ಸಾರಾಂಶ
ಮಾಗಡಿ: ಪತ್ರಕರ್ತರು ಒತ್ತಡದಲ್ಲೇ ಕೆಲಸ ಮಾಡುತ್ತಿದ್ದು, ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಮಾಗಡಿ: ಪತ್ರಕರ್ತರು ಒತ್ತಡದಲ್ಲೇ ಕೆಲಸ ಮಾಡುತ್ತಿದ್ದು, ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕ್ಲಬ್ ಮಾಗಡಿಯಲ್ಲಿ ಆಯೋಜಿಸಿದ್ದ ಅಂತರ ಜಿಲ್ಲಾ ಪತ್ರಕರ್ತರ ಡಬಲ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸಲು ಸದೃಢ ಆರೋಗ್ಯವಿರಬೇಕು. ಆಗ ಮಾತ್ರ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯ. ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಪರಸ್ಪರ ಸೌಹಾರ್ದತೆ ಬೆಳೆದು ಉತ್ತಮ ಬಾಂಧವ್ಯ ಏರ್ಪಡುತ್ತದೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ. ಗೆದ್ದಾಗ ಹಿಗ್ಗಬಾರದು, ಸೋತಾಗ ಕಂಗೆಡಬಾರದು. ಸೋಲೆ ಮುಂದಿನ ಸೋಪಾನಕ್ಕೆ ಮೆಟ್ಟಿಲಂತೆ ಭಾವಿಸಿ ಮತ್ತಷ್ಟು ಗಟ್ಟಿ ಪ್ರಯತ್ನ ಮಾಡಬೇಕು. ಪತ್ರಕರ್ತರು ಕ್ರೀಡಗಳಲ್ಲಿ ಪಾಲ್ಗೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಪತ್ರಕರ್ತರು ಒಂದೆಡೆ ಸೇರಿ ಕ್ರೀಡಾಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು. ತಾಲೂಕು ಪತ್ರಕರ್ತರು ಅಂತರ ಜಿಲ್ಲಾ ಮಟ್ಟದ ಪಂದ್ಯಾವಳಿ ಆಯೋಜಿಸಿ ಪರಸ್ಪರ ಬಾಂಧವ್ಯವೃದ್ಧಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಒತ್ತಡ ನಿವಾರಣೆಗೆ ಕ್ರೀಡೆಗಳು ಪೂರಕ. ಮಾಗಡಿಯಲ್ಲಿ ಒಣಾಂಗಣ ಕ್ರೀಡಾಂಗಣ ಮಾಡುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ಸಿಗುತ್ತಿದೆ. ಪತ್ರಕರ್ತರು ಸದಾ ಸುದ್ದಿ ಹಿಂದೆ ಬಿದ್ದು ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಾರೆ. ಇಂತಹ ಚಟುವಟಿಕೆಗಳು ಅವರನ್ನು ಮಾನಸಿಕ ಉಲ್ಲಾಸ, ಮನರಂಜನೆ ನೀಡುತ್ತವೆ ಎಂದು ತಿಳಿಸಿದರು.
ಹಾಲಿ ಮಾಜಿ ಶಾಸಕರಿಂದ ಶಟಲ್ ಪಂದ್ಯಾವಳಿಗೆ ಚಾಲನೆ: ಪತ್ರಕರ್ತರ ಸಂಘ ಆಯೋಜಿಸಿದ್ದ ಡಬಲ್ಸ್ ಶಟಲ್ ಪಂದ್ಯಾವಳಿಗೆ ಹಾಲಿ ಶಾಸಕ ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್ ಪರಸ್ಪರ ಆಡುವ ಮೂಲಕ ಗಮನ ಸೆಳೆದರು. ಇಬ್ಬರು ನಾಯಕರು ಒಂದೇ ಸಮಯದಲ್ಲಿ ಆಗಮಿಸಿ ವೇದಿಕೆ ಹಂಚಿಕೊಂಡು ಶಟಲ್ ಪಂದ್ಯಾವಳಿ ಆಡಿದ್ದು ವಿಶೇಷವಾಗಿತ್ತು.ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಶಾಸಕ ಬಾಲಕೃಷ್ಣ ಸಹೋದರ ಎಚ್.ಎನ್.ಅಶೋಕ್ ಕ್ರೀಡಾಕೂಟದಲ್ಲಿ ಪತ್ರಕರ್ತರ ಜೊತೆ ಶಟಲ್ ಪಂದ್ಯಾವಳಿ ಆಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮಾಗಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಡಿ.ಎಸ್.ಕುಮಾರ್, ಕಾಂಗ್ರೆಸ್ ನಾಯಕಿ ಶೈಲಜಾ, ಕ್ಲಬ್ ಮಾಗಡಿ ಮಾಲೀಕ ರಾಮಕೃಷ್ಣಯ್ಯ, ಅಭಿಷೇಕ್, ಬೆಳಗುಂಬ ವಿಜಯಕುಮಾರ್, ಯುವ ಮುಖಂಡ ಮರಿ ಸೋಮನಹಳ್ಳಿ ಆನಂದ್ ಗೌಡ, ಬಿಡದಿ ಪುರಸಭಾಧ್ಯಕ್ಷ ಹರಿಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್, ಪುರಸಭೆ ಮಾಜಿ ಸದಸ್ಯ ರೂಪೇಶ್ ಕುಮಾರ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ತಾಲೂಕು ಅಧ್ಯಕ್ಷ ಟಿ.ಕೆ.ರಾಮು, ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ರಾಜ್ಯ ಸಮಿತಿ ಕಾರ್ಯದರ್ಶಿ ಸೋಮಶೇಖರ್ ಇತರರಿದ್ದರು.ಕೋಟ್.............
ಮಾಗಡಿಯಲ್ಲಿ ತಾಲೂಕು ಪತ್ರಕರ್ತರ ಸಂಘದ ಕಟ್ಟಡ ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು.-ಬಾಲಕೃಷ್ಣ, ಶಾಸಕ