ಸಾರಾಂಶ
ವಿಶೇಷಚೇತನ ಮಕ್ಕಳು ಸಾಮಾನ್ಯ ಮಕ್ಕಳಾಗಬೇಕು. ಇದಕ್ಕಾಗಿ ಅನುಕಂಪ ಬೇಡ. ಅವಕಾಶ ಒದಗಿಸಬೇಕು
ಗದಗ: ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುತ್ತವೆ. ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಶುಕ್ರವಾರ ಗದಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಗದುಗಿನ ಸರ್ಕಾರಿ ಮರಾಠಿ ಶಾಲಾ ಆವರಣದಲ್ಲಿ ಜರುಗಿದ ಗದಗ ಶಹರ ವಿಕಲಚೇತನ ಮಕ್ಕಳ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಶೇಷಚೇತನ ಮಕ್ಕಳು ಸಾಮಾನ್ಯ ಮಕ್ಕಳಾಗಬೇಕು. ಇದಕ್ಕಾಗಿ ಅನುಕಂಪ ಬೇಡ. ಅವಕಾಶ ಒದಗಿಸಬೇಕು. ಅವರಲ್ಲಿರುವ ವಿಶೇಷತೆಗಳಿಗೆ ಸ್ಪೂರ್ತಿ ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಶಶಿಧರ ಚಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷಚೇತನರು ಸಾಧನೆಗೈಯಬಲ್ಲರು. ಮುಖ್ಯವಾಗಿ ಅವರಿಗೆ ಸ್ಪೂರ್ತಿ ಬೇಕು. ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ನಡೆಯಬೇಕೆಂದರು.ಪಾಲಕರಾದ ನರಸಿಂಗ್ ರಂಗ್ರೇಜ್, ಸೈಮನ್ ರೂಡ್ರಿಗಸ್, ವೀಣಾ ದೇವರಕೊಂಡಿ ಮುಂತಾದವರು ವಿಶೇಷಚೇತನರ ಶೈಕ್ಷಣಿಕ ಪ್ರಗತಿ ಕುರಿತು ಮಾತನಾಡಿದರು. ಎಸ್.ಆರ್.ಪಿ ಶಿಕ್ಷಕರಾದ ಸುನೀತಾ ತಿಮ್ಮನಗೌಡ್ರ ಸ್ವಾಗತಿಸಿ ನಿರೂಪಿಸಿದರು. ಶಬಾನಾ ನದಾಫ್, ಸಮಗಪ್ಪ ಅಂಗಡಿ, ಆಶಾ ಭಜಂತ್ರಿ, ಗೀತಾ ಸಿದ್ದನಗೌಡ್ರ, ರೇಖಾ ಭಜಂತ್ರಿ, ರಾಧಾ ಕರಾಬದಿನ್ನಿ, ಕವಿತಾ ರೇಖಾ ಉಪ್ಪಳರ, ನಿರಂಜನ ಉಮನಾಬಾದಿ, ರೇಖಾ ಕಿರಟಗೇರಿ, ಶೃತಿ ಶ್ಯಾವಿ, ಸತೀಶ ಗಡಾದ, ಶಬಾನಾ ಕಲೀಫನವರ, ನಸರೀನ ಕರಡಿ, ಮಂಜುನಾಥ ಪಾವನ, ಮಾಲನ ಮುಂತಾದವರಿದ್ದರು.