ತರೀಕೆರೆದುಶ್ಚಟಗಳಿಂದ ದೂರವಿರಲು ಕ್ರೀಡೆಗಳು ಹೆಚ್ಚು ಸಹಕಾರಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆಯಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ

ಕನ್ನಡಪ್ರಭ ವಾರ್ತೆ ತರೀಕೆರೆ

ದುಶ್ಚಟಗಳಿಂದ ದೂರವಿರಲು ಕ್ರೀಡೆಗಳು ಹೆಚ್ಚು ಸಹಕಾರಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.,

ಜಿಲ್ಲಾಡಳಿತ ಚಿಕ್ಕಮಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕು ಆಡಳಿತ, ಪುರಸಭೆ ತರೀಕೆರೆ ಹಾಗೂ ಜಿ ಹೆಚ್ ಶ್ರೀನಿವಾಸ ಜನಹಿತ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಪ.ಪೂ. ಕಾಲೇಜು ಮೈದಾನನದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟಿಸಿ ಮಾತನಾಡಿದರು.

ಸುಮಾರು 400 ವರ್ಷಗಳ ಹಿಂದೆಯೇ ಮೈಸೂರಿನ ಒಡೆಯರು ಕ್ರೀಡೆಗಳ ಅಗತ್ಯತೆ ಮನಗಂಡು ನಾಡಹಬ್ಬ ದಸರಾ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾರ್ವಜನಿಕರಿಗೆ ಕುಸ್ತಿ ಮತ್ತಿತರ ಕ್ರೀಡೆ ಆಯೋಜಿಸುತ್ತಿದ್ದರು.ಜನರೆಲ್ಲ ಈ ಆಟ ಗಳಲ್ಲಿ ಪಾಲ್ಗೊಳ್ಳುವ ಮೂಲಕ ದಸರಾದ ಸಂಭ್ರಮ ಇಮ್ಮಡಿಯಾಗುತ್ತಿತ್ತು ಎಂದು ತಿಳಿಸಿದರು.

ಇತ್ತೀಚಿನ ಆಧುನಿಕ ಒಲಂಪಿಕ್ ನಲ್ಲಿ ನಡೆಯುವ ಕ್ರೀಡೆಗಳಲ್ಲಿ ಭಾರತದ ಸಾಂಪ್ರದಾಯಿಕ ಕ್ರೀಡೆಗಳನ್ನು ಅಳವಡಿಸಿ ರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದ ಸಾರ್ವಜನಿಕರು ಇದರ ಸದುಪಯೋಗಮಾಡಿ. ಕ್ರೀಡಾಕೂಟಗಳಲ್ಲಿ ಭಾಗವಹಿಸುವವರು ವರ್ಷಪೂರ್ತಿ ಕ್ರೀಡೆಗಳ ಅಭ್ಯಾಸ ರೂಢಿಸಿ ಕೊಳ್ಳುವುದರಿಂದ ರಾಜ್ಯ,ರಾಷ್ಟ್ರ , ಏಷ್ಯನ್ ಕ್ರೀಡೆ ಮತ್ತು ಒಲಂಪಿಕ್ ನಂತಹ ಮಹೋನ್ನತ ಕ್ರೀಡಾಕೂಟಗಳಲ್ಲಿ ಬಹುಮಾನ ಗೆದ್ದು ದೇಶದ ಗೌರವ ಹೆಚ್ಚಿಸುವ ಜೊತೆಗೆ ಯುವಜನರ ಆರೋಗ್ಯ ವೃದ್ಧಿಸಿ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.

ತರೀಕೆರೆ ತಾಲೂಕು ಯುವ ಸಬಲೀಕರಣ ಮತ್ತು ಸಹಾಯಕ ಕ್ರೀಡಾಧಿಕಾರಿ ವಿರೂಪಾಕ್ಷ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿ ರೋಗ ಮುಕ್ತ ಜೀವನ ಸಾಗಿಸಬೇಕಾದರೆ ದಿನನಿತ್ಯ ತಮ್ಮ ಜೀವನದ ಒಂದು ಭಾಗವಾಗಿ ಆಟ ಆಡುವುದನ್ನು ರೂಢಿಸಿ ಕೊಳ್ಳಬೇಕು. ಯುವಜನರು ಕ್ರೀಡೆಯನ್ನು ಕ್ರಮಬದ್ಧವಾಗಿ ರೂಡಿಸಿಕೊಂಡಲ್ಲಿ ದೈಹಿಕ ಸಾಮರ್ಥ್ಯ ಹೆಚ್ಚುವ ಜೊತೆಗೆ ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಎಚ್.ಯು.ಫಾರೂಕ್, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶು ರಾಮಪ್ಪ ಎಚ್.ಎ. ತರೀಕೆರೆ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನಂತಪ್ಪ ಸಿ ಆರ್, ಉಪಾಧ್ಯಕ್ಷ ದಾದಾಪೀರ್, ನೌಕರರ ಸಂಘದ ಕಾರ್ಯದರ್ಶಿ ಮಂಜುನಾಥ, ಕಾರ್ಯಾಧ್ಯಕ್ಷ ಎಂ ಬಿ ರಾಮಚಂದ್ರಪ್ಪ. ನೌಕರ ಸಂಘದ ಕ್ರೀಡಾ ಕಾರ್ಯದರ್ಶಿ ಚಂದ್ರಶೇಖರ್ ಬಿ ಸಿ, ಸದಸ್ಯ ಶೇಖರಪ್ಪ, ಉಪ ಪ್ರಾಚಾರ್ಯ ಶಿವಪ್ರಸಾದ್, ತರೀಕೆರೆ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ. ಪಿ. ಗುರುಮೂರ್ತಿ, ಬಡ್ತಿ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ. ಈ ಕಾಂತರಾಜಯ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವೈ. ಆರ್. ಮಲ್ಲೇಶ್, ಕಾರ್ಯದರ್ಶಿ ಸಂತೋಷ್, ದೈಹಿಕ ಶಿಕ್ಷಣ ಶಿಕ್ಷಕ ನಟರಾಜ ಎಚ್ ಎಂ, ಬಸವರಾಜು, ಅಜ್ಜಂಪುರ ತಾಲೂಕಿನ ಸಹಾಯಕ ಕ್ರೀಡಾಧಿಕಾರಿ ಶಾಂತಪ್ಪ, ಭಾಗವಹಿಸಿದ್ದರು.26ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಶಾಸಕ ಜಿ.ಹೆಚ್.ಶ್ರೀನಿವಾಸ್ ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅನಂತಪ್ಪ , ಪುರಸಭೆ ಮಾಜಿ ಅಧ್ಯಕ್ಷ ಎಚ್.ಯು.ಫಾರೂಕ್, ನಾಮಿನಿ ಸದಸ್ಯ ಅದಿಲ್ ಪಾಷ ಮತ್ತಿತರರು ಇದ್ದರು.