ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಅಗತ್ಯ: ಸಂತೋಷ ಪಾಟೀಲ

| Published : Nov 26 2024, 12:46 AM IST

ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಅಗತ್ಯ: ಸಂತೋಷ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆ ಅಗತ್ಯವಾಗಿದ್ದು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆ ಅಗತ್ಯವಾಗಿದ್ದು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಹೇಳಿದರು.

ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಹಾಗೂ ಗ್ರಾ ಪಂ ಕರಮುಡಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗ ದಲ್ಲಿ ಕೆ.ಎಚ್.ಪಿ.ಟಿ.ಸಂಸ್ಥೆಯ ಸ್ಪೂರ್ತಿ ಯೋಜನೆಯಡಿ ನಡೆದ ಹದಿಹರೆಯದ ಹೆಣ್ಣುಮಕ್ಕಳಗೆ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಶಾರೀರಿಕ, ಮಾನಸಿಕ ವಿಕಸನ ಸಾಧ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ ಅಧ್ಯಯನಕ್ಕೆ ಮಾತ್ರ ಸೀಮಿತರಾಗಬಾರದು. ಕ್ರೀಡೆಯಲ್ಲೂ ಸಾಧನೆ ಮಾಡಬೇಕು ಎಂದರು.

ತಾಪಂ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ ಮಾತನಾಡಿ, ಮಕ್ಕಳು ದೈಹಿಕವಾಗಿ ಸದೃಢರಾದಾಗ ಮಾತ್ರ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಕರಮುಡಿ ಗ್ರಾಪಂ ಅಧ್ಯಕ್ಷ ಲಿಂಗರಾಜ್ ಉಳ್ಳಾಗಡ್ಡಿ, ಕೆ.ಎಚ್.ಪಿ.ಟಿ. ಸಂಯೋಜಕ ಮಂಜುನಾಥ್, ಪ್ರೌಢಶಾಲೆ ಎಸ್.ಡಿ.ಎಮ್.ಸಿ.ಅಧ್ಯಕ್ಷ ಶ್ಯಾಮೀದ್‌ಸಾಬ್ ಮುಲ್ಲಾ, ಸಂಪನ್ಮೂಲ ವ್ಯಕ್ತಿ ಭೀಮಪ್ಪ ಹವಳಿ ಹಾಗೂ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಮುತ್ತಣ್ಣ ಬಲಕುಂದಿ, ಪಿಡಿಒ ಬಸವರಾಜ್ ಕಿಳ್ಳಿಕ್ಯಾತರ, ವಿಸ್ತಾರ ಸಂಸ್ಥೆಯ ಇಮಾಮ್ ಸಾಬ್ ಗುಳೇದಗುಡ್ಡ ಇತರರು ಮಾತನಾಡಿದರು.

ಗ್ರಾಪಂ ಸದಸ್ಯರಾದ ರಾಯಣ್ಣ ಹೊಕ್ಕಳದ, ಗಂಗಪ್ಪ ಹವಳಿ, ಪರಸಪ್ಪ ಲಮಾಣಿ, ಮರ್ದಾನಸಾಬ ಮುಲ್ಲಾ, ಹನಮಂತ ಕರೇಕ್ಕಿ, ಮೈಲಾರಪ್ಪ ಪಲ್ಲೇದ, ಅಂದಮ್ಮ ಮುಗಳಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಸವರಾಜ್ ಕರಾಟೆ, ದೇವಮ್ಮ ರಾಟಿ, ಕಳಕವ್ವ ದಿಂಡೂರು, ಮಂಜುನಾಥ್ ನಿಂಗೋಜಿ, ಬಾಳನಗೌಡ ಪೋಲೀಸ್ ಪಾಟೀಲ್, ವಿರೂಪಾಕ್ಷಪ್ಪ ಉಳ್ಳಾಗಡ್ಡಿ, ಕರ್ನಾಟಕ ಯುವಕ ಮಂಡಳದ ಸದಸ್ಯರು, ಕ್ರೀಡಾಪಟುಗಳು, ಕೆ.ಎಚ್.ಪಿ.ಟಿ. ಸಿಬ್ಬಂದಿ, ಶಾಲಾ ಶಿಕ್ಷಕರು, ದೈಹಿಕ ಶಿಕ್ಷಕರು ಮತ್ತಿತರರಿದ್ದರು.