ಸಾರಾಂಶ
ಇಂದಿನ ಯಾಂತ್ರಿಕ ಜೀವನದಲ್ಲಿ ಆಧ್ಯಾತ್ಮಿಕ ತಿಳಿವಳಿಕೆಯಿಂದ ಮನುಷ್ಯ ಜಾಗೃತವಾಗಬೇಕೆಂದರೆ, ಆತನಿಗೆ ಧಾಮಿ೯ಕ ಪರಂಪರೆ ಅರಿವು ಇರಬೇಕು. ವ್ಯಕ್ತಿಗೆ ಸುಖ ಸಿಗಬೇಕೆಂದರೆ ಸುಮ್ಮನೆ ಸಿಗುವುದಿಲ್ಲ. ಮುಗ್ಧತೆಯಿಂದ ಕಾಯಕದಲ್ಲಿ ತೊಡಗಿಕೊಳ್ಳಬೇಕು.
ಕುಕನೂರು: ಪ್ರತಿಯೊಬ್ಬರ ಮನಸ್ಸಿನ ಶಾಂತಿಗೆ ಆಧ್ಯಾತ್ಮಿಕ ಪ್ರವಚನ ಅಗತ್ಯ ಎಂದು ಕೊಪ್ಪಳದ ರಾಮಕೃಷ್ಣ ಆಶ್ರಮದ ಶ್ರೀಚೈತ್ಯಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಸದ್ಗುರು ರಾಘವಾನಂದರ ಮಠದಲ್ಲಿ ಶ್ರೀರಾಘವಾನಂದರ ೪೭ನೇಯ ಹಾಗೂ ಶ್ರೀ ಸದ್ಗುರು ರಾಮಾನಂದ ಸ್ವಾಮಿಗಳ ೧೧ ನೇಯ ವರುಷದ ಪುಣ್ಯಾರಾಧನೆ ಪ್ರಯುಕ್ತ ಜರುಗಿದ ಮೂರು ದಿನಗಳ ಆಧ್ಯಾತ್ಮಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಜೀವನದಲ್ಲಿ ಆಧ್ಯಾತ್ಮಿಕ ತಿಳಿವಳಿಕೆಯಿಂದ ಮನುಷ್ಯ ಜಾಗೃತವಾಗಬೇಕೆಂದರೆ, ಆತನಿಗೆ ಧಾಮಿ೯ಕ ಪರಂಪರೆ ಅರಿವು ಇರಬೇಕು. ವ್ಯಕ್ತಿಗೆ ಸುಖ ಸಿಗಬೇಕೆಂದರೆ ಸುಮ್ಮನೆ ಸಿಗುವುದಿಲ್ಲ. ಮುಗ್ಧತೆಯಿಂದ ಕಾಯಕದಲ್ಲಿ ತೊಡಗಿಕೊಳ್ಳಬೇಕು. ರಾಮಾಯಣ ಕಾಲ ಘಟ್ಟದಲ್ಲಿ ರತ್ನಾಕರ್ ಎಂಬಾತ ತನ್ನ ಕುಟುಂಬದ ಹಸಿವು ನೀಗಿಸಲು ಬೇಟೆ ಆಡುತ್ತಿದ್ದ. ನಂತರ ಗುರುಗಳ ಮಾಗ೯ದಶ೯ನದಿಂದ ಪರಿವತ೯ನೆಯಗೊಂಡ ಎಂದು ನಿದಶ೯ನ ವಿವರಿಸಿದರು.ಈ ವೇಳೆ ಹಂಪಿಯ ಸದ್ಗುರು ಶ್ರೀವಿದ್ಯಾನಂದ ಭಾರತಿ ಸ್ವಾಮೀಜಿ ಅವರಿಗೆ ಯಲ್ಲಪ್ಪ ಮಾದಮ್ಮ ಮುಂದಲಮನಿ ಕುಟುಂಬ ಪರಿವಾರ ವತಿಯಿಂದ ತುಲಾಭಾರ ಸೇವೆ ನಡೆಯಿತು. ಡಾ.ಮಹಾದೇವ ಸ್ವಾಮೀಜಿ, ಶ್ರೀ ಪ್ರಣವಾನಂದ ಸ್ವಾಮೀಜಿ, ಚಿಕ್ಕೆನಕೊಪ್ಪದ ಶ್ರೀಅನ್ನದಾನೇಶ್ವರ ಸ್ವಾಮಿಜಿ, ಆರ್.ಪಿ.ರಾಜೂರು, ಶರಣಪ್ಪ ಕೊಪ್ಪದ, ಕರಿಬಸಪ್ಪ ಬಗನಾಳ, ಕಳಕಪ್ಪ ಕುಂಬಾರ, ಈಶಪ್ಪ ಸಬರದ, ಮಹಾದೇವಪ್ಪ ಸಬರದ ಇತರರಿದ್ದರು.