ಸಾರಾಂಶ
ಶೃಂಗೇರಿ, ತಾಲೂಕಿನಾದ್ಯಂತ ಮಳೆ ಅಬ್ಬರದ ನಡುವೆಯೂ ಬುಧವಾರ ಗಣೇಶ ಚತುರ್ಥಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ಒಂದೆಡೆ ಮಳೆ ಆರ್ಭಟ, ಇನ್ನೊಂದೆಡೆ ಗಣಪತಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆ ನಡೆಯತೊಡಗಿತು.
ಶೃಂಗೇರಿ ವಿವಿಧೆಡೆ ಸಂಭ್ರಮ ಸಡಗರದ ಗಣೇಶೋತ್ಸವ
ಕನ್ನಡಪ್ರಭ ವಾರ್ತೆ, ಶೃಂಗೇರಿತಾಲೂಕಿನಾದ್ಯಂತ ಮಳೆ ಅಬ್ಬರದ ನಡುವೆಯೂ ಬುಧವಾರ ಗಣೇಶ ಚತುರ್ಥಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ಒಂದೆಡೆ ಮಳೆ ಆರ್ಭಟ, ಇನ್ನೊಂದೆಡೆ ಗಣಪತಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆ ನಡೆಯತೊಡಗಿತು.
ಶೃಂಗೇರಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಬೆಳಿಗ್ಗೆ ಗಣಪತಿ ಪ್ರತಿಷ್ಠಾಪನೆ, ವಿಶೇಷ ಪೂಜೆ, ನೆರವೇರಿತು.ಶ್ರೀಮಠದ ಪ್ರವಚನ ಮಂದಿರ ,ಶೃಂಗೇರಿ ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಕಾಂಚೀ ನಗರ, ಕಲ್ಕಟ್ಟೆ, ನೆಮ್ಮಾರು, ಬೇಗಾರು, ಕುಂಚೇಬೈಲು, ಮೆಣಸೆ ಸೇರಿದಂತೆ ವಿವಿಧೆಡೆ ಗಣಪತಿ ಪ್ರತಿಷ್ಠಾಪಿಸಲಾಯಿತು. ತ್ಯಾವಣ ಸಹಿತ ಕೆಲವೆಡೆ ಸಂಜೆಯೇ ಆಕರ್ಷಕ ಮೆರವಣಿಗೆಯೊಂದಿಗೆ ಗಣಪತಿ ವಿಸರ್ಜನೆ ನಡೆಯಿತು.ಶ್ರೀ ಶಾರದಾ ಪೀಠದಲ್ಲಿಯೂ ಗಣೇಶ ಚತುರ್ಥಿ ಅಂಗವಾಗಿ ಜಗದ್ಗುರು ಶ್ರೀ ಭಾರತೀ ತೀರ್ಥರು ಗಣಪತಿಗೆ ವಿಶೇಷ ಪೂಜೆ ನೆರವೇರಿಸಿದರು.ನೆರವೇರಿಸಿದರು.
ಗಣೇಶ ಚತುರ್ಥಿ ಅಂಗವಾಗಿ ಜನರು ಮನೆ ಮನೆಗಳಲ್ಲಿಯೂ ಹಬ್ಬದ ಪೂಜಾ ಕಾರ್ಯವಿಧಿ ವಿಧಾನಗಳನ್ನು ನೆರವೇರಿಸಿ ದೇವಾಲಯಗಳಿಗೂ ತೆರಳಿದರು. ನಂತರ ಮನೆಗಳಲ್ಲಿ ಸಿಹಿ ತಿನಿಸು, ಅಡುಗೆ ತಯಾರಿಸಿ ಹಬ್ಬದೂಟ ಸವಿಯುವ ಮೂಲಕ ಸಂಭ್ರಮಿಸಿದರು. ತಾಲೂಕಿನೆಲ್ಲೆಡೆ ಹಬ್ಬದ ಉತ್ಸಾಹದ ವಾತಾವರಣ ಕಂಡುಬಂದಿತು. ಗುರುವಾರದಿಂದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿತು.28 ಶ್ರೀ ಚಿತ್ರ 1-
ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಜಗದ್ಗುರು ಶ್ರೀ ಭಾರತೀ ತೀರ್ಥರು ಗಣಪತಿಗೆ ವಿಶೇಷ ಪೂಜೆ ನೆರವೇರಿಸಿದರು.