ಸಾರಾಂಶ
ಪ್ರತಿಯೊಬ್ಬರೂ ದೈಹಿಕವಾಗಿ ಬಲಿಷ್ಠರಾದಾಗ ಮಾತ್ರ ಮಾನಸಿಕವಾಗಿ ಏನು ಬೇಕಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಕ್ರೀಡೆ ಅತಿ ಪ್ರಮುಖವಾಗಿದೆ. ಕ್ರೀಡೆ ಮುಂತಾದ ದೈಹಿಕ ಹಾಗೂ ಮಾನಸಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಜತೆಗೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಇನ್ನಷ್ಟು ಉತ್ತಮವಾಗುತ್ತದೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾನಸಿಕ, ದೈಹಿಕವಾಗಿ ಹಾಗೂ ಉತ್ತಮ ಆರೋಗ್ಯ ಪಡೆಯಲು ಕ್ರೀಡೆಗಳು ಜೀವನದಲ್ಲಿ ಬಹಳ ಅವಶ್ಯಕ ಎಂದು ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್ ತಿಳಿಸಿದರು.ನಗರದ ನೇತಾಜೀ ಕ್ರೀಡಾಂಗಣದಲ್ಲಿ ಅಮೆಚೂರ್ ರೋಲ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಮಾರ್ಕೆಟ್ ಮೋಹನ್ ಅವರು ದೀಪ ಬೆಳಗುವುದರ ಮೂಲಕ ಜಿಲ್ಲಾಮಟ್ಟದ ಪಂದ್ಯಾವಳಿಗಳಿಗಳನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆಯಿಂದ ಮಾನಸಿಕ ಸ್ಥೈರ್ಯ
ಪ್ರತಿಯೊಬ್ಬರೂ ದೈಹಿಕವಾಗಿ ಬಲಿಷ್ಠರಾದಾಗ ಮಾತ್ರ ಮಾನಸಿಕವಾಗಿ ಏನು ಬೇಕಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಕ್ರೀಡೆ ಅತಿ ಪ್ರಮುಖವಾಗಿದೆ. ಕ್ರೀಡೆ ಮುಂತಾದ ದೈಹಿಕ ಹಾಗೂ ಮಾನಸಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಜತೆಗೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಇನ್ನಷ್ಟು ಉತ್ತಮವಾಗುತ್ತದೆ. ಕ್ರೀಡೆಗಳಿಂದ ಬುದ್ಧಿ ಚುರಾಕುವುದು. ಕಡ್ಡಾಯವಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸ್ಫೂರ್ತಿಯಿಂದ ಹಾಗೂ ಸ್ನೇಹಪೂರ್ವಕವಾಗಿ ಭಾಗವಹಿಸಬೇಕು ಎಂದರು.ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡರಾಗುತ್ತಾರೆ,ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆ ಕ್ರೀಡೆಗಳಲ್ಲಿಯೂ ಭಾಗವಹಿಸಲು ಪ್ರೇರೇಪಿಸಬೇಕೆಂದು ತಿಳಿಸಿದರು. ಪಂದ್ಯಾವಳಿಗಳಲ್ಲಿ ಒಟ್ಟು ನಲವತ್ತೈದು ಕ್ರೀಡಾಪಟುಗಳು ಭಾಗವಹಿಸಿದ್ದರು.ಭವಿಷ್ಯಕ್ಕೆ ಕ್ರೀಡೆ ಅಡಿಪಾಯ
ಪಂದ್ಯಾವಳಿಗಳು ಮುಕ್ತಾಯವಾದ ನಂತರ ಪಂದ್ಯಾವಳಿಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಅಸೋಸಿಯೇಷನ್ ಸಂಸತ್ ಸಂಸ್ಥಾಪಕರಾದ ಚಂದ್ರಶೇಖರ್ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳ ಭವಿಷ್ಯತಿಗೆ ಅಡಿಪಾಯ ಆಗುವುದು ಎಂದು ತಿಳಿಸಿದರು. ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ರೋಲ್ ಸ್ಕೇಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಅರ್ಜುನ್ ನಾಯಕ್,ಖಜಾಂಚಿ ಅರುಣ್ ಕುಮಾರ್, ಸೈ ಗಾಯಸ್ ಸಂಘಟನೆಯ ಸತೀಶ್ ಚವಾನ್,ವಕೀಲರಾದ ಯಾಸಿನ್ ,ಕಬ್ಬಡಿ ತರಬೇತುದಾರ ಮಾರುತಿ ,ಅರುಣ್ ಮತ್ತು ಪೋಷಕರು ಉಪಸ್ಥಿತರಿದ್ದರು ವಿಜೇತರಾದ ಕ್ರೀಡಾಪಟುಗಳಿಗೆ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.