ದೊಡ್ಡಬಳ್ಳಾಪುರ: ಕಳೆದ ಐಪಿಎಲ್‌ ಋತುವಿನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಉದಯೋನ್ಮುಖ ಕ್ರಿಕೆಟ್‌ ಆಟಗಾರ ಸಾಯಿ ಸುದರ್ಶನ್‌ ಭಾನುವಾರ ಬೆಳಗ್ಗೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ತಮ್ಮ ಪೋಷಕರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾದರು.

ದೊಡ್ಡಬಳ್ಳಾಪುರ: ಕಳೆದ ಐಪಿಎಲ್‌ ಋತುವಿನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಉದಯೋನ್ಮುಖ ಕ್ರಿಕೆಟ್‌ ಆಟಗಾರ ಸಾಯಿ ಸುದರ್ಶನ್‌ ಭಾನುವಾರ ಬೆಳಗ್ಗೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ತಮ್ಮ ಪೋಷಕರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಮುಂಜಾನೆ ಆಶ್ಲೇಷ ಬಲಿ ಪೂಜೆಯಲ್ಲಿ ಪಾಲ್ಗೊಂಡ ಅವರು, ತಮ್ಮ ವೃತ್ತಿ ಬದುಕಿನಲ್ಲಿ ಸಮೃದ್ದಿ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಿದರು. ನೂರಾರು ಭಕ್ತಾದಿಗಳು ಸಾಯಿ ಸುದರ್ಶನ್‌ ಅವರ ಭೇಟಿಯ ವೇಳೆ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಕಣ್ತುಂಬಿಕೊಂಡರು.

ಫೋಟೋ-24ಕೆಡಿಬಿಪಿ3- ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಸಾಯಿ ಸುದರ್ಶನ್‌ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.