ಕ್ರೀಡೆಯು ದೈಹಿಕ ಮಾನಸಿಕ ಆರೋಗ್ಯ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ನಿತ್ಯ ಕ್ರೀಡಾ ಚಟುವಟಿಕೆಯಿಂದ ಸದೃಢ ಆರೋಗ್ಯ ಕಾಪಾಡಬಹುದು

ಯಲಬುರ್ಗಾ: ಪ್ರತಿಯೊಬ್ಬರ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಕುಷ್ಟಗಿ ತಹಸೀಲ್ದಾರ್ ಗುರುರಾಜ ಎಂ.ಛಲವಾದಿ ಹೇಳಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಯಲಬುರ್ಗಾ-ಕುಕನೂರು ತಾಲೂಕಿನ ಆಟಗಾರರಿಗೆ ಪ್ರಥಮ ಬಾರಿ ಚಾಂಪಿಯನ್ಸ್ ಕ್ರಿಕೆಟ್ ಲಿಂಗ್-೦೧ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಯು ದೈಹಿಕ ಮಾನಸಿಕ ಆರೋಗ್ಯ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ನಿತ್ಯ ಕ್ರೀಡಾ ಚಟುವಟಿಕೆಯಿಂದ ಸದೃಢ ಆರೋಗ್ಯ ಕಾಪಾಡಬಹುದು. ಆ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆ ಮುಖ್ಯವಾಗಬೇಕು ಎನ್ನುವ ಸಂದೇಶ ಕ್ರೀಡಾಪಟುಗಳು ಪಾಲಿಸಬೇಕು. ಅವಳಿ ತಾಲೂಕಿನ ಆಟಗಾರರಿಗೆ ಮೊದಲ ಬಾರಿ ಚಾಂಪಿಯನ್ಸ್ ಲಿಂಗ್ ಆಯೋಜನೆ ಮಾಡಿದ್ದು, ಎಲ್ಲ ತಂಡಗಳ ಆಟಗಾರರು ಉತ್ತಮ ಆಟ ಆಡುವ ಮೂಲಕ ಯಶಸ್ವಿಗೆ ಸಹಕಾರ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾಪಟುಗಳ ಗುರುತಿಸುವ ಕೆಲಸ ಈ ಲಿಂಗ್‌ನಲ್ಲಿ ಕಾಣಬಹುದು. ಪಟ್ಟಣದಲ್ಲಿ ನಿರಂತರವಾಗಿ ಕ್ರಿಕೆಟ್ ಟೂರ್ನಾಮೆಂಟ್ ನಡೆಯುವ ಕಾರ್ಯಕ್ಕೆ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ತಾಪಂ ಮಾಜಿ ಸದಸ್ಯ ಸುಧಾಕರ ದೇಸಾಯಿ ಹಾಗೂ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಜಕ್ಕಲಿ ಮಾತನಾಡಿ, ಚಾಂಪಿಯನ್ಸ್ ಕ್ರಿಕೆಟ್ ಲಿಂಗ್ ಯುವ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಬಾಲಾಜಿ, ಗುರುರಾಜ ರಾಮಶೆಟ್ಟಿ, ಪ್ರಕಾಶ ಛಲವಾದಿ, ಕಲ್ಲಪ್ಪ ಕರಮುಡಿ, ಮಹಾಂತೇಶ ಛಲವಾದಿ, ಜಗದೇಶ, ಸುರೇಶ ಛಲವಾದಿ, ಶಂಕರ್ ಬಣಕಾರ್, ಶಿವರಾಜ್ ಭಾವಿಮನಿ, ಮುತ್ತುರಾಜ್ ಬಳಿಗಾರ, ಮುತ್ತಪ್ಪ ಸಂಗನಾಳ, ಬಸವರಾಜ ಬಂಡಿಹಾಳ, ಖುರ್ಷಿದ್ ಅಲಿ ನೀಲಗಾರ, ನಾಗರಾಜ ಛಲವಾದಿ, ಶ್ಯಾಮ್ ಪೂಜಾರ ಇದ್ದರು.