ಸಾರಾಂಶ
- ದೇವರಬೆಳಕೆರೆ ವಲಯಮಟ್ಟದ ಕ್ರೀಡಾಕೂಟದಲ್ಲಿ ಉಪನಿರ್ದೇಶಕ ಕೊಟ್ರೇಶ್ ಅಭಿಮತ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ವಿದ್ಯಾರ್ಥಿಗಳು ಜೀವನದಲ್ಲಿ ಸ್ವಾವಲಂಬನೆಯಾಗಲು ಕ್ರೀಡೆಗಳು ಸಹಕಾರಿ ಆಗುತ್ತವೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್ ಅಭಿಪ್ರಾಯಪಟ್ಟರು.ಇಲ್ಲಿಗೆ ಸಮೀಪದ ಗುಳದಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ದೇವರಬೆಳಕೆರೆ ವಲಯಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳು ಆತ್ಮಸ್ಥೈರ್ಯವನ್ನು ಮತ್ತು ದೈಹಿಕ ಆರೋಗ್ಯ ಸದೃಢಗೊಳಿಸುತ್ತವೆ. ಘನತೆ ಹೆಚ್ಚಿಸುವ ಹಾಗೂ ಮಹತ್ವ ಸಾರುವಲ್ಲಿ ಆಟೋಟಗಳು ನೆರವಾಗುತ್ತವೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕ್ರೀಡೆಗಳಲ್ಲಿ ತೊಡಗಿದರೆ ಓದಿಗೆ ಪೂರಕವಾಗಿ ಜ್ಞಾನಾರ್ಜನೆ ಪಡೆಯಬಹುದು. ಕ್ರೀಡೆಗೆ ಗ್ರಾಮಸ್ಥರ ದೇಣಿಗೆ ಮತ್ತು ಶಿಕ್ಷಣ ಇಲಾಖೆಗೆ ನೀಡಿದ ಸಹಕಾರವನ್ನು ಶ್ಲಾಘಿಸಿದರು.ತಾಪಂ ಮಾಜಿ ಸದಸ್ಯ ಮಹಂತೇಶ್ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಸಾರಿಗೆ ಸೌಲಭ್ಯಗಳೇ ಇರದ ಗ್ರಾಮಗಳಲ್ಲಿ ಕ್ರೀಡೆಗಳ ಆಯೋಜನೆಗೆ ಯಾವತ್ತು ಸಂಪೂರ್ಣ ಸಹಕಾರ ನೀಡುತ್ತೇವೆ. ಕ್ರೀಡಾಕೂಟದಲ್ಲಿ ಶಾಲೆ ಮಕ್ಕಳಿದ್ದಲ್ಲಿ ಅದೇ ಶಾಲೆಯ ತೀರ್ಪುಗಾರರು ಇರುವುದಕ್ಕೆ ವಿರೋಧವಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಜಿ.ನಾಗರಾಜಪ್ಪ, ಉಪಾಧ್ಯಕ್ಷ ಪ್ರಕಾಶ್ ಗ್ರಾಪಂ ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಲಕ್ಷ್ಮಣ್ ರೆಡ್ಡಿ, ಗಂಗಾಧರಪ್ಪ, ಚಂದ್ರಪ್ಪ, ರಾಜಪ್ಪ, ದೇವೇಂದ್ರಪ್ಪ, ಚಂದ್ರಶೇಖರಪ್ಪ, ನಾಗರಾಜಪ್ಪ, ದೈಹಿಕ ಶಿಕ್ಷಣಧಿಕಾರಿ ಮಂಜುಳಾ, ಶಿಕ್ಷಕರಾದ ಮಲ್ಲಿಕಾರ್ಜುನ್, ಆನಂದ್ ನಾಯ್ಕ್, ರವೀಂದ್ರ, ಬಸವನಗೌಡ, ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಇದ್ದರು.ಕ್ರೀಡಾಕೂಟದಲ್ಲಿ ಕುಂಬಳೂರು, ದೇವರಬೆಳಕೆರೆ, ಬೂದಿಹಾಳು, ನಿಟ್ಟೂರು, ಕುಣೆಬೆಳಕೆರೆ ಮತ್ತು ಗುಳದಹಳ್ಳಿ ಪ್ರೌಢಶಾಲೆಗಳ ನೂರಾರು ಮಕ್ಕಳು ಕಬಡ್ಡಿ, ಥ್ರೋಬಾಲ್, ಬ್ಯಾಡ್ಮಿಂಟನ್ ಇತರೆ ಗುಂಪು ಆಟದಲ್ಲಿ ಭಾಗವಹಿಸಿದರು.
- - - -೨೨ಎಂಬಿಆರ್೧:ಗುಳದಹಳ್ಳಿಯಲ್ಲಿ ನಡೆದ ದೇವರಬೆಳಕೆರೆ ವಲಯಮಟ್ಟದ ಕ್ರೀಡಾಕೂಟದಲ್ಲಿ ಉಪನಿರ್ದೇಶಕ ಕೊಟ್ರೇಶ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.