ಗುಡ್ ಫ್ರೈಡೆ ಪ್ರಯುಕ್ತ ವಿಶೇಷ ಪೂಜೆ, ಪ್ರಾರ್ಥನೆ

| Published : Mar 30 2024, 12:45 AM IST

ಸಾರಾಂಶ

ಗುಡ್‌ ಫ್ರೈಡೆ ಪ್ರಯುಕ್ತ ಪ್ರವಾಸಿ ಮಂದಿರ ಸಮೀಪದ ಸೇಂಟ್‌ ಜಾರ್ಜ ಜಾಕೋ ಬೈಟ್ ಸಿರಿಯಾಕ್‌ ಆರ್ಥೋ ಡೊಕ್ಸ್‌ ಕಥೀಡ್ರಲ್‌ ಚರ್ಚನಲ್ಲಿ ಮುಖ್ಯ ಧರ್ಮ ಗುರುಗಳಾದ ಫಾ.ವಿ.ಪಿ.ಜಾನ್ಸನ್ ಅವರು ವಿಶೇಷ ಪೂಜೆ ಸಲ್ಲಿಸಿದರು.

ಸೇಂಟ್‌ ಜಾರ್ಜ ಜಾಕೋಬೈಟ್ ಸಿರಿಯಾಕ್‌ ಚರ್ಚನ ಧರ್ಮ ಗುರು ಫಾ.ವಿ.ಪಿ.ಜಾನ್ಸನ್

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಗುಡ್‌ ಪ್ರೈಢೆ ಪ್ರಯುಕ್ತ ಪ್ರವಾಸಿ ಮಂದಿರ ಸಮೀಪದ ಸೇಂಟ್‌ ಜಾರ್ಜ ಜಾಕೋ ಬೈಟ್ ಸಿರಿಯಾಕ್‌ ಆರ್ಥೋ ಡೊಕ್ಸ್‌ ಕಥೀಡ್ರಲ್‌ ಚರ್ಚನಲ್ಲಿ ಮುಖ್ಯ ಧರ್ಮ ಗುರುಗಳಾದ ಫಾ.ವಿ.ಪಿ.ಜಾನ್ಸನ್ ಅವರು ವಿಶೇಷ ಪೂಜೆ ಸಲ್ಲಿಸಿದರು.

ಸಾವಿರಾರು ಭಕ್ತರು ಶುಕ್ರವಾರ ಚರ್ಚ್‌ ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಧರ್ಮ ಗುರು ವಿ.ಪಿ.ಜಾನ್ಸನ್‌ ಏಸು ಕ್ರಿಸ್ತನ ಬಗ್ಗೆ ಸಂದೇಶ ನೀಡಿ, ವಿಶ್ವದಾದ್ಯಂತ ಕ್ರೈಸ್ತ ಸಮುದಾಯದವರು ಆಚರಿಸುವ ಗುಡ್‌ ಫ್ರೈಡೆ ದಿನವು ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ಮತ್ತು ಮರಣವನ್ನು ಸ್ಮರಿಸುವ ದಿನವಾಗಿದೆ.

ಮಾನವೀಯತೆಯ ಪಾಪಗಳಿಗಾಗಿ ಯೇಸುವಿನ ತ್ಯಾಗವನ್ನು ಪ್ರತಿಬಿಂಬಿಸಲು, ಪ್ರಾರ್ಥನೆ ಮಾಡಲು ಮತ್ತು ನೆನಪಿಸಿಕೊಳ್ಳಲು ಇಂದು ಉತ್ತಮ ದಿನವಾಗಿದೆ. ಈ ವಿಶೇಷ ದಿನದಂದು ಸ್ನೇಹಿತರು ಮತ್ತು ಕುಟುಂಬದವರು ಒಟ್ಟುಗೂಡಿ ಸಂದೇಶಗಳನ್ನು ಹಂಚಿಕೊಳ್ಳಬೇಕು. ಕ್ರಿಶ್ಚಿಯನ್ ಧರ್ಮದ ನಂಬಿಕೆಯ ಪ್ರಕಾರ ಪ್ರೀತಿ ಮತ್ತು ತ್ಯಾಗದ ಪ್ರತೀಕವಾದ ಯೇಸುವನ್ನು ಈ ದಿನ ನೆನೆಯವುದು ನಮ್ಮ ಪ್ರಮುಖ ಕರ್ತವ್ಯವಾಗಿದೆ ಎಂದರು.

ಪಟ್ಟಣದ ಲಿಟಲ್‌ ಪ್ಲವರ್‌ ಚರ್ಚ್‌, ಬಸ್ತಿಮಠ ಸಮೀಪದ ಸೇಟ್‌ ಮೇರೀಸ್‌ ಚರ್ಚನಲ್ಲೂ ವಿಶೇಷ ಪೂಜೆ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.