ದೇವಾಲಯಗಳಲ್ಲಿ ಶ್ರೀ ಸ್ವಾಮಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಫಲಾಮೃತ ಅಭಿಷೇಕ, ವಿಶೇಷ ಪುಷ್ಪಾಲಂಕಾರ ಸೇವೆ ನೆರವೇರಿಸಲಾಯಿತು. ನಂತರ ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀಥ ಪ್ರಸಾದ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬಲಿಜ ಜನಾಂಗದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಎಚ್.ವಿ.ಸುಜಯ್ ಆಚಾರ್ ಹಾಗೂ ಶ್ರೀನಿವಾಸ ಆಚಾರ್ ಮತ್ತು ಎದುರು ಮುಖದ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಸುಬ್ರಮಣ್ಯ, ಶ್ರೀಕಂಠ ಹಾಗೂ ಅನ್ವಿತ್ ಪೂಜಾ ಕೈಂಕರ್ಯ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಕಂಚುಗಾರರ ಬೀದಿಯಲ್ಲಿರುವ ನೇಕಾರ ಕುರುಹಿನಶೆಟ್ಟಿ ಜನಾಂಗದ ಎದುರು ಮುಖದ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಾಲಯ, ತಾಲೂಕು ಆಫೀಸ್ ಹಿಂಭಾಗದ ರಿವರ್ ಬ್ಯಾಂಕ್ ರಸ್ತೆಯ ಬಲಿಜ ಜನಾಂಗದ ಶ್ರೀ ವೀರಾಂಜನೇಯ ದೇವಾಲಯ, ದೇವಾಂಗ ಶ್ರೀ ರಾಮಮಂದಿರ, ನದಿ ದಂಡೆಯ ವೀರಾಂಜಾನೇಯಸ್ವಾಮಿ ಹಾಗೂ ತುಳಸಿ ಆಂಜನೇಯಸ್ವಾಮಿ, ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.

ಪಟ್ಟಣದ ದೇವಾಲಯಗಳಲ್ಲಿ ಶ್ರೀ ಸ್ವಾಮಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಫಲಾಮೃತ ಅಭಿಷೇಕ, ವಿಶೇಷ ಪುಷ್ಪಾಲಂಕಾರ ಸೇವೆ ನೆರವೇರಿಸಲಾಯಿತು. ನಂತರ ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀಥ ಪ್ರಸಾದ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬಲಿಜ ಜನಾಂಗದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಎಚ್.ವಿ.ಸುಜಯ್ ಆಚಾರ್ ಹಾಗೂ ಶ್ರೀನಿವಾಸ ಆಚಾರ್ ಮತ್ತು ಎದುರು ಮುಖದ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಸುಬ್ರಮಣ್ಯ, ಶ್ರೀಕಂಠ ಹಾಗೂ ಅನ್ವಿತ್ ಪೂಜಾ ಕೈಂಕರ್ಯ ನೆರವೇರಿಸಿದರು.

ಪೂಜಾ ಮಹೋತ್ಸವದಲ್ಲಿ ಬಲಿಜ ಸಂಘದ ಜಿಲ್ಲಾಧ್ಯಕ್ಷ ಶಾಂತಶೆಟ್ಟಿ, ತಾಲೂಕು ಸಂಘದ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಉಪಾಧ್ಯಕ್ಷ ಎಚ್.ಎನ್. ರವೀಂದ್ರ, ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ಪಿ.ಶಂಕರ, ಹಿರಿಯರಾದ ಧರ್ಮರಾಜು, ಗೋವಿಂದರಾಜು, ಪ್ರವೀಣ್, ವಿಶಾಲಾಕ್ಷಿ, ವೇಣುಗೋಪಾಲ್, ನಾಗೇಂದ್ರಸ್ವಾಮಿ, ಡಾ. ಜಗದೀಶ್, ಧನ್ಯಕುಮಾರ್, ರಾಧಮ್ಮ, ರೂಪ ಹರೀಶ್, ಜಯಶ್ರೀ ಜಗನ್ನಾಥ್, ರಾಘವೇಂದ್ರ, ಆನಂದ, ನರಸಿಂಹ, ಇತರರು ಇದ್ದರು. ಕುರುಹಿನಶೆಟ್ಟಿ ಜನಾಂಗ ಕಮಿಟಿ ಅಧ್ಯಕ್ಷ ಎಚ್.ಎಸ್.ಸುದರ್ಶನ್, ಆರ್.ರಮೇಶ್, ಎಚ್.ಟಿ. ನರಸಿಂಹಶೆಟ್ಟಿ, ಬಾಲಕೃಷ್ಣ ಎಚ್.ಎನ್., ಎಚ್.ಆರ್‌. ಬಾಲಕೃಷ್ಣ, ಪ್ರದೀಪ್, ಎಚ್.ಎನ್.ಸುಬ್ರಮಣ್ಯ, ರಾಘವೇಂದ್ರ ಕುಮಾರ್, ಶ್ರೀಧರ್, ಎಚ್.ಎನ್. ರವಿಕುಮಾರ್, ದಯಾನಂದ, ರೋಹಿತ್, ಎಚ್.ಬಿ.ಹರೀಶ, ಜಗದೀಶ, ಗುರು, ಅಭಿಷೇಕ್, ದರ್ಶನ್, ರಂಗಸ್ವಾಮಿ, ಶ್ರೀನಿವಾಸ, ಎನ್.ಅಕ್ಷಯ್, ಬಾಲಕೃಷ್ಣ (ಗಗನ್), ವಿಜಯಕುಮಾರ್, ಸುಬ್ಬಣ್ಣ, ಇತರರು ಉಪಸ್ಥಿತರಿದ್ದರು.