ಸಾರಾಂಶ
ನೆಲಮಂಗಲ: ಮಕ್ಕಳಿಗೆ ಕಲಿಕೆ ಜೊತೆಯಲ್ಲಿ ಕ್ರೀಡೆಯು ಮಕ್ಕಳ ದೈಹಿಕ ಬೆಳವಣಿಗೆಗೆ ಮುಖ್ಯ ಎಂದು ನೆಲಮಂಗಲ ರೋಟರಿ ಅಧ್ಯಕ್ಷ ರೊ.ಜಿ.ಆರ್.ನಾಗರಾಜು ಹೇಳಿದರು
ನೆಲಮಂಗಲ: ಮಕ್ಕಳಿಗೆ ಕಲಿಕೆ ಜೊತೆಯಲ್ಲಿ ಕ್ರೀಡೆಯು ಮಕ್ಕಳ ದೈಹಿಕ ಬೆಳವಣಿಗೆಗೆ ಮುಖ್ಯ ಎಂದು ನೆಲಮಂಗಲ ರೋಟರಿ ಅಧ್ಯಕ್ಷ ರೊ.ಜಿ.ಆರ್.ನಾಗರಾಜು ಹೇಳಿದರು. ತಾಲೂಕಿನ ಆನಂದನಗರ ಸರ್ಕಾರಿ ಶಾಲಾ ಮಕ್ಕಳಿಗೆ ನೆಲಮಂಗಲ ರೋಟರಿ ಮತ್ತು ಬೆಂಗಳೂರು ಈ ಕ್ಲಬ್ ಸಾಖಿ ವತಿಯಿಂದ ಶಾಲಾ ಮಕ್ಕಳಿಗೆ ಪಾಠದ ಜೊತೆಗೆ ಆಡಲು ಅನುಕೂಲವಾಗುವ ಉದ್ದೇಶದಿಂದ ಟಾಯ್ಸ್ ಲೈಬ್ರರಿಯನ್ನು ಉಚಿತವಾಗಿ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನೆಲಮಂಗಲ ರೋಟರಿ ಅಧ್ಯಕ್ಷ ಖಜಾಂಚಿ ಎಸ್.ಗಂಗರಾಜು ರೋಟರಿ ಈ ಕ್ಲಬ್ ಸಾಖಿ ಅಧ್ಯಕ್ಷ ರೊ. ಪ್ರತಿಮಾರಾವ್, ಕಾರ್ಯದರ್ಶಿ ರೊ. ರಶ್ಮಿ, ನಿರ್ದೇಶಕರಾದ ಉಷಾ ಶರ್ಮ, ರೊ.ಉಷಾ ಬಿ.ಆರ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್, ಶಿಕ್ಷಕರಾದ ಜಯಪ್ರಕಾಶ್, ಶೋಭಾ, ಸುಮ, ಶಶಿಕಲಾ, ಪುಷ್ಪಲತಾ, ಸಿಆರ್‌ಪಿ ರೇಖಾಶೆಟ್ಟಿ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))