ಸಾರಾಂಶ
Sports contribute to physical and mental fitness: BEO Yallappa
-ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
----ಕನ್ನಡಪ್ರಭ ವಾರ್ತೆ ಸುರಪುರ
ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಕ್ರೀಡೆಗಳು ದೈಹಿಕ-ಮಾನಸಿಕ ಸದೃಢತೆಗೆ ಸಹಕಾರಿಯಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಹೇಳಿದರು.ನಗರದ ತಾಲೂಕು ಮಟ್ಟದ ಕ್ರೀಡಾಗಂಣದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಗೆಲುವು-ಸೋಲು ಸಾಮಾನ್ಯ. ಜೀವನದಲ್ಲಿ ಏರಿಳಿತಗಳನ್ನು, ಸಿಹಿಕಹಿಗಳನ್ನು ತಿಳಿಸುವ ಕೆಲಸ ಮಾಡಬೇಕು. ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗಬಾರದು. ತೀರ್ಪುಗಾರರು ನ್ಯಾಯಸಮ್ಮತ ತೀರ್ಪುಗಳನ್ನು ನೀಡಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆನಂದ ಜೋಶಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ, ಬಿಆರ್‌ಸಿಗಳಾದ ಪಂಡಿತ್ ನಿಂಬೂರ, ಮಲ್ಲಪ್ಪ ದೊಡ್ಡಮನಿ, ತಾಲೂಕು ನೌಕರ ಸಂಘದ ಅಧ್ಯಕ್ಷ ಸಂಜೀವಪ್ಪ ದರಬಾರಿ, ಎಎಸ್‌ಐ ಮನೋಹರ ರಾಠೋಡ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಖಾದರ ಪಟೇಲ್, ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಗೋವಿಂದಪ್ಪ ಟಣಕೇದಾರ, ಉಪನ್ಯಾಸಕ ರಾಮನಗೌಡ, ಶರಣಯ್ಯ, ಪ್ರಶಾಂತ, ಶಿವುಕುಮಾರ ಹಿರೇಮಠ ಇದ್ದರು.ಶರಣಗೌಡ ಪಾಟೀಲ ಸ್ವಾಗತಿಸಿದರು. ಲಕ್ಷ್ಮಣ ಬಿರಾದರ ನಿರೂಪಿಸಿದರು. ಭೀಮರಾಯ ಗೋನಾಳ ಕ್ರೀಡಾಕೂಟ ಪ್ರತಿಜ್ಞೆ ಬೋಧಿಸಿದರು. ಸುಭಾಷ್ ಅಗ್ನಿ ವಂದಿಸಿದರು.-------
ಫೋಟೊ: 20ವೈಡಿಆರ್19ಸುರಪುರ ನಗರದ ತಾಲೂಕು ಮಟ್ಟದ ಕ್ರೀಡಾಗಂಣದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.