ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮಾಜದ ಮಂದಿ ಒಗ್ಗೂಡಲು ಕ್ರೀಡಾಕೂಟ ಒಂದು ಉತ್ತಮ ವೇದಿಕೆಯಾಗಿದೆ ಎಂದು ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಎಡಿಕೇರಿ ಪ್ರಸನ್ನ ಹೇಳಿದರು.

ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ನಮೋ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಎರಡನೇ ವರ್ಷದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ -2026ವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಯುವಕರು ಒಗ್ಗೂಡಿ ಕ್ರೀಡಾಕೂಟ ಆಯೋಜಿಸುತ್ತಿರುವುದು ಸಂತಸದ ವಿಷಯ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಜನರ ನಡುವಿನ ಸಾಮರಸ್ಯಕ್ಕೆ ಒಗ್ಗೂಡುವಿಕೆಗೆ ಸಹಕಾರಿಯಾಗುತ್ತದೆ ಎಂದರು. ನಮೋ ಯುವಕ ಸಂಘದ ಅಧ್ಯಕ್ಷ ಭೈರುಡ ವಸಂತ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಲ್ಲಮಾವಟಿ ಗ್ರಾಪಂ ಉಪಾಧ್ಯಕ್ಷ ಚೋಕಿರ ಭಾಭಿ ಭೀಮಯ್ಯ, ಮಾಜಿ ಅಧ್ಯಕ್ಷ ಮಣವಟ್ಟೀರ ಹರೀಶ್ ಕುಶಾಲಪ್ಪ, ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಹಿರಿಯರಾದ ಹೊಸೊಕ್ಲು ಮಾಚಯ್ಯ, ಮೊನ್ನಪ್ಪ, ಹಿಂದೂ ಸುರಕ್ಷಾ ಸಮಿತಿ ಸಹ ಸಂಚಾಲಕ ಬಿ.ಎಂ. ಪ್ರದೀಪ, ಬಲ್ಲಮಾವಟಿ ದವಸ ಭಂಡಾರದ ನಿರ್ದೇಶಕಿ ಬೊಟ್ಟೋಳಂಡ ಜಾನಕಿ, ಸಂಘದ ಕಾರ್ಯದರ್ಶಿ ಹೊಸೊಕ್ಲು ಶ್ರೀಕಾಂತ್, ಗೌರವ ಕಾರ್ಯದರ್ಶಿ ಚೀಯಂಡ ದಿನೇಶ್, ಖಜಾಂಚಿ ರೋಶನ್ ಪಾಲ್ಗೊಂಡಿದ್ದರು.