇಷವಾಗಿ ಗಂಗಾಭಿಷೇಕ ಪಂಚಾಭಿಷೇಕ ಪುಷ್ಪಾಭಿಷೇಕ ಸೇರಿದಂತೆ ವಿಶೇಷ ಪುಷ್ಪಾಲಂಕಾರ, ಮಹಾ ಮಂಗಳಾರತಿ ಮಾಡಲಾಗಿದೆ. ಭಕ್ತಾದಿಗಳಿಗೆ ಟ್ರಸ್ಟ್ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಗಿದೆ. ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ಬರುವಂತೆ ಉತ್ತಮ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಮನರಂಜನೆಗಾಗಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಮತ್ತು ವಿವಿಧ ಮಕ್ಕಳಿಂದ ಭರತನಾಟ್ಯ ಏರ್ಪಡಿಸಲಾಗಿದೆ ಎಂದು ಹೇಳಿದರು.

ಶ್ರೀ ಪಾತಾಳೇಶ್ವರ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಬಿಸಿ ಜಗದೀಶ್ ಮಾತನಾಡಿ, ಶ್ರೀ ಪಾತಾಳೇಶ್ವರ ದೇವಾಲಯ ತಾಲೂಕಿನಲ್ಲೆ ಹೆಸರುವಾಸಿಯಾಗಿದ್ದು ಮಹಾ ಶಿವರಾತ್ರಿ ದಿನ ಪಟ್ಟಣದ 23 ವಾರ್ಡು ಸೇರಿದಂತೆ ತಾಲೂಕಿನಲ್ಲೆಡೆ ಸಾವಿರಾರು ಭಕ್ತಾದಿಗಳು ಬಂದು ದರ್ಶನ ಪಡೆದಿದ್ದಾರೆ ಎಂದರು.

ಅರ್ಚಕ ವೇದಬ್ರಹ್ಮ ಮಂಜುನಾಥ್ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಜನಿಸಿದ ಶಿವನು ವಿಷವನ್ನು ಸೇವಿಸಿದ ಸಂದರ್ಭವನ್ನು ನೆನಪಿಸಲು ಪ್ರಪಂಚದಾದ್ಯಂತ ರಾತ್ರಿ ಪೂರ್ಣ ಜಾಗರಣೆ ಮಾಡಿ ಶಿವನನ್ನು ಸ್ಮರಿಸುತ್ತಾರೆ. ಅದರಿಂದ ಮಹಾ ಶಿವರಾತ್ರಿ ದಿನ ಶಿವನ ಭಕ್ತರು ಆರಾಧನೆ ಮಾಡುವ ಮೂಲಕ ಶಿವನಾಮ ಜಪಿಸುತ್ತಾರೆ. ಇದರಿಂದ ದೇಶಾದ್ಯಂತ ಉತ್ತಮ ಮಳೆ, ಬೆಳೆ ಎಲ್ಲಾ ಸುಸೂತ್ರವಾಗಿ ನಡೆದು ಲೋಕ ಕಲ್ಯಾಣ ಪ್ರಾಪ್ತಿಯಾಗಲಿದೆ ಎಂದರು.

ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟಿನ ಪದಾಧಿಕಾರಿಗಳಾದ ಕೃಷ್ಣಕುಮಾರ್. ಬಿ.ವಿ.ರವಿ, ಎಂ.ಡಿ. ಬಸವರಾಜು, ಪಾನಿಪುರಿ ಕುಮಾರ್. ಪುಟ್ಟಸ್ವಾಮಿಗೌಡ, ಯು.ಎಚ್.ನಾಗರಾಜ್, ಎಸ್‌.ಟಿ.ಯಲ್ಲೇಶ್, ಬೇಕರಿ ಮಂಜುನಾಥ್, ಬಿ.ವಿ.ದಿನೇಶ್. ರಮೇಶ್ ಇದ್ದರು. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಪಾತಾಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.