- ಡಾ.ಪ್ರಭಾ ಜನ್ಮದಿನ: ಕೇಕ್ ಕಟಿಂಗ್, ಗಿಡ ನೆಡುವ ಕಾರ್ಯಕ್ರಮ
- - -ದಾವಣಗೆರೆ: ಎಸ್‌ಎಸ್‌ಐಎಂಎಸ್ ಮತ್ತು ಆರ್‌ಸಿ ಡಿಪಾರ್ಟ್‌ಮೆಂಟ್ ಆಫ್ ಯುರಾಲಜಿ ಹಾಗೂ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಮಾ.14 ಮತ್ತು 15ರಂದು ಮೂತ್ರಕೋಶ ಶಸ್ತ್ರಚಿಕಿತ್ಸೆ ವೈದ್ಯರಿಗಾಗಿ ಕಾಲೇಜಿನ ಮೈದಾನದಲ್ಲಿ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಯುರೋಲಜಿ ಅಸೋಸಿಯೇಷನ್ ಅಧ್ಯಕ್ಷ ಡಾ. ಎಚ್.ಎನ್. ನವೀನ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ಯುರೋಲಜಿ ಅಸೋಸಿಯೇಷನ್ ಪರವಾಗಿ ನಗರದ ಎಸ್‌ಎಸ್‌ಐಎಂಎಸ್ ಅಂಡ್ ಆರ್‌ಸಿ ವತಿಯಿಂದ ನಡೆಯುವ ಕ್ರೀಡೋತ್ಸವದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ನೂರಾರು ಮೂತ್ರಕೋಶ ಶಸ್ತ್ರಚಿಕಿತ್ಸಾ ವೈದ್ಯರು ಭಾಗವಹಿಸಲಿದ್ದಾರೆ ಎಂದರು.ಮಾ.14ರಂದು ಟೇಬಲ್ ಟೆನ್ನಿಸ್, ಶಟಲ್ ಬ್ಯಾಡ್ಮಿಂಟನ್, ಮಾ.15ರಂದು ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ಕ್ಯಾಪಿಟಲ್ಸ್, ವೆಸ್ಟರ್ನ್ ವಾರಿಯರ್ಸ್, ನಾರ್ತ್ ಕರ್ನಾಟಕ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಮೈಸೂರು ತಂಡಗಳು ಭಾಗವಹಿಸಿ ಪ್ರಶಸ್ತಿಗೆ ಸೆಣಸಾಡಲಿವೆ. ಪ್ರತಿನಿತ್ಯ ಸ್ಟೆಥಾಸ್ಕೋಪ್ ಮತ್ತು ರೋಬೋಟ್‌ನೊಂದಿಗೆ ಸೇವೆ ಸಲ್ಲಿಸುವ ಮೂತ್ರಕೋಶ ಶಸ್ತ್ರಚಿಕಿತ್ಸಾ ವೈದ್ಯರು ಕ್ರೀಡಾ ಮನೋಭಾವದಿಂದ ಮೈದಾನದಲ್ಲಿ ಆಟವಾಡಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ 50ನೇ ಜನ್ಮದಿನದ ಪ್ರಯುಕ್ತ ಕೇಕ್ ಕಟಿಂಗ್ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಹಾಗೂ ಪ್ರಾಚಾರ್ಯ ಡಾ. ಬಿ.ಎಸ್. ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ.ಅರುಣ್ ಅಜ್ಜಪ್ಪ, ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಸುನೀಲ್, ಡಾ.ಕಾರ್ತೀಕ್, ಡಾ. ಸಿ.ಎಸ್. ಗಿರೀಶ ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
- - -
-11ಕೆಡಿವಿಜಿ31: ಮೂತ್ರಕೋಶ ಶಸ್ತ್ರಚಿಕಿತ್ಸೆ ವೈದ್ಯರಿಗಾಗಿ ಕ್ರೀಡೋತ್ಸವ ಆಯೋಜನೆ ಕುರಿತು ಡಾ. ಎಚ್.ಎನ್. ನವೀನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.