ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು 180 ವಿಶೇಷ ಅಗತ್ಯತೆಯುಳ್ಳ ಮಕ್ಕಳಿದ್ದು, ಅವರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಮತ್ತು ಮೌಲ್ಯಾಂಕನ ಮೂಲಕ ಅವರಿಗೆ ಉಪಕರಣಗಳನ್ನು ಕೊಡಲು ಸರ್ಕಾರಕ್ಕೆ ವರದಿ ಒಪ್ಪಿಸಬೇಕು.
ಲಕ್ಷ್ಮೇಶ್ವರ: ತಜ್ಞ ವೈದ್ಯರು ಯಾರೂ ಬಂದಿಲ್ಲ. 2- 3 ತಿಂಗಳು ಕೋರ್ಸ್ ಮುಗಿಸಿದವರು ವೈದ್ಯರು ಅಂತಾ ಹೇಳಿಕೊಂಡು ತಪಾಸಣೆ ಮಾಡಲು ಬಂದಿದ್ದಾರೆ. ದುಡ್ಡು ಮಾಡಿಕೊಂಡು ಮಜಾ ಮಾಡಲು ಬಂದಿದ್ದಾರೆ ಎಂದು ಆಯೋಜಕರಿಗೆ ಹಾಗೂ ಬಂದ ಅರ್ಧಮರ್ದ ಕಲಿತ ವೈದ್ಯರಿಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದ ಸೋಮೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3ರಲ್ಲಿ ಶುಕ್ರವಾರ ನಡೆಯಿತು.
ಜಿಪಂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಕಾರ್ಯಾಲಯ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 1ರಿಂದ 12ನೇ ತರಗತಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ವೈದ್ಯಕಿಯ ತಪಾಸಣೆ ಹಾಗೂ ಮೌಲ್ಯಾಂಕನ ಶಿಬಿರದಲ್ಲಿ ಮಾತನಾಡಿದರು.ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು 180 ವಿಶೇಷ ಅಗತ್ಯತೆಯುಳ್ಳ ಮಕ್ಕಳಿದ್ದು, ಅವರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಮತ್ತು ಮೌಲ್ಯಾಂಕನ ಮೂಲಕ ಅವರಿಗೆ ಉಪಕರಣಗಳನ್ನು ಕೊಡಲು ಸರ್ಕಾರಕ್ಕೆ ವರದಿ ಒಪ್ಪಿಸಬೇಕು. ಸರ್ಕಾರ ಹಾಗೂ ಅಧಿಕಾರಿಗಳು ಇಂತಹ ಬೇಜವಾಬ್ದಾರಿ ಏಜೆನ್ಸಿಗಳಿಗೆ ಗುತ್ತಿಗೆ ಕೊಟ್ಟು ಕಾರ್ಯಕ್ರಮವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಮುಂಬರುವ ದಿನಗಳಲ್ಲಿ ನುರಿತ ತಜ್ಞ ವೈದ್ಯರನ್ನು ಕರೆಸಿ ತಪಾಸಣೆ ಹಾಗೂ ಮೌಲ್ಯಾಂಕನ ಮಾಡಿಸಿ ಎಂದು ಆಯೋಜಕರಿಗೆ ತಿಳಿಸಿದರು.
ಅದೇ ರೀತಿ ಪಾಲಕರು ಇಂತಹ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ. ಕಾಳಜಿ ವಹಿಸಿ. ಇಂತಹ ಮಕ್ಕಳೇ ಮುಂದಿನ ದಿನಗಳಲ್ಲಿ ಒಳ್ಳೆಯ ಸಾಧನೆ ಮಾಡಲಿದ್ದಾರೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು,ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಣಕಿ ನಾಯ್ಕ, ವಿಶೇಷಚೇತನರ ಸಂಘ ಜಿಲ್ಲಾದ್ಯಕ್ಷ ಆರ್.ಎಂ. ಶಿರಹಟ್ಟಿ, ಶಾಲೆಯ ಮುಖ್ಯ ಶಿಕ್ಷಕಿ ಎಲ್.ಎ. ನಡುವಿನಮನಿ, ಬಿ.ಎಸ್. ಹರ್ಲಾಪುರ, ಈಶ್ವರ ಮೆಡ್ಲೇರಿ, ಚಂದ್ರಕಾಂತ ನೇಕಾರ, ಪಿಆರ್‌ಸಿ, ಬಿ.ಎಸ್. ಭಜಂತ್ರಿ, ಗಂಗಾಧರ ಮೆಣಸಿನಕಾಯಿ, ಅನೀಲ. ಮುಳುಗುಂದ, ಎಂಆರ್‌ಡಬ್ಲ್ಯು ಭಾರತಿ ಮೂರಶಿಳ್ಳಿನ, ಮಂಜುನಾಥ ರಾಮಗೇರಿ, ಗ್ರಾಪಂಗಳ ಪಿಆರ್‌ಡಬ್ಲ್ಯು ಇದ್ದರು. ಈ ವೇಳೆ ಬಿ.ಎಂ. ಕುಂಬಾರ ಸ್ವಾಗತಿಸಿದರು. ಉಮೇಶ ನೇಕಾರ ನಿರೂಪಿಸಿದರು.
ಪೊಟೋ-ಲಕ್ಷ್ಮೇಶ್ವರದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 3ರಲ್ಲಿ ವಿಶೇಷಚೇತನ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಕಾರ್ಯಕ್ರಮವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಿದರು.