ಸಾರಾಂಶ
ರಾಷ್ಟ್ರೀಯ ಕ್ರೀಡಾ ದಿನಾಚರಣೆ । ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು
ಕನ್ನಡಪ್ರಭ ವಾರ್ತೆ ಚಾಮರಾಜನಗರಪ್ರೋತ್ಸಾಹದ ಕೊರತೆಯಿಂದಾಗಿ ಜಿಲ್ಲೆ, ರಾಜ್ಯ, ದೇಶದಲ್ಲಿ ಕ್ರೀಡೆ ಕ್ಷೀಣಿಸುತ್ತಿದೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಎಂ. ಬಸವರಾಜೇಂದ್ರ ವಿಷಾದ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡಾಪಟುಗಳಿಗೆ ಏನು ತೊಡಕು ಅಂದರೆ ಆಟದಲ್ಲಿ ಮುಂದುವರಿದರೆ ಊಟಕ್ಕೇನು ಎಂಬ ಯೋಚನೆ ಇದೆ. ಏಕೆಂದರೆ ಕ್ರೀಡೆಗೆ ಸರ್ಕಾರವಾಗಲಿ, ಸ್ಥಳೀಯ ಮಟ್ಟದಲ್ಲಿ ಆಗಲಿ ಅಥವಾ ಪೋಷಕರಿಂದ ಮುಂದಿನ ಭವಿಷ್ಯಕ್ಕೆ ಏನು ಮಾಡುತ್ತೀಯಾ ಎಂದು ಹೇಳಿ ಕ್ರೀಡೆಯ ಉತ್ಸಾಹವನ್ನೇ ತಗ್ಗಿಸುವ ಕೆಲಸ ಆಗುತ್ತದೆ. ಆದರೆ ನಿಜವಾದ ಕ್ರೀಡಾಪಟು ಅದನ್ನು ದಾಟಿ ತಾಲೂಕು, ಜಿಲ್ಲಾ ಮಟ್ಟ, ರಾಜ್ಯ ಮಟ್ಟಕ್ಕೆ ಬಂದಾಗ ಒಂದು ಹೆಸರು ಸಿಗುತ್ತದೆ ಎಂದು ಹೇಳಿದರು.
ಬೆಂಗಳೂರು, ಮೈಸೂರು ಇತರ ನಗರಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅನೇಕರಿಗೆ ಆರ್ಥಿಕ ಸಮಸ್ಯೆ ಆಗುತ್ತದೆ. ಹೀಗಾಗಿ ಪ್ರೋತ್ಸಾಹ ಕೊರತೆಯಿಂದಾಗಿ ಕ್ರೀಡೆ ಕುಗ್ಗುತ್ತದೆ. ದೇಶದಲ್ಲಿ ಅಪಾರ ಜನಸಂಖ್ಯೆ, ಕ್ರೀಡಾಪಟುಗಳು ಇದ್ದರೂ ಕೂಡ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕ್ರೀಡೆ ಹಿಂದುಳಿಯಲು ಕಾರಣವಾಗಿದೆ. ಆದ್ದರಿಂದ ಹಾಗಾಗಿ ನಾವೆಲ್ಲರೂ ಕ್ರೀಡೆಯನ್ನು ಪ್ರೋತ್ಸಾಹಿಸಿ, ಶಾಲಾ ಹಂತದ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ, ಧನ ಸಹಾಯ ಮಾಡಿದರೆ ಖಂಡಿತ ಅವರು ಮುಂದೆ ಬರುತ್ತಾರೆ. ಅದಕ್ಕಾಗಿ ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕಿದೆ ಎಂದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಶಿವಸ್ವಾಮಿ ಮಾತನಾಡಿ, ಕರ್ನಾಟಕ ಸೇನಾಪಡೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮಾಡುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ. ಇಲಾಖೆಯ ವತಿಯಿಂದ ಅಪೂರ್ಣವಾಗಿದ್ದು, ಅವ್ಯವಸ್ಥೆಯಿಂದ ಕೂಡಿರುವ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ನಮ್ಮ ಸಂಘಟನೆಯು ಹೋರಾಟದ ಜತೆ''''''''ಗೆ ಸಮ್ಮೇಳನಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಕನ್ನಡ ಜಾಗೃತಿಗೊಳಿಸಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಕ್ರೀಡೆ ಪುನಶ್ಚೇತನಗೊಳಿಸಲು ಸಲುವಾಗಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತಿದೆ ಎಂದರು. ಚೂಡಾಧ್ಯಕ್ಷ ಮಹಮ್ಮದ್ ಅಸ್ಕರ್ ಮುನ್ನಾ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಸನ್ಮಾನ:
ರಾಷ್ಟ್ರೀಯ ಕ್ರೀಡಾಪಟುಗಳಾದ ಎಂ.ನಾಗರಾಜು, ಲಕ್ಷ್ಮಣ್, ನಂಜುಂಡಸ್ವಾಮಿ, ಮಲ್ಲೇಶ್, ಆನಂತರಾಮು, ಕೆ.ಎಂ.ನಾಗರಾಜು, ವಿ.ಶ್ರೀನಿವಾಸಪ್ರಸಾದ್, ಆರ್. ಕೃಷ್ಣಮೂರ್ತಿ, ನಾಗೇಶ್ ಸೋಸ್ಥೆ ಅವರನ್ನು ಸನ್ಮಾನಿಸಲಾಯಿತು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ರಮೇಶ್, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಋುಗ್ವೇದಿ, ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ಶಾ. ಮುರಳಿ, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ಅರುಣ್ ಕುಮಾರ್‌ಗೌಡ, ನಿಜಧ್ವನಿ ಗೋವಿಂದರಾಜು, ಚಾ.ರಾ. ಕುಮಾರ್, ಸಾಗರ್‌ರಾವತ್, ಆಟೋ ಲಿಂಗರಾಜು ಸೋಮವಾರಪೇಟೆ ಮಂಜು, ವೀರಭದ್ರ, ತಾಂಡವಮೂರ್ತಿ ಇದ್ದರು.