ಸಾರಾಂಶ
ಹುಬ್ಬಳ್ಳಿ: ಆರ್ಆರ್ಬಿ (ರೈಲ್ವೆ ನೇಮಕಾತಿ ಮಂಡಳಿ) ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲಕ್ಕಾಗಿ ಶ್ರೀಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕರ್ನೂಲ್ ಸಿಟಿ ನಿಲ್ದಾಣಗಳ ನಡುವೆ 4 ಟ್ರಿಪ್ ವಿಶೇಷ ಕಾಯ್ದಿರಿಸದ ರೈಲು ಸೇವೆ ಓಡಿಸಲು ರೈಲ್ವೆ ಮಂಡಳಿ ಸೂಚಿಸಿದೆ.
ರೈಲು ಸಂಖ್ಯೆ 07315 ಎಸ್ಎಸ್ಎಸ್ ಹುಬ್ಬಳ್ಳಿ-ಕರ್ನೂಲ್ ಸಿಟಿ ಕಾಯ್ದಿರಿಸದ ವಿಶೇಷ ಎಕ್ಸ್ಪ್ರೆಸ್ ರೈಲು ನ. 24, 25, 26 ಮತ್ತು 27ರಂದು ರಾತ್ರಿ 8.15ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 6ಕ್ಕೆ ಕರ್ನೂಲ್ ಸಿಟಿ ನಿಲ್ದಾಣ ತಲುಪಲಿದೆ. ರೈಲು ಸಂಖ್ಯೆ 07316 ಕರ್ನೂಲ್ ಸಿಟಿ-ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ಎಕ್ಸ್ಪ್ರೆಸ್ ರೈಲು ನ. 25, 26, 27 ಮತ್ತು 28ರಂದು ಬೆಳಗ್ಗೆ 7.30ಕ್ಕೆ ಕರ್ನೂಲ್ ಸಿಟಿ ನಿಲ್ದಾಣದಿಂದ ಹೊರಟು, ಅದೇ ದಿನ ಸಂಜೆ 4.15ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ಗುಂತಕಲ್ ಮತ್ತು ಡೋನ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಈ ರೈಲು ಸಾಮಾನ್ಯ ದ್ವಿತೀಯ ದರ್ಜೆ (8) ಮತ್ತು ವಿಕಲಾಂಗರ ಬೋಗಿಗಳೊಂದಿಗೆ ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ (2) ಸೇರಿದಂತೆ 10 ಬೋಗಿಗಳನ್ನು ಹೊಂದಿರುತ್ತದೆ. ಪ್ರಯಾಣಿಕರು ಅಧಿಕೃತ ಭಾರತೀಯ ರೈಲ್ವೆ ವೆಬ್ಸೈಬ್ (www.enquiry.indianrail.gov.in) ಗೆ ಭೇಟಿ ನೀಡುವ ಮೂಲಕ, NTES ಅಪ್ಲಿಕೇಶನ್ ಬಳಸಿ ಅಥವಾ 139ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ ಅಥವಾ ನಿರ್ಗಮನ ಸಮಯ ಮತ್ತು ಇತರ ಮಾಹಿತಿ ಪರಿಶೀಲಿಸಬಹುದು ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.