ಸಾರಾಂಶ
ಲಕ್ಷ್ಮೇಶ್ವರ: ಆತ್ಮದ ಅನುಸಂಧಾನವು ದೇವರನ್ನು ಕಾಣುವ ಸುಲಭ ಮಾರ್ಗವಾಗಿದೆ. ದೇವರನ್ನು ಕಾಣಲು ನೀವು ನಮ್ಮೊಳಗಿನ ಆತ್ಮದ ಜತೆ ಸಂವಾದ ಮಾಡುವ ಮೂಲಕ ದೈವತ್ವದ ಕಡಗೆ ಹೋಗಬಹುದು ಎಂದು ಆಧ್ಯಾತ್ಮ ಚಿಂತಕ ಡಾ. ಜೀವಂಧರ ಖೇತಪ್ಪನವರ ಹೇಳಿದರು.
ಶನಿವಾರ ರಾತ್ರಿ ಪಟ್ಟಣದ ಚೆನ್ನಮ್ಮನ ವನದಲ್ಲಿ ವಸುಂಧರ ವಾರಿಯರ್ಸ್ ಸಂಘಟನೆಯ ಸದಸ್ಯರು ಹಮ್ಮಿಕೊಂಡ ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಆತ್ಮದೊಂದಿಗೆ ಸಂಬಂಧಿಸಿದ ಆಧ್ಯಾನವು ಆಧ್ಯಾತ್ಮವಾಗಿದೆ, ಧ್ಯಾನವು ಮನುಷ್ಯನನ್ನು ಉತ್ತಮ ನಾಗರಿಕನ್ನಾಗಿ ಶುದ್ದೀಕರಣ ಮಾಡುತ್ತದೆ. ಮನಸ್ಸಿನ ಆಲೋಚನೆ ನಿಯಂತ್ರಿಸುವುದು ಯೋಗ ಮತ್ತು ಧ್ಯಾನದ ಭಾಗವಾಗಿದೆ. ಅನಾವಶ್ಯಕ ಆಲೋಚನೆಗಳು ಮನುಷ್ಯನ ಆರೋಗ್ಯ ಹಾಳು ಮಾಡುತ್ತದೆ, ಆಲೋಚನೆ ನಿಯಂತ್ರಿಸುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಧ್ಯಾನವು ನಿಮ್ಮನ್ನು ದೇವರ ಕಡೆಗೆ ಕರೆದುಕೊಂಡು ಹೋಗವು ಸುಲಭ ಮಾರ್ಗವಾಗಿದೆ. ಶ್ವಾಸವನ್ನು ನಿಯಂತ್ರಿಸುವ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದೇ ಆಧ್ಯಾತ್ಮವಾಗಿದೆ ಎಂದು ಹೇಳಿದರು.
ಈ ವೇಳೆ ಜಯಲಕ್ಷ್ಮೀ ಗಡ್ಡದೇವರಮಠ ಮಾತನಾಡಿ, ಆತ್ಮವು ದೇವರನ್ನು ಕಾಣುವ ಸುಲಭ ಮಾರ್ಗವೇ ಆಧ್ಯಾತ್ಮವಾಗಿದೆ, ಧ್ಯಾನವು ದೇಹದಲ್ಲಿ ಹೊಸ ಶಕ್ತಿ ಒಡಮೂಡಿಸುತ್ತದೆ. ಆಧ್ಯಾತ್ಮವು ಮನುಷ್ಯತ್ವದಿಂದ ದೈವತ್ವದ ಕಡೆಗೆ ಕರೆದುಕೊಂಡು ಮುಕ್ತಿ ಮಾರ್ಗ ತೋರಿಸುವ ಸಾಧನವಾಗಿದೆ. ಧ್ಯಾನವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯಗಳಿಗೆ ಉತ್ತರ ನೀಡುವ ಮಾರ್ಗವಾಗಿದೆ ಎಂದು ಹೇಳಿದರು.ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮಿಗಳು, ಈಶ್ವರಿವಿಶ್ವವಿದ್ಯಾಲಯದ ನಾಗಲಾಂಬಿಕಾ ಮಾತನಾಡಿದರು.
ಸಭೆಯಲ್ಲಿ ಸುಭಾಷ ಓದುನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಸಿ.ಜಿ.ಹಿರೇಮಠ, ಚಂಬಣ್ಣ ಬಾಳಿಕಾಯಿ, ಬಸವೇಶ ಮಹಾಂತಶೆಟ್ಟರ, ಸಿದ್ದನಗೌಡ ಬಳ್ಳೊಳ್ಳಿ, ಎಂ.ಸಿದ್ದಲಿಂಗಯ್ಯ, ಪೂರ್ಣೀಮಾ ಅಡಿವೆಪ್ಪನವರ, ಈರಣ್ಣ ಅಂಕಲಕೋಟಿ, ಎಂ.ಕೆ. ಕಳ್ಳಿಮಠ, ಬಾಬಣ್ಣ ಅಳವಂಡಿ, ಮಹೇಶ ಲಿಂಬಯ್ಯಸ್ವಾಮಿಮಠ, ಅಜ್ಜಯ್ಯ ಗಡ್ಡದೇವರಮಠ, ಗಂಗಾಧರ ಅರಳಿ, ಮಹಾಬಳೇಶ್ವರಪ್ಪ ಬೇವಿನಮರದ, ಎಸ್.ಎನ್. ಮಳಲಿ, ಶಿವಯೋಗಿ ಗಡ್ಡದೇವರಮಠ ಸೇರಿದಂತೆ ನೂರಾರು ಧ್ಯಾನಾಶಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈಶ್ವರ ಮೆಡ್ಲೇರಿ ನಿರ್ವಹಿಸಿದರು. ನಿರ್ಮಲಾ ಅರಳಿ ವಂದಿಸಿದರು.