ಗುರುವಿನ ಸ್ಥಾನಕ್ಕೆ ವಿಶೇಷ ಮನ್ನಣೆ: ಸಚಿವ ದರ್ಶನಾಪುರ

| Published : Dec 29 2023, 01:32 AM IST

ಗುರುವಿನ ಸ್ಥಾನಕ್ಕೆ ವಿಶೇಷ ಮನ್ನಣೆ: ಸಚಿವ ದರ್ಶನಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವ.

ಕನ್ನಡಪ್ರಭ ವಾರ್ತೆ ಸುರಪುರ

ಭಾರತ ಇತಿಹಾಸದಲ್ಲಿ ಗುರುವಿನ ಸ್ಥಾನಕ್ಕೆ ವಿಶಿಷ್ಠ ಮನ್ನಣೆ ನೀಡಲಾಗಿದೆ. ಗುರುಗಳನ್ನು ನಾವು ನಿತ್ಯ ಪೂಜೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ತಾಲೂಕಿನ ಕೆಂಭಾವಿ ಪಟ್ಟಣದ ಸಮೀಪದ ಮುದನೂರ ಗ್ರಾಮದ ಕೋರಿ ಸಿದ್ಧೇಶ್ವರ ಶಾಖಾ ಮಠದ ಕಂಠಿ ಮಠದಲ್ಲಿ ನಡೆದ 20ನೇ ಜಾತ್ರಾ ಮಹೋತ್ಸವ ನಿಮಿತ್ತ ಮಂದಿರದ ಕಟ್ಟಡದ ಭೂಮಿ ಪೂಜೆ, ಪೀಠಾಧಿಪತಿ ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರ ಪಂಚ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಾಗೂ ಜಾತ್ರೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಠ-ಮಾನ್ಯಗಳು ತಮ್ಮ ಸ್ವಾರ್ಥ ಸಾಧನೆಯನ್ನು ಬದಿಗಿಟ್ಟು ಭಕ್ತರ ಏಳಿಗೆಗೆ ಸದಾ ಶ್ರಮಿಸುತ್ತಿವೆ. ಧರ್ಮದ ಉದ್ಧಾರಕ್ಕೆ, ಉತ್ತಮ ಸಮಾಜದ ನಿರ್ಮಾಣಕ್ಕೆ ಭಕ್ತಿಯ ಕೇಂದ್ರವಾಗಿರುವ ಮಠಗಳನ್ನು ಮತ್ತು ಗುರುಗಳನ್ನು ನಾವು ಭಕ್ತಿಯಿಂದ ಕಾಣಬೇಕು ಎಂದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು, ಕ್ಷೇತ್ರದ ಅಧಿ ದೇವತೆಯಾದ ದೇವರ ದಾಸೀಮಯ್ಯನವರ ಪುಣ್ಯಭೂಮಿಯಾದ ಈ ಗ್ರಾಮದಲ್ಲಿ ಮಲ್ಲಿಕಾರ್ಜುನ ಶಿವಾಚಾರ್ಯರು ಮಾಡುತ್ತಿರುವ ಧರ್ಮ ಕಾರ್ಯಗಳು ಅತ್ಯತ ಶ್ರೇಷ್ಠ. ಪಟ್ಟಾಧಿಕಾರ ಮಹೋತ್ಸವದ ಪಂಚ ವರ್ಷದ ಈ ಸುಸಂದರ್ಭದಲ್ಲಿ ಅವರಿಗೆ ತಪೋರತ್ನ ಬಿರುದನ್ನು ನೀಡಿ ಸನ್ನಿಧಿಯವರು ಆಶೀರ್ವದಿಸಿದ್ದಾರೆ ಎಂದರು.

ಆಲಮೇಲ, ಗುಂಡಕನಾಳ, ನಾಗಠಾಣ, ಕೊಣ್ಣೂರ, ದೇವದುರ್ಗ ಸೇರಿದಂತೆ ಹಲವು ಪೀಠಾಧಿಪತಿಗಳು ಭಕ್ತರಿಗೆ ಧರ್ಮ ಸಂದೇಶ ನೀಡಿದರು.

ಪೀಠಾಧಿಪತಿ ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಸಿದ್ಧನಗೌಡ ಪೊಲೀಸ್ ಪಾಟೀಲ್, ಶಂಕ್ರಣ್ಣ ವಣಕ್ಯಾಳ, ಮಲ್ಲಿಕಾರ್ಜುನ ರೆಡ್ಡಿ, ಸಿದ್ಧನಗೌಡ, ಮಲ್ಲು ಬಾದ್ಯಾಪೂರ, ಸಿದ್ಧನಗೌಡ ಹೆಬ್ಬಾಳ, ಚೆನ್ನಪ್ಪಗೌಡ ಬೆಕಿನಾಳ, ಚೆನ್ನಾರೆಡ್ಡಿ ಪಾಟೀಲ, ಬಸನಗೌಡ ಮುದನೂರ, ಮಡಿವಾಳಪ್ಪಗೌಡ ಬಳವಾಟ, ಸಿದ್ಧಬಸಯ್ಯ, ಚಂದ್ರಶೇಖರಗೌಡ ಕಾಚಾಪೂರ, ರಾಘವೇಂದ್ರ ಕೊಪ್ಪಳ, ರುದ್ರು ಮರಕಟ್ಟಿ, ಮಹಿಪಾಳರೆಡ್ಡಿ, ಯಮನಪ್ಪಗೌಡ ಸೇರಿದಂತೆ ಇತರರಿದ್ದರು.