ಸಾರಾಂಶ
ವೈಕುಂಠ ಏಕಾದಶಿ ನಿಮಿತ್ತ ಶುಕ್ರವಾರ ಹರಿಹರದ ಕ್ಷೇತ್ರ ಪಾಲಕ ಶ್ರೀ ಹರಿಹರೇಶ್ವರ ದೇವಸ್ಥಾನ ಗ್ರಾಮದೇವತೆ ಊರಮ್ಮ ಸೇರಿದಂತೆ ನಗರದ ಹಾಗೂ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
- ವೈಕುಂಠ ದಕ್ಷಿಣ ದ್ವಾರ ಮೂಲಕ ಸ್ವಾಮಿ ದರ್ಶನ ಪಡೆದ ಭಕ್ತರು - - - ಕನ್ನಡಪ್ರಭ ವಾರ್ತೆ ಹರಿಹರ
ವೈಕುಂಠ ಏಕಾದಶಿ ನಿಮಿತ್ತ ಶುಕ್ರವಾರ ಹರಿಹರದ ಕ್ಷೇತ್ರ ಪಾಲಕ ಶ್ರೀ ಹರಿಹರೇಶ್ವರ ದೇವಸ್ಥಾನ ಗ್ರಾಮದೇವತೆ ಊರಮ್ಮ ಸೇರಿದಂತೆ ನಗರದ ಹಾಗೂ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.ಹರಿಹರೇಶ್ವರ ದೇವಸ್ಥಾನ: ವೈಕುಂಠ ಏಕಾದಶಿಯ ನಿಮಿತ್ತ ಪೂರ್ವದಿಕ್ಕಿನ ಬಾಗಿಲನ್ನು ಮುಚ್ಚಿ ವೈಕುಂಠ ದ್ವಾರ ದಕ್ಷಿಣ ದ್ವಾರದ ಮೂಲಕ ಭಕ್ತರಿಗೆ ಸ್ವಾಮಿ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಬೆಳಗಿನ ಜಾವ 3.30ರಿಂದಲೇ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು. ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಆಷ್ಟೋತ್ತರ ನಾಮವಳಿ ನಡೆದವು. ವಿವಿಧ ರೀತಿಯ ಹೂವಿನ ಅಲಂಕಾರ ಮಾಡಲಾಯಿತು. 5.30ಕ್ಕೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಭಕ್ತರು ಕೊರೆವ ಚಳಿಯನ್ನೂ ಲೆಕ್ಕಿಸಿದೇ ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ, ಹರಿಹರೇಶ್ವರನ ದಿವ್ಯ ಮೂರ್ತಿಯನ್ನು ಸಾಲುಗಟ್ಟಿ ನಿಂತು ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ದೇವಸ್ಥಾನದ ವತಿಯಿಂದ ಲಾಡು ವಿತರಣೆ ಮಾಡಲಾಯಿತು. ದೇವಸ್ಥಾನ ಆವರಣದಲ್ಲಿ ಶುಕ್ರವಾರ ಸಂಜೆ ವೀಣಾ ವಾದನ ಹಾಗೂ ಮಕ್ಕಳಿಂದ ಭಜನೆ ಕಾರ್ಯಕ್ರಮ ನಡೆದವು.ಸಾಮೂಹಿಕ ದಸರಾ ಉತ್ಸವ ಸಮಿತಿ ಹಾಗೂ ನಾಮದೇವ ಸಿಂಪಿ ಸಮಾಜದ ವತಿಯಿಂದ ನಗರದ ನಡುವಲ ಪೇಟೆ ಬೀದಿಯ ನಾಮದೇವ ವಿಠ್ಠಲ ಮಂದಿರ ದೇವಸ್ಥಾನದಲ್ಲಿ ಬೆಳಗ್ಗೆ ಕಾಕಡಾರತಿ, ಸಂತರಿಂದ ಭಜನೆ, ವಿಠ್ಠಲ ರುಕ್ಮೀಣಿಗೆ ಪಂಚಾಮೃತ ಆಭಿಷೇಕ, ಮಹಾಭಿಷೇಕ, ವಿಷ್ಣು ಸಹಸ್ರನಾಮ ಪಠಣದೊಂದಿಗೆ ತುಳಸಿ ಅರ್ಚನೆ, ಅಷ್ಟಾವದಾನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಭಾನುವಳ್ಳಿಯ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ : ಹರಿಹರ ತಾಲೂಕಿನ ಭಾನುವಳ್ಳಿಯ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಕಲ್ಯಾಣೋತ್ಸವ, ಹೂವುಗಳಿಂದ ವಿಶೇಷ ಅಲಂಕಾರ, ಪೂಜೆ ನೇರವೇರಿತು. ಸಂಜೆ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.- - - -10ಎಚ್‍ಆರ್‍ಆರ್01ಎ-02ಜೆಪಿಜಿ:
ಹರಿಹರದ ಹರಿಹರೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಸ್ವಾಮಿಗೆ ಶುಕ್ರವಾರ ವಿಶೇಷ ಅಲಂಕಾರ ನೆರವೇರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರು ವೈಕುಂಠ ದಕ್ಷಿಣ ದ್ವಾರ ಮೂಲಕ ಸ್ವಾಮಿ ದರ್ಶನ ಪಡೆಯದರು.