ಸಾರಾಂಶ
ಯಲ್ಲಾಪುರ: ಬದುಕಿನ ಧಾವಂತದ ಪ್ರಸ್ತುತ ಸಂದರ್ಭದಲ್ಲಿ ಯಾರೊಬ್ಬರಿಗೂ ಸಮಯವೇ ಇಲ್ಲದಂತಾಗಿದೆ. ಆಧ್ಯಾತ್ಮಿಕ ಚಿಂತನೆ ಕಡಿಮೆಯಾಗುತ್ತಿದೆ ಎಂದು ವಿಪ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ತಾಲೂಕಿನ ಉಮ್ಮಚಗಿಯ ವಿದ್ಯಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ಯಲ್ಲಾಪುರದ ಜೀವನ ವಿಕಾಸ ಟ್ರಸ್ಟ್ ಹಮ್ಮಿಕೊಂಡಿದ್ದ ಭಜನಾ ಸಾಮ್ರಾಟ-2025 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿಂದುಳಿದ ಸಮೂದಾಯದ ಸಂಘಟನೆಗಳಿಗೆ ಕೆಲವು ಹಿತಾಸಕ್ತಿಗಳು ಧಕ್ಕೆ ಮತ್ತು ಅಡ್ಡಿ ಉಂಟು ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸ್ವರ್ಣವಲ್ಲಿಯ ಶ್ರೀಗಳ ನಿರ್ದೆಶನದಂತೆ ಈ ಸಂಘಟನೆಯನ್ನು ನಾವು ಆರಂಭಿಸಿದ್ದೇವೆ. ಸಮಾಜದಲ್ಲಿ ಜನರು ಉತ್ತಮ ಮಾರ್ಗದಲ್ಲಿ ಸಾಗದೇ ಒಳ್ಳೆಯತನ ಮರೆಯುತ್ತಿರುವ ಹಿನ್ನಲೆಯಲ್ಲಿ ನಾವು ಭಜನಾ ಸ್ಪರ್ಧೆಯೂ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಭಜನೆಯಲ್ಲಿ ತಲ್ಲೀನರಾದ ಭಕ್ತರಿಗೆ ಒಂದು ರೀತಿಯ ಅಮಲು ಉಂಟಾಗಬೇಕು ಅಂದಾಗ ಭಗವಂತನ ಸಾಮಿಪ್ಯ ದೊರಕುತ್ತದೆ'''' ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೀರ್ತನಕಾರ ಈಶ್ವರದಾಸ ದೇಹಳ್ಳಿ ಮಾತನಾಡಿ, ಭಜನೆ ಎಂಬುದು ಭಗವಂತನನ್ನು ನಾದದ ಮೂಲಕ ತಲುಪುವ ಸಾಧನವಾಗಿದೆ. ಮನಸ್ಸನ್ನು ನಿರ್ಮಲಗೊಳಿಸುವ ಭಾರತೀಯ ಪರಂಪರೆಯಾಗಿದೆ. ನಮ್ಮೊಳಗೇ ಇರುವ ಭಗವಂತನನ್ನು ಅರಿಯುವ ಸುಲಭ ಮಾರ್ಗವಾದ ಭಜನೆಯನ್ನು ಮಾಡುವವರಿಗೆ ಸಂಖ್ಯೆಗಳು ಪ್ರಧಾನವಲ್ಲ. ಇದನ್ನು ಪ್ರತಿಯೊಬ್ಬರು ಮನಗಂಡು ದೇವರನ್ನು ಭಕ್ತಿಯಿಂದ ಪ್ರತಿಯೊಬ್ಬರೂ ಭಜನೆಯ ಮೂಲಕ ಆರಾಧಿಸಬೇಕು. ಭಜನೆ ಕೇವಲ ಕಾರ್ಯಕ್ರಮವಾಗದೇ, ಉಪಾಸನೆಯಾಗಬೇಕು ಎಂದರು.ಅತಿಥಿಗಳಾಗಿದ್ದ ತಾಪಂ ಮಾಜಿ ಉಪಾಧ್ಯಕ್ಷೆ ಸುಜಾತಾ ಸಿದ್ದಿ ಸಾಂದರ್ಭಿಕ ಮಾತನ್ನಾಡಿದರು. ಟ್ರಸ್ಟಿಗಳಾದ ಸೋಮನಾಥ ಸಿದ್ದಿ, ಪರಶುರಾಮ ಸಿದ್ದಿ, ಪ್ರಮುಖರಾದ ಗಣೇಶ ಕೈಗಡಿ, ಚಂದ್ರಶೇಖರ ಶೀಗೆಹಳ್ಳಿ ಉಪಸ್ಥಿತರಿದ್ದರು.
ಚಿಪಗೇರಿಯ ಶ್ರೀರಾಮ ವನವಾಸಿ ನಿಲಯದ ಮಕ್ಕಳು ಪ್ರಾರ್ಥಿಸಿದರು. ವಾದನಗಳ ಝೇಂಕಾರದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಟ್ರಸ್ಟೀ ಸುರೇಶ ಸಿದ್ದಿ ಹಸೇಕಲ್ ಸ್ವಾಗತಿಸಿದರು. ಶಿಕ್ಷಕ ನಾರಾಯಣ ಶೇರೂಗಾರ ನಿರ್ವಹಿಸಿದರು. ಯಲ್ಲಾಪುರದ ವಿಠ್ಠಲ ವನವಾಸಿ ವಿದ್ಯಾರ್ಥಿನಿಲಯದ ಸಹವ್ಯವಸ್ಥಾಪಕ ಸಿದ್ದು ಜಾನಕರ್ ವಂದಿಸಿದರು.ಐದು ತಂಡಗಳು ಪಾಲ್ಗೊಂಡಿದ್ದ ಭಜನಾ ಸ್ಪರ್ಧೆಯಲ್ಲಿ ಹಸೇಕಲ್ಲಿನ ಮಹಾಗಣಪತಿ ಭಜನಾ ಮಂಡಳಿ; ಶೀಗೇಹಳ್ಳಿ ಕಪ್ಪರಮನೆಯ ಬಟ್ಟೆವಿನಾಯಕ ಭಜನಾ ಮಂಡಳಿ; ಕೈಗಡಿಯ ಸಿದ್ದಿವಿನಾಯಕ ಭಜನಾ ಮಂಡಳಿ ಅನುಕ್ರಮ ಸ್ಥಾನ ಗಳಿಸಿ ಬಹುಮಾನ ಪಡೆದರು.
ಮುಂಜಾನೆ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದ ಪೂಜಾ ಕೈಂಕರ್ಯ ನೆರವೇರಿಸಿದ ಉಮ್ಮಚಗಿಯ ಸಂಸ್ಕೃತ ಮಹಾಪಾಠಶಾಲೆಯ ಅಧ್ಯಾಪಕ ವಿ. ರಾಜೇಶ ಶಾಸ್ತಿç ವಿಜೇತರಿಗೆ ಬಹುಮಾನ ವಿತರಿಸಿದರು.ಸಮಾರೋಪದಲ್ಲಿ ಶ್ರೀರಾಮ ವನವಾಸಿ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿಭಾಗು ಶೆಳಕೆ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.