ಸಾರಾಂಶ
ಹಗರಿಬೊಮ್ಮನಹಳ್ಳಿಯ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ಜೈಹಿಂದ್ ಕ್ರಿಕೆಟರ್ಸ್ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಲಾಯಿತು.
ಹಗರಿಬೊಮ್ಮನಹಳ್ಳಿ: ಕ್ರೀಡೆಯಲ್ಲಿ ತೊಡಗುವುದರಿಂದ ನಿರಂತರವಾಗಿ ಕ್ರಿಯಾಶೀಲರಾಗಿರಬಹುದು ಎಂದು ನಿವೃತ್ತ ಯೋಧ ನೂರ್ ಅಹಮದ್ ತಿಳಿಸಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ಜೈಹಿಂದ್ ಕ್ರಿಕೆಟರ್ಸ್ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.ಸದೃಢ ಆರೋಗ್ಯ ಹೊಂದಲು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಜೈಹಿಂದ್ ಕ್ರಿಕೆಟರ್ಸ್ ಅವರು ಸೀನಿಯರ್ಸ್ ಕ್ರಿಕೆಟರ್ಸ್ ಉತ್ತಮ ಅವಕಾಶವನ್ನು ನೀಡಿದ್ದಾರೆ ಎಂದರು.
ಮುಖಂಡ ಸಂಚಿ ಶಿವಕುಮಾರ ಮಾತನಾಡಿ, ಪಟ್ಟಣದಲ್ಲಿ ನಡೆಯುವ ಪ್ರತಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲಾಗುತ್ತಿದೆ. ಸಮಾಜಮುಖಿ ಕೆಲಸದಲ್ಲಿ ತೊಡಗುವುದರಿಂದ ಮನಸ್ಸು ಉಲ್ಲಸಿತವಾಗಿರುತ್ತದೆ. ಆಟಗಾರರು ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಅಂಪೈರ್ ತೀರ್ಮಾನವನ್ನು ಸ್ವೀಕರಿಸಬೇಕು ಎಂದರು. ನಿವೃತ್ತ ಯೋಧ ಶಿವಾನಂದ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕಿ ಗುರುಬಸಮ್ಮ, ಕಂಟ್ರೋಲರ್ ಸಂತೋಷನಾಯ್ಕ ಮಾತನಾಡಿದರು.ವಿಜೇತರು: ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಪಟ್ಟಣದ ರಾಕ್ ಕ್ರಿಕೆಟರ್ಸ್, ಹಂಪಸಾಗರದ ಲೆವೆನ್ ಬುಲೆಟ್ಸ್‌ಅನ್ನು ಮಣಿಸಿದರು. ರಾಕ್ ಕ್ರಿಕೆಟರ್ಸ್‌ನ ವೇಗಿ ಸುರೇಶ ಯಳಕಪ್ಪನವರ ನಾಲ್ಕು ವಿಕೇಟ್ ಪಡೆದು ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಿಟ್ಟಿಕೊಂಡರು.
ಜೈಹಿಂದ್ ಕ್ರಿಕೆಟರ್ಸ್‌ನ ಅಜರ್, ಜಾಹಿರ್, ನಿಯಾಜ್, ಸುಲೇಮಾನ್, ಶಮೀರ್, ಮುಖಂಡರಾದ ಸರ್ದಾರ್ ಯಮನೂರಪ್ಪ, ಬಡಲಡಕಿ ಕೃಷ್ಣಪ್ಪ, ಅಕ್ಕಂಡಿ ಕೃಷ್ಣ, ಕೆಜೆಎಚ್ ಅನ್ವರ್, ಇಬ್ರಾಹಿಂ, ಉಪ್ಪಾರ ಕನಕಪ್ಪ, ಸುಭಾನ್, ಪ್ಲಂಬರ್ ಮಾರುತಿ, ಅಟೋ ವೀರೇಶ್ ಇತರರಿದ್ದರು.