ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನಂಜನಗೂಡು ಹಾಗೂ ಸರ್ಕಾರಿ ಪ್ರೌಢಶಾಲೆ ಹದಿನಾರು ಇವರ ಸಹಯೋಗದಲ್ಲಿ ಹದಿನಾರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಕ್ರೀಡಾಪಟುಗಳು ಆಟ-ಮೇಲಾಟಗಳಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬಾಲಕರ ವಿಭಾಗ: ಕಬಡ್ಡಿ ಪ್ರಥಮ ಸ್ಥಾನ, ಖೋಖೋ ಪ್ರಥಮ ಸ್ಥಾನ, ವಾಲಿಬಾಲ್ ಪ್ರಥಮ ಸ್ಥಾನ, ಥ್ರೋ ಬಾಲ್- ದ್ವಿತೀಯ ಸ್ಥಾನ, ಬಾಲ್ ಬ್ಯಾಡ್ಮಿಂಟನ್- ದ್ವಿತೀಯ ಸ್ಥಾನ ಪಡೆದಿರುತ್ತಾರೆ.
3000 ಮೀ. ಓಟ ಬೋಜಪ್ಪ ಕೋಟಿ - ಪ್ರಥಮ ಸ್ಥಾನ, 1500 ಮೀ ಓಟ ನಾಗರಾಜು - ಪ್ರಥಮ ಸ್ಥಾನ, 800 ಮೀ. ಓಟ ಈರಪ್ಪ - ಪ್ರಥಮ ಸ್ಥಾನ, 400 ಮೀ. ಓಟ ಧೀರಜ್ - ದ್ವಿತೀಯ ಸ್ಥಾನ, 200 ಮೀ. ಓಟ ಸಿದ್ರಾಮ -ದ್ವಿತೀಯ ಸ್ಥಾನ, 100 ಮೀ. ಓಟ ಶಿವಪ್ಪ- ಪ್ರಥಮ ಸ್ಥಾನ, 4100 ಮೀ. ಅದ್ವೈತ್ ಮತ್ತು ತಂಡ - ಪ್ರಥಮ ಸ್ಥಾನ, 4400 ಮೀ. ಓಟ ನಾಗರಾಜು ಮತ್ತು ತಂಡ ಪ್ರಥಮ ಸ್ಥಾನ, ತಟ್ಟೆ ಎಸೆತ ಮತ್ತು ಗುಂಡು ಎಸೆತ ಯು.ಡಿ. ಪವನ್ - ಪ್ರಥಮ ಸ್ಥಾನ, ಭರ್ಜಿ ಎಸೆತ- ಯಶವಂತ್ -ತೃತೀಯ ಸ್ಥಾನ, ಎತ್ತರ ಜಿಗಿತ- ಯಶವಂತ್- ದ್ವಿತೀಯ ಸ್ಥಾನ, ಉದ್ದಜಿಗಿತ -ಅಭಿನವ್ ತೃತೀಯ ಸ್ಥಾನ ಪಡೆದಿದ್ದಾರೆ.ಬಾಲಕಿಯರ ವಿಭಾಗ: ಕಬಡ್ಡಿ- ಪ್ರಥಮ ಸ್ಥಾನ, ಖೋಖೋ - ಪ್ರಥಮ ಸ್ಥಾನ, ಥ್ರೋಬಾಲ್ - ಪ್ರಥಮ, ಬಾಲ್ ಬ್ಯಾಡ್ಮಿಂಟನ್ - ದ್ವಿತೀಯ ಸ್ಥಾನ ಪಡೆದಿರುತ್ತಾರೆ. 3000 ಮೀ. ಓಟ- ಬೋರಮ್ಮ - ದ್ವಿತೀಯ ಸ್ಥಾನ, 1,500 ಮೀ ಓಟ ಬಿ.ಡಿ. ಕಸ್ತೂರಿ- ಪ್ರಥಮ ಸ್ಥಾನ, 800 ಮೀ. ಓಟ ರಂಜಿತ - ಪ್ರಥಮ ಸ್ಥಾನ, 400 ಮೀ. ಓಟ ಚಂದನ - ಪ್ರಥಮ ಸ್ಥಾನ, 200 ಮೀ. ಓಟ ಸಾಕ್ಷಿ - ತೃತೀಯ ಸ್ಥಾನ, 100 ಮೀ. ಓಟ ಜಿ. ರೋಹಿಣಿ- ಪ್ರಥಮ ಸ್ಥಾನ, 4100 ಮೀ.- ಕೀರ್ತನ ಮತ್ತು ತಂಡ ಪ್ರಥಮ ಸ್ಥಾನ, 4400 ಮೀ. ಓಟ ಬೋರಮ್ಮ ಮತ್ತು ತಂಡ- ಪ್ರಥಮ ಸ್ಥಾನ, ತಟ್ಟೆ ಎಸೆತ- ಇ.ಸ್ನೇಹ - ದ್ವಿತೀಯ ಸ್ಥಾನ, ಯಫಬಿ ಗುಂಡು ಎಸೆತ ಪ್ರಥಮ ಮತ್ತು ಭರ್ಜಿ ಎಸೆತ ದ್ವಿತೀಯ ಸ್ಥಾನ, ತ್ರಿವಿಧ ಜಿಗಿತ- ರಂಜಿತ- ಪ್ರಥಮ ಸ್ಥಾನ, ಎತ್ತರ ಜಿಗಿತ ದೀಪ- ದ್ವಿತೀಯ ಸ್ಥಾನ, ಉದ್ದ ಜಿಗಿತ- ಇ ಸ್ನೇಹಾ - ತೃತೀಯ ಸ್ಥಾನ ಪಡೆದಿದ್ದಾರೆ.
ಕ್ರೀಡಾಪಟುಗಳನ್ನು ಸಂಸ್ಥೆಯ ಆಡಳಿತಾಧಿಕಾರಿಗಳು, ಮುಖ್ಯಸ್ಥರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.