ಇಂದಿನ ಕಾಲಮಾನಕ್ಕೆ ಕ್ರೀಡೆ ಅತ್ಯವಶ್ಯಕ: ಡಾ. ಆರತಿಕೃಷ್ಣ

| Published : Sep 02 2025, 01:00 AM IST

ಸಾರಾಂಶ

ಕೊಪ್ಪ, ಇಂದಿನ ಕಾಲಮಾನಕ್ಕೆ ಕ್ರೀಡೆ ಅವಶ್ಯಕ. ಕ್ರೀಡೆಯೂ ನಿಯಮಿತ ಯೋಗ, ವ್ಯಾಯಮದಂತೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಸಹಾಯಕ ಎಂದು ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿಕೃಷ್ಣ ಹೇಳಿದರು.

- ನಾರ್ವೆಯಲ್ಲಿ ಕೊಪ್ಪ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಇಂದಿನ ಕಾಲಮಾನಕ್ಕೆ ಕ್ರೀಡೆ ಅವಶ್ಯಕ. ಕ್ರೀಡೆಯೂ ನಿಯಮಿತ ಯೋಗ, ವ್ಯಾಯಮದಂತೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಸಹಾಯಕ ಎಂದು ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿಕೃಷ್ಣ ಹೇಳಿದರು.ತಾಲೂಕಿನ ನಾರ್ವೆ ಸ್ವಯಂಪ್ರಕಾಶ ಸರಸ್ವತಿ ವಿದ್ಯಾ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಉಳಿದೆಲ್ಲ ಕ್ರೀಡಾ ಕೂಟಕ್ಕಿಂತ ದಸರಾ ಕ್ರೀಡಾಕೂಟ ವಿಶೇಷತೆಯಿಂದ ಕೂಡಿದೆ. ಕಾರಣ ಇದರಲ್ಲಿ ವಯೋಮಿತಿ ಇಲ್ಲದೆ ಗ್ರಾಮಸ್ಥರು ಭಾಗವಹಿಸಲು ಅವಕಾಶವಿದೆ. ''''''''ಬದ್ಧತೆ, ಪರಿಶ್ರಮ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಗುರಿ ತಲುಪಬಹುದು'''''''' ಎಂದರು.ಭದ್ರಾ ಕಾಡಾ ನಿಗಮದ ಅಧ್ಯಕ್ಷ ಕೆ.ಪಿ. ಅಂಶಮಂತ್ ಮಾತನಾಡಿ, ಗ್ರಾಮೀಣ ಭಾಗದ ಜನರ ಪ್ರತಿಭೆ ಅನಾವರಣಕ್ಕೆ ಸರ್ಕಾರ ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ. ಕ್ರೀಡಾಪಟುಗಳು ಸ್ಪರ್ಧಾ ಮನೋಭಾವನೆ ಯಿಂದ ಭಾಗವಹಿಸಿ, ತಮ್ಮ ಪ್ರತಿಭೆ ತೋರಿಸಬೇಕು'''''''' ಎಂದರು.ಆಪ್ತಶ್ರೀ ಯುವಕ ಸಂಘದ ಕಾರ್ಯದರ್ಶಿ ಓಣಿತೋಟ ರತ್ನಾಕರ್ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿ, ಸುಮಾರು ಐನೂರಕ್ಕಿಂತ ಹೆಚ್ಚು, ಕ್ರೀಡಾ ಪಟುಗಳು, ಐನ್ನೂರು ಜನ ದೈಹಿಕ ಶಿಕ್ಷಣ ಶಿಕ್ಷಕರು, ಭಾಗವಹಿಸಿದ್ದಾರೆ ಎಂದು ತಿಳಿಸಿದರು.ನರಸೀಪುರ ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ರತ್ನಾಕರ್ ಭಟ್ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾಂಗಣದಲ್ಲಿ ಸ್ವ ಸಹಾಯ ಸಂಘಗಳ ಸಂಜೀವಿನಿ ಒಕ್ಕೂಟದಿಂದ ತೆರೆಯಲಾಗಿದ್ದ ಮಳಿಗೆಗಳನ್ನು ಅರತಿಕೃಷ್ಣ ಉದ್ಘಾಟಿಸಿದರು.

ನರಸೀಪುರ ಪಂಚಾಯಿತಿ ಉಪಾಧ್ಯಕ್ಷೆ ಅಶಾ, ಸದಸ್ಯರಾದ ಅನಿಲ್ ಕುಮಾರ್, ಪ್ರದೀಪ್, ಸುಜಾತಾ, ಪವಿತ್ರಾ ಕಾಡಪ್ಪ, ಕ್ರೀಡಾ ಇಲಾಖೆಯ ವಿನುತಾ, ಸ್ವಯಂಪ್ರಕಾಶ ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್, ಕಾರ್ಯದರ್ಶಿ ಕೆ.ಆರ್. ಶ್ರೀನಿವಾಸ್, ಭೂ ಅಕ್ರಮ ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ಕೆಡಿಪಿ ಸದಸ್ಯರಾದ ಎ.ಎಸ್. ಅಶೋಕ್, ರಾಜಶಂಕರ್, ಬಿ.ಪಿ. ಚಿಂತನ್, ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಕ ಪ್ರಕಾಶ್, ಶಿಕ್ಷಣ ಸಂಪನ್ಮೂ ವ್ಯಕ್ತಿ ಆರ್.ಡಿ.ರವೀಂದ್ರ, ನಿವೃತ್ತ ಮುಖ್ಯಶಿಕ್ಷಕ ನಿತ್ಯಾನಂದ ಶಾಲಾ ಮುಖ್ಯಶಿಕ್ಷಕಿ ವಸಂತ ಕುಮಾರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.