ದುಶ್ಚಟಗಳಿಂದ ದೂರವಿರಲು ಕ್ರೀಡೆಗಳು ಪೂರಕ: ರಾಜೇಗೌಡ

| Published : Feb 03 2024, 01:51 AM IST

ಸಾರಾಂಶ

ಬಾಳೆಹೊನ್ನೂರು ಕ್ರಿಕೆಟ್ ಗೆಳೆಯರ ಬಳಗ ಗುರುವಾರ ಆಯೋಜಿಸಿದ್ದ 12ನೇ ವರ್ಷದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಸಮಾರೋಪದಲ್ಲಿ ಮಾತನಾಡಿದ ಕೆ.ಆರ್.ಇ.ಡಿ.ಎಲ್ ಅಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ ಯುವಜನರು ದುಶ್ಚಟಗಳಿಂದ ದೂರವಿರಲು ಕ್ರೀಡೆಗಳು ಪೂರಕವಾಗಿವೆ ಎಂದರು.

ಲೆದರ್‌ನಲ್ಲಿ ಪ್ಲೈ ವರ್ಲ್ಡ್ ವಾರಿಯರ‍್ಸ್ ತಂಡ ಚಾಂಪಿಯನ್

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಯುವಜನರು ದುಶ್ಚಟಗಳಿಂದ ದೂರವಿರಲು ಕ್ರೀಡೆಗಳು ಪೂರಕವಾಗಿವೆ ಎಂದು ಕೆ.ಆರ್.ಇ.ಡಿ.ಎಲ್ ಅಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಬಾಳೆಹೊನ್ನೂರು ಕ್ರಿಕೆಟ್ ಗೆಳೆಯರ ಬಳಗ ಗುರುವಾರ ಆಯೋಜಿಸಿದ್ದ 12ನೇ ವರ್ಷದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಸಮಾರೋಪದಲ್ಲಿ ಮಾತನಾಡಿದರು.

ಯುವಕರು ಸದಾ ಚೈತನ್ಯದ ಚಿಲುಮೆಯಂತೆ ಕಾರ್ಯನಿರ್ವಹಿಸಬೇಕು. ಕ್ರೀಡೆಗಳ ಆಯೋಜನೆ, ಸಾಮಾಜಿಕ ಚಟುವಟಿಕೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಸಕ್ರಿಯವಾಗಿರಬೇಕು. ಬದುಕಿನಲ್ಲಿ ಉತ್ತಮ ಆರೋಗ್ಯಕ್ಕೆ ಕ್ರೀಡೆಗಳಲ್ಲಿ ಭಾಗವಹಿ ಸುವುದು ಅಗತ್ಯ. ಆರೋಗ್ಯ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ರಾಜ್ಯ ಸರ್ಕಾರಿಂದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಬುಧವಾರ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ ತಕ್ಷಣ ನಿಗಮದ ಸಿಎಸ್ಆರ್ ನಿಧಿಯಲ್ಲಿ ಕೊಪ್ಪ ಒಳಾಂಗಣ ಕ್ರೀಡಾಂಗಣಕ್ಕೆ 1 ಕೋಟಿ ಅನುದಾನ ಕೂಡಲೇ ನೀಡುವಂತೆ ಆದೇಶಿಸಲಾಗಿದೆ. ಬಾಳೆಹೊನ್ನೂರು ಪಟ್ಟಣದಲ್ಲೂ ಕ್ರೀಡಾಂಗಣ ಅಭಿವೃದ್ಧಿಗೆ ಬದ್ಧವಿದ್ದು, ಎಲ್ಲರೂ ಒಗ್ಗೂಡಿ ಒಮ್ಮತದ ನಿರ್ಧಾರ ಕೈಗೊಂಡಲ್ಲಿ ಒಂದು ತಿಂಗಳೊಳಗೆ ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗುವುದು ಎಂದರು.

ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಮಾತನಾಡಿ, ಬಾಳೆಹೊನ್ನೂರಿನಲ್ಲಿ ಹಲವು ದಿನಗಳಿಂದ ಯುವಕರು, ಆಟಗಾರರು ಕ್ರೀಡಾಂಗಣದ ಬೇಡಿಕೆ ಇಡುತ್ತಿದ್ದು, ಇದು ಇನ್ನೂ ಸಹ ಈಡೇರಿಲ್ಲ. ಇಲ್ಲಿ ಅತ್ಯುತ್ತಮ ಪಂದ್ಯಾವಳಿ ಸದಾಕಾಲ ನಡೆಯು ತ್ತಿದ್ದು, ಶಾಸಕರು, ಯುವ ರಾಜಕಾರಣಿಗಳು ಉತ್ತಮ ಕ್ರೀಡಾಂಗಣ ನಿರ್ಮಾಣ, ಹಾಲಿ ಕ್ರೀಡಾಂಗಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ. ಹಿರಿಯರು, ಪುಟಾಣಿ ಮಕ್ಕಳಿಗಾಗಿ ಪಾರ್ಕ್ ವ್ಯವಸ್ಥೆ ಮಾಡಿಸಿ ವಾಯುವಿಹಾರ, ಆಟೋಟಗಳಿಗೆ ಅವಕಾಶ ಕಲ್ಪಿಸಬೇಕಿದೆ ಎಂದರು.

ಗೆಳೆಯರ ಬಳಗದ ವ್ಯವಸ್ಥಾಪಕ ಜಗದೀಶ್ ಅರಳೀಕೊಪ್ಪ ಮಾತನಾಡಿ, ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸುತ್ತಿದ್ದು, ಕ್ರೀಡಾಭಿಮಾನಿಗಳ ಸಹಕಾರ ಅಮೂಲ್ಯವಾಗಿದೆ. ಕುವೈಟ್‌ನ ಉದ್ಯಮಿ, ದಾನಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರ ಆಶಯದಂತೆ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ.

ಕ್ಲಿಫರ್ಡ್ ಸಿಕ್ವೇರಾ ಅವರ ಆಶಯದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸಹ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಪಂದ್ಯಾವಳಿ ನಡೆಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಓ.ಡಿ.ಸ್ಟೀಫನ್, ಯಜ್ಞಪುರುಷಭಟ್, ರವೀಂದ್ರಾಚಾರ್, ಯಜ್ಞಪುರುಷಭಟ್, ಕೆ.ಪ್ರಶಾಂತ್‌ಕುಮಾರ್ (ಕ್ರೀಡಾ ಕ್ಷೇತ್ರ), ಚೈತನ್ಯ ವೆಂಕಿ (ಸಾಹಿತ್ಯ ಕ್ಷೇತ್ರ), ಜಯಶ್ರೀ (ಶಿಕ್ಷಣ ಕ್ಷೇತ್ರ), ಸಚಿನ್‌ಕುಮಾರ್ (ಮಾಧ್ಯಮ ಕ್ಷೇತ್ರ), ಸರ್ಕಾರಿ ಪ್ರೌಢಶಾಲೆಯಿಂದ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಾಲೀಮ್, ರಮಿತಾ ಪೂಜಾರಿ, ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು.

ಪಂದ್ಯಾವಳಿಯಲ್ಲಿ ಪ್ಲೈ ವರ್ಲ್ಡ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಕೆಸಿಸಿ ಸನ್ ರೈಸ ರ್ಸ್‌ ತಂಡ ರನ್ನರ್‌ ಸ್ಥಾನ ಪಡೆಯಿತು. ಭಗತ್‌ಸಿಂಗ್ ಕ್ರಿಕೆಟರ್ಸ್ ಮೂರನೇ ಸ್ಥಾನ, ಸೀಕೆ ಬ್ರದರ್ಸ್ರ ತಂಡ ಚತುರ್ಥ ಸ್ಥಾನ ಪಡೆಯಿತು.

ಪಂದ್ಯಾವಳಿಯಲ್ಲಿ ಅಭಿಷೇಕ್ (ಪಂದ್ಯ ಪುರುಷೋತ್ತಮ, ಸರಣಿ ಶ್ರೇಷ್ಠ, ಬೆಸ್ಟ್ ಬೌಲರ್), ಶರತ್‌ಗೌಡ (ಬೆಸ್ಟ್ ಬ್ಯಾಟ್ಸ್ಮೆನ್), ನವೀನ್ ಅಕ್ಷರನಗರ (ಬೆಸ್ಟ್ ಕೀಪರ್), ಸಿಂಗಾಪುರ ಚಾಲೆಂರ‍್ಸ್ (ಬೆಸ್ಟ್ ಟೀಮ್) ಪ್ರಶಸ್ತಿ ಪಡೆದರು.

ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಕಸಾಪ ತಾಲೂಕು ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಕಾಫಿ ಬೆಳೆಗಾರ ಅನಿಲ್ ಕುಲಾಸೋ, ಎಂ.ವಿ.ಶ್ರೀನಿವಾಸಗೌಡ, ಗ್ರಾಪಂ ಸದಸ್ಯ ಇಬ್ರಾಹಿಂ ಶಾಫಿ, ಪ್ರಮುಖರಾದ ಎ.ಎಸ್.ಕೃಷ್ಣಪ್ಪ, ಎಸ್.ಎನ್.ನಾರಾಯಣಗೌಡ, ಸುರೇಂದ್ರ ಮಾಸ್ತರ್, ಮಂಜು ಕೋಟ್ಯಾನ್, ಪೂರ್ಣೇಶ್, ನಾಗರಾಜ್, ರಕ್ಷಿತ್ ಆಚಾರ್ಯ, ಹರೀಶ್‌ಪೂಜಾರಿ, ಅಹ್ಮದ್ ಆಲಿ, ಪ್ರವೀಣ್, ಪ್ರಶಾಂತ್, ಪ್ರಭಾಕರ್ ಮತ್ತಿತರರು ಇದ್ದರು. ೦೨ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಕ್ರಿಕೆಟ್ ಗೆಳೆಯರ ಬಳಗ ಆಯೋಜಿಸಿದ್ದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಪ್ಲೈ ವರ್ಲ್ಡ್ ವಾರಿಯರ‍್ಸ್ ತಂಡಕ್ಕೆ ಶಾಸಕ ಟಿ.ಡಿ.ರಾಜೇಗೌಡ ಟ್ರೋಫಿ ನೀಡಿದರು. ಭಾಸ್ಕರ್ ವೆನಿಲ್ಲಾ, ಜಗದೀಶ್ ಅರಳೀಕೊಪ್ಪ, ಸ್ಟೀಫನ್, ರಕ್ಷಿತ್, ಹರೀಶ್ ಇದ್ದರು.