ಸಾರಾಂಶ
ಅರೇಹಳ್ಳಿ: ಕನ್ನಡ ನಾಡಿನಲ್ಲಿರುವ ಎಲ್ಲಾ ವರ್ಗದ ಜನರು ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಇಮ್ರಾನ್ ಅರೇಹಳ್ಳಿ ಹೇಳಿದರು. ಬೇಲೂರು ತಾಲೂಕು ಅರೇಹಳ್ಳಿಯ ಸ.ಪ.ಪೂ. ಕಾಲೇಜು ಮೈದಾನದಲ್ಲಿ ಟಿಪ್ಪು ಬಾಯ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯುವಕರಿಗೆ ಹಾಗೂ ಮಕ್ಕಳಿಗೆ ಆಯೋಜನೆ ಮಾಡಲಾಗಿದ್ದ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಅವರು, ಅರೇಹಳ್ಳಿಯು ಸ್ವಾಭಿಮಾನಿ ಹಾಗೂ ಸಾಧಕರ ಭೂಮಿಯಾಗಿದೆ. ಗ್ರಾಮೀಣ ಮಟ್ಟದಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರೇಹಳ್ಳಿಯ ಕ್ರೀಡಾಪಟುಗಳು ತಮ್ಮ ಛಾಪನ್ನು ಮೂಡಿಸಿ ಕನ್ನಡ ನಾಡಿನ ಹೆಸರನ್ನು ರಾರಾಜಿಸುವಂತೆ ಮಾಡಿದ್ದಾರೆ. ಕೆಲವು ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗುತ್ತಿದ್ದ ನಾನಾ ಕ್ರೀಡೆಗಳನ್ನು ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮತ್ತೊಮ್ಮೆ ಟಿಪ್ಪು ಬಾಯ್ಸ್ ವತಿಯಿಂದ ಸ್ಥಗಿತಗೊಂಡಿದ್ದ ಕ್ರೀಡೆಯನ್ನು ಮತ್ತೊಮ್ಮೆ ಪ್ರಾರಂಭಿಸಲಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡೆಯನ್ನು ಯಶಸ್ವಿಗೊಳಿಸಿದ್ದಾರೆ. ಸ್ಲೋ ಬೈಕ್ ರೇಸ್‌ನಲ್ಲಿ ಸಫಾನ್ ಪ್ರಥಮ, ಆರ್‌ಎಕ್ಸ್ ಇಮ್ರಾನ್ ದ್ವಿತೀಯ, ಶಾಟ್‌ಪುಟ್‌ನಲ್ಲಿ ಯಾಸೀನ್ ಪ್ರಥಮ ಹಾಗೂ ಮಕ್ಕಳ ಸ್ಲೋ ಸೈಕಲ್ ರೇಸ್‌ನಲ್ಲಿ ಹ್ಯಾರಿಸ್ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))