ಸಾರಾಂಶ
ಕುಕ್ಕುಂದೂರಿನ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯಲ್ಲಿ ಡಾ. ಎನ್.ಎಸ್.ಎಂ.ಎ. ಪ್ರಥಮ ದರ್ಜೆ ಕಾಲೇಜಿನ ಎನ್. ಎಸ್. ಎಸ್. ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದ ಮೂಲಕ ವಿಶೇಷವಾಗಿ ರಾಜ್ಯೋತ್ಸವವನ್ನು ಆಚರಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಇಲ್ಲಿನ ಕುಕ್ಕುಂದೂರಿನ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯಲ್ಲಿ ಡಾ. ಎನ್.ಎಸ್.ಎಂ.ಎ. ಪ್ರಥಮ ದರ್ಜೆ ಕಾಲೇಜಿನ ಎನ್. ಎಸ್. ಎಸ್. ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದ ಮೂಲಕ ವಿಶೇಷವಾಗಿ ರಾಜ್ಯೋತ್ಸವವನ್ನು ಆಚರಿಸಿದರು. ಇದೇ ಸಂದರ್ಭದಲ್ಲಿ ವಿಜೇತ ಶಾಲೆಗೆ ಅಗತ್ಯ ದಿನಸಿ ವಸ್ತುಗಳನ್ನು ಹಸ್ತಾಂತರಿಸಿದರು ಹಾಗೂ ಶಾಲೆಯ ವಿಶೇಷ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಅವರನ್ನು ಸಂತೋಷಪಡಿಸಿದರು.ಈ ಸಂದರ್ಭ ಕಾಲೇಜಿನ ಎನ್. ಎಸ್. ಎಸ್. ಯೋಜನಾಧಿಕಾರಿಗಳಾದ ನೇಮಿರಾಜ್ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಸೌಮ್ಯಶ್ರೀ, ದಿವ್ಯಾಕ್ಷ್, ಚಿನ್ಮಯ್, ಸದಾನಂದ್, ರೀತು, ಕಾರ್ಯದರ್ಶಿ ತಂಶೀರ್, ಮನಿಷ, ಶಮಂತ್, ಶ್ರಾವ್ಯ, ಶರತ್, ಖುಷಿ ಭಾಗವಹಿಸಿದ್ದರು.
ಶಾಲೆಯ ವಿಶೇಷ ಶಿಕ್ಷಕಿ ಹರ್ಷಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಆಡಳಿತ ವಿಶ್ವಸ್ಥರಾದ ಹರೀಶ್ ಸ್ವಾಗತಿಸಿ ವಿಶೇಷ ಶಿಕ್ಷಕಿ ಶ್ರೀನಿಧಿ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))