ಜಿಲ್ಲಾದ್ಯಂತ ಮತದಾರರ ವಿಶೇಷ ನೋಂದಣಿ ಅಭಿಮಾನ

| Published : Oct 28 2025, 12:03 AM IST

ಸಾರಾಂಶ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ- 2026ರ ಮತದಾರರ ವಿಶೇಷ ನೋಂದಣಿ ಅಭಿಯಾನವು ರಾಯಚೂರು ಸೇರಿದಂತೆ ಸಿಂಧನೂರು, ಮಾನ್ವಿ, ಮಸ್ಕಿ, ಲಿಂಗಸೂರ, ದೇವದುರ್ಗ, ಸಿರವಾರ ಸೇರಿದಂತೆ ವಿವಿಧೆಡೆ ಅಕ್ಟೋಬರ್ 27ರಂದು ಯಶಸ್ವಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ- 2026ರ ಮತದಾರರ ವಿಶೇಷ ನೋಂದಣಿ ಅಭಿಯಾನವು ರಾಯಚೂರು ಸೇರಿದಂತೆ ಸಿಂಧನೂರು, ಮಾನ್ವಿ, ಮಸ್ಕಿ, ಲಿಂಗಸೂರ, ದೇವದುರ್ಗ, ಸಿರವಾರ ಸೇರಿದಂತೆ ವಿವಿಧೆಡೆ ಅಕ್ಟೋಬರ್ 27ರಂದು ಯಶಸ್ವಿಯಾಗಿ ನಡೆಯಿತು.

ಮಾನ್ವಿಯ ಕಾಕತೀಯ ಪ್ರೌಢಶಾಲೆ, ಸಿಂಧನೂರಿನ ಆದರ್ಶ ವಿದ್ಯಾಲಯ, ಲಿಂಗಸುಗೂರು ತಾಲೂಕು ಪಂಚಾಯತ್, ಮಸ್ಕಿ ಕೇಂದ್ರ ಶಾಲೆ, ಸಿರವಾರದ ಶ್ರೀ ಬಸವ ಪದವಿ ಪೂರ್ವ ಕಾಲೇಜು, ದೇವದುರ್ಗದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಸ್ವೀಪ್ ಸಮಿತಿಯಿಂದ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ ನಡೆಯಿತು.

ಲಿಂಗಸಗೂರು: ಮತದಾರರ ಪಟ್ಟಿ ತಯಾರಿಕೆ ಕುರಿತಂತೆ ಮಿಂಚಿನ ನೋಂದಣಿ ಅಭಿಯಾನ ಅಂಗವಾಗಿ ಲಿಂಗಸುಗೂರು ತಹಸೀಲ್ದಾರ್ ಸತ್ಯಮ್ಮ ಅವರು ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ನಮೂನೆ-19 ಅರ್ಜಿಗಳನ್ನು ಸ್ವೀಕರಿಸಿದರು.

ದೇವದುರ್ಗ: ಇಲ್ಲಿನ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವಿಶೇಷ ನೋಂದಣಿ ಅಭಿಯಾನ ನಡೆಯಿತು.

ಮಾನ್ವಿ: ಕಾಕತೀಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಹಸೀಲ್ದಾರರು ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಮತದಾರ ನೋಂದಣಿ ಕಾರ್ಯಕ್ರಮ ನಡೆಯಿತು. ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರು ನೋಂದಣಿ ಮಾಡಿಸಿದರು.

ಅರಕೇರಾದಲ್ಲಿ: ಅರಕೇರಾ ತಾಲೂಕಿನ ತಹಸೀಲ್ದಾರ್‌ ಅಮರೇಶ್ ಬಿರಾದಾರ ಅವರ ನೇತೃತ್ವದಲ್ಲಿ ವಿಶೇಷ ಮಿಂಚಿನ ನೋಂದಣಿ ಅಭಿಯಾನ ಅರಕೇರಾದಲ್ಲಿ ನಡೆಯಿತು. ಬಿಇಓ ಶಿವರಾಜ್ ಪೂಜಾರಿ, ಅಧಿಕಾರಿಗಳಾದ ಬಸವರಾಜ್ ಕಟ್ಟಿಮನಿ, ಸುಂಕದ್, ಶಿವಜಾತಪ್ಪ, ಅರುಣಕುಮಾರ್ ಹಾಗೂ ಇನ್ನಿತರರು ಇದ್ದರು.

ಅರ್ಹ ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಿ ನೋಂದಾಯಿಸಿಕೊಳ್ಳಿ

ರಾಯಚೂರು: ಅರ್ಹ ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಹೇಳಿದರು.

ಸ್ಥಳೀಯ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ರಿಮ್ಸ್) ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಸ್ವೀಪ್ ಸಮಿತಿ ಹಾಗೂ ರಿಮ್ಸ್ ಸಂಯುಕ್ತಾಶ್ರಯದಲ್ಲಿ ನಡೆದ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ- 2026ರ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಸೋಮವಾರ ಮಾತನಾಡಿದರು. ಅರ್ಹ ಮತದಾರರು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಎಲ್ಲ ಇಲಾಖೆಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ತಹಸೀಲ್ದಾರ್ ಸುರೇಶ್ ವರ್ಮ ಮಾತನಾಡಿದರು.

ಈ ಸಂದರ್ಭದಲ್ಲಿ ರಿಮ್ಸ್ ನಿರ್ದೇಶಕ ಡಾ.ಬಿ.ಹೆಚ್.ರಮೇಶ, ಆಡಳಿತ ಅಧಿಕಾರಿ ಗುರುಸಿದ್ದಯ್ಯ ಸ್ವಾಮಿ ಹಿರೇಮಠ, ತಾಪಂ ಇಒ ಚಂದ್ರಶೇಖರ ಪವಾರ್, ಡಿಡಿಪಿಐ ಕೆ.ಬಿ.ಬಡಿಗೇರ, ರಿಮ್ಸ್ ಹೆಚ್ಚುವರಿ ಪ್ರಾಂಶುಪಾಲ ಮಂಜುನಾಥ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇನ್ನಿತರರು ಇದ್ದರು.