ಯುವಜನತೆಯಲ್ಲಿ ಸದಭಿರುಚಿ ಬೆಳೆಸಲು ಕ್ರೀಡಾಕೂಟ: ಸೊರಕೆ ಆಶಯ

| Published : Feb 11 2024, 01:47 AM IST

ಯುವಜನತೆಯಲ್ಲಿ ಸದಭಿರುಚಿ ಬೆಳೆಸಲು ಕ್ರೀಡಾಕೂಟ: ಸೊರಕೆ ಆಶಯ
Share this Article
  • FB
  • TW
  • Linkdin
  • Email

ಸಾರಾಂಶ

ಸಂತೆಕಟ್ಟೆ-ಕಲ್ಯಾಣಪುರ ಬಿಲ್ಲವರ ಸೇವಾ ಸಂಘ ನೇತೃತ್ವದಲ್ಲಿ ನೇಜಾರು ಮೈದಾನದಲ್ಲಿ ಬಿಲ್ಲವ ಕ್ರೀಡಾಕೂಟ ನಡೆಯಿತು. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕ್ರೀಡೆಯು ಯುವಜನತೆಯನ್ನು ಆಕರ್ಷಿಸುತ್ತದೆ ಮತ್ತು ಈ ಮೂಲಕ ಸಮಾಜವನ್ನು ಒಗ್ಗೂಡಿಸುತ್ತದೆ. ಆದ್ದರಿಂದ ಯುವಜನರಲ್ಲಿ ಸದ್ಭಾವನೆ ಮತ್ತು ಸದಭಿರುಚಿಯನ್ನು ಬೆಳೆಸಲು ಕ್ರೀಡಾಕೂಟಗಳನ್ನು ಆಯೋಜಿಸಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಇಲ್ಲಿನ ಸಂತೆಕಟ್ಟೆ-ಕಲ್ಯಾಣಪುರ ಬಿಲ್ಲವರ ಸೇವಾ ಸಂಘ ನೇತೃತ್ವದಲ್ಲಿ ನೇಜಾರು ಮೈದಾನದಲ್ಲಿ ಆಯೋಜಿಸಿದ್ದ ಬಿಲ್ಲವ ಕ್ರೀಡಾಕೂಟ-2024ನ್ನು ಉದ್ಘಾಟಿಸಿ ಮಾತನಾಡಿದರು.

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಕ್ರೀಡಾಕೂಟಕ್ಕೆ ದೀಪ ಬೆಳಗಿಸಿ ಚಾಲನೆ ನೀಡದರು. ಸಂಘದ ಅಧ್ಯಕ್ಷ ಶೇಖರ ಗುಜ್ಜರ ಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ಕಲ್ಯಾಣಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಕುಂದರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಉದ್ಯಮಿ ಸುಗುಣ ಕುಮಾರ್, ಮೂಡುಕುದ್ರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಜತ್ತನ್, ಸಂತೆಕಟ್ಟೆ ಬಿಲ್ಲವರ ಸೇವಾ ಸಂಘದ ಗೌರವ ಅಧ್ಯಕ್ಷ ಭಾಸ್ಕರ ಜತ್ತನ್, ಉಪಾಧ್ಯಕ್ಷರಾದ ಶೇಖರ್ ಬಿ.ಪೂಜಾರಿ, ಜಗದೀಶ್ ಕೆಮ್ಮಣ್ಣು, ಅರ್ಚಕ ಶಂಕರ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಉಷಾ ವಸಂತ್, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ಯಾಮ್ ಕೆ.ಪೂಜಾರಿ, ಅಧ್ಯಕ್ಷ ಟಿ‌.ರಾಮ ಪೂಜಾರಿ, ಕ್ರೀಡಾ ಸಂಯೋಜಕ ರಾಕೇಶ್ ಪೂಜಾರಿ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಶೇಖರ್ ಬೈಕಾಡಿ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಮುರಳಿದರ್ ಸುವರ್ಣ ವಂದಿಸಿದರು.